ನವದೆಹಲಿ: ಪಕ್ಷಬಿಟ್ಟು, ತಂದೆ, ತಾತನ ಹೆಸರು ಬಳಸಿಕೊಳ್ಳದೇ ಕನಿಷ್ಠ ಜಿಲ್ಲಾ ಪಂಚಾಯತ್ ಚುನಾವಣೆ ಗೆದ್ದು ಆಮೇಲೆ ಬಂದು ನನಗೆ ಸಲಹೆ ನೀಡಲಿ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು, ನಿಖಿಲ್ ಕುಮಾರಸ್ವಾಮಿ ಅವರಿಗೆ ನೇರ ಸವಾಲು ಹಾಕಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಮೊನ್ನೆ ನನಗೆ ಸಲಹೆ ನೀಡಿದ್ದಾರೆ. ಮೂರು ವರ್ಷದಲ್ಲಿ ಏನು ಕೆಲಸ ಮಾಡಿದ್ದಾರೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ. ಕಿರಿಯರಾದರೂ ನಾನು ನಿಖಿಲ್ ಕುಮಾರಸ್ವಾಮಿ ಸಲಹೆಯನ್ನು ಪರಿಗಣಿಸುತ್ತೇನೆ. ನಾನು ಮಾಡಿದ ಕೆಲಸಗಳೇನು ಎಂದು ತಿಳಿದುಕೊಂಡು ಬಳಿಕ ಮಾತನಾಡಲಿ ಎಂದರು. ಇದನ್ನೂ ಓದಿ: ಆನ್‍ಲೈನ್ ಗೇಮ್ ನಿಷೇಧ ರದ್ದು: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ
ನಿಖಿಲ್ ಕುಮಾರಸ್ವಾಮಿ ನನಗೆ ಸಲಹೆ ನೀಡುವ ಮೊದಲು ಅವರು ಸಲಹೆ ನೀಡುವ ಅರ್ಹತೆ ಗಳಿಸಿಕೊಳ್ಳಬೇಕು. ಸೋತವರು ಗೆದ್ದವರಿಗೆ ಸಲಹೆ ನೀಡಬಾರದು. ಹೀಗಾಗಿ ನಾನು ಅವರಿಗೆ ಸವಾಲು ಹಾಕುತ್ತೇನೆ. ತಂದೆ ತಾತನ ಹೆಸರು ಬಳಸಿಕೊಳ್ಳದೇ ಜಿಲ್ಲಾ ಪಂಚಾಯತ್ ಗೆದ್ದು ತೋರಿಸಲಿ. ಆಮೇಲೆ ಬಂದು ನನಗೆ ಸಲಹೆ ನೀಡಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಆರ್.ಎನ್ ನಾಯಕ ಕೊಲೆ ಕೇಸ್ – ಭೂಗತಪಾತಕಿ ಬನ್ನಂಜೆ ರಾಜಾ ಸೇರಿ 9 ಆರೋಪಿಗಳು ದೋಷಿ
ನನಗೆ ಆತ್ಮಾವಲೋಕನ ಮಾಡಿಕೊಳ್ಳಲು ಸೂಚಿಸುವ ಮುನ್ನ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಚುನಾವಣೆ ಸಂದರ್ಭದಲ್ಲಿ ಅವರ ಪಕ್ಷದ ನಾಯಕರು ಏನೇಲ್ಲಾ ಮಾತನಾಡಿದ್ದಾರೆ. ಕೆಎಸ್‍ಆರ್ ಆಣೆಕಟ್ಟು ಮಾತನಾಡುವಾಗ ಅವರ ತಂದೆ ಏನು ಮಾತನಾಡಿದರು ನೆನಪಿಸಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.