ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಯಾವ ಜೋಡುತ್ತೆಗಳು ಗೆಲ್ಲುತ್ತವೆ ಎಂಬುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ನನ್ನ ಜೋಡೆತ್ತುಗಳ ಮುಂದೆ ಮೈತ್ರಿಯ ಎತ್ತುಗಳು ಏನು ಅಲ್ಲ ಎಂದು ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿ ಮತ್ತು ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಅಂಬರೀಶ್ ಅವರಿಗೆ ಪ್ರೀತಿ ನೀಡಿದ ಜನರನ್ನು ಬಿಟ್ಟು ನಾನು ಎಲ್ಲಿಯೂ ಹೋಗಲ್ಲ. ಸುಮಲತಾ ಒಂಟಿ ಹೆಣ್ಣಲ್ಲ, ಅಂಬರೀಶ್ ಮೇಲಿನ ಪ್ರೀತಿಯಿಂದ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಹಾಕಿಲ್ಲ. ಕ್ಷೇತ್ರದ ರೈತ ಸಂಘಗಳು ನನಗೆ ಬೆಂಬಲವನ್ನು ನೀಡಿವೆ. ಚುನಾವಣೆ ಅಖಾಡದಲ್ಲಿ ಸುಮಲತಾ ಹೆಸರಿನ ನೂರು ಅಭ್ಯರ್ಥಿಗಳನ್ನು ಹಾಕಿಕೊಳ್ಳಲಿ. ಸುಮಲತಾ ಹೆಸರಿನ ಮೂವರ ನಾಮಪತ್ರ ಹಾಕಿಸಿರೋದು ರಾಜಕೀಯ ಅಲ್ಲ ಕುತಂತ್ರ. ಈ ಕುತಂತ್ರದಿಂದ ಗೆಲ್ಲಬಹುದು ಲೆಕ್ಕ ಹಾಕಿದ್ದರೆ ಅದು ಕೇವಲ ಭ್ರಮೆ. ನಿಮ್ಮ ಈ ಕುತಂತ್ರಗಳಿಗೆ ಮಂಡ್ಯದ ಜನರ ಉತ್ತರ ನೀಡುವ ಕಾಲ ಬಂದಿದೆ. ಅವಶ್ಯವಿದ್ದರೆ ನಿಮ್ಮ ಅಭ್ಯರ್ಥಿಯ ಹೆಸರನ್ನು ಸಮಲತಾ ಎಂದು ಬದಲಿಸಿಕೊಳ್ಳಲಿ. ಇಂತಹ ಬೆದರಿಕೆಗಳಿಗೆ ನಾವು ಹೆದರಲ್ಲ ಎಂದು ಹೇಳುವ ಮೂಲಕ ಸಿಎಂ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ:ಮಂಡ್ಯದವರನ್ನು ದಡ್ಡರನ್ನಾಗಿ ಮಾಡ್ಬೇಡಿ, ಮುದಿ ಎತ್ತುಗಳನ್ನು ಸಂತೆಗೆ ಕಳಿಸ್ತೀವಿ: ಸಿಎಂಗೆ ಟಾಂಗ್ ವಿಡಿಯೋ
Advertisement
Advertisement
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಬ್ಬರನ್ನೊಬ್ಬರು ಬೈದುಕೊಂಡು ಓಡಾಡುತ್ತಿದ್ದವರು ಇಂದು ಜೊತೆಯಾಗಿ ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ. ಯಾರು ಕಳ್ಳೆತ್ತು? ಯಾರು ಉಳುಮೆ ಮಾಡುವ ಎತ್ತು ಎಂಬುದನ್ನು ಮಂಡ್ಯದ ಜನರು ಕೆಲವೇ ದಿನಗಳಲ್ಲಿ ಉತ್ತರ ನೀಡಲಿದ್ದಾರೆ. ಈ ರೀತಿಯ ನಿಮ್ಮ ಹೇಳಿಕೆಯಿಂದ ಯಶ್, ದರ್ಶನ್ ಹೆದರಿಕೊಳ್ಳಲ್ಲ. ನಿಮ್ಮ ಮಾತುಗಳಿಂದ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗುವ ಸ್ಫೂರ್ತಿ ಬಂದಿದೆ. ಶೂಟಿಂಗ್ ಶೆಡ್ಯೂಲ್ ಮುಗಿದ ನಂತರ ಏಪ್ರಿಲ್ 1 ಅಥವಾ 2ರಿಂದ ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ:ಸುಮಲತಾಗೆ ಬಿಗ್ ಶಾಕ್ ಕೊಟ್ಟ ದಳಪತಿಗಳು- ಮಂಡ್ಯದಲ್ಲಿ ಒಂದೇ ಹೆಸರಿನ 4 ಮಂದಿ ಸ್ಪರ್ಧೆ
Advertisement
Advertisement
ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ, ಅಕ್ಕಿಹೆಬ್ಬಾಳು, ಆಲಂಬಾಡಿ ಕಾವಲ್ ಭಾಗದಲ್ಲಿ ಸುಮಲತಾ ಅಂಬರೀಶ್ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು. ಈ ವೇಳೆ ಪುತ್ರ ಅಭಿಷೇಕ್ ಹಾಗೂ ಕೆಲ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಸುಮಲತಾರಿಗೆ ಸಾಥ್ ನೀಡಿದರು.