ಬೆಂಗಳೂರು: ಮುಂದಿನ ದಿನಗಳಲ್ಲಿ ಮಳೆ ಬರದಿದ್ದರೆ ಧರ್ಮಸ್ಥಳದ ಮಂಜುನಾಥ ದೇವರಿಗೆ ಅಭಿಷೇಕ ಮಾಡಲು ನೀರು ಇರುವುದಿಲ್ಲ ಎಂಬ ಸುದ್ದಿ ಕೇಳಿ ನನಗೆ ತುಂಬಾ ಬೇಸರವಾಯಿತು ಎಂದು ಸುಮಲತಾ ಅಂಬರೀಶ್ ಬೇಸರ ವ್ಯಕ್ತಪಡಿಸಿದ್ದಾರೆ.
‘ಅಮರ್’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ಮಳೆಯಾಗದಿದ್ದರೆ ಧರ್ಮಸ್ಥಳದಲ್ಲಿ ಅಭಿಷೇಕ ಮಾಡಲು ನೀರಿಲ್ಲ ಎಂಬ ಸುದ್ದಿಯನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಇದರಿಂದ ನನಗೆ ತುಂಬಾ ಬೇಸರವಾಯಿತು. ಆದರೆ ಇದಕ್ಕೆ ಸರ್ಕಾರವನ್ನು ದೂರಬಾರದು ಎಂದು ಹೇಳಿದರು.
Advertisement
Advertisement
ನಾವು ಯಾವಾಗಲೂ ಒಂದು ಸಮಸ್ಯೆ ಬಂದರೆ ಮಾತ್ರ ಅದಕ್ಕೆ ಪರಿಹಾರ ಹುಡುಕುತ್ತೇವೆ. ಆದರೆ ಸಮಸ್ಯೆ ಬರುವ ಮೊದಲೇ ಈ ರೀತಿ ಆಗಬಹುದು, ಅದಕ್ಕೆ ಏನು ಪರಿಹಾರ ಎಂಬುದನ್ನು ಯೋಚನೆ ಮಾಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ಧರ್ಮಸ್ಥಳ ಕ್ಷೇತ್ರಕ್ಕೂ ತಟ್ಟಿದ ನೀರಿನ ಅಭಾವದ ಬಿಸಿ
Advertisement
ಅನೇಕ ವರ್ಷಗಳ ಹಿಂದೆಯೇ ಪರಿಸರ ಪರಿಣಿತರೊಬ್ಬರು ಮಾತನಾಡುವಾಗ, ಅರಣ್ಯಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ. ಇದರಿಂದ ಪರಿಸರ ನಾಶವಾಗುತ್ತಿದೆ. ಪರಿಸರ ನಾಶವಾದರೆ ಮಳೆಯಾಗುವುದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ ಎಂದು ಹೇಳಿದ್ದರು. ಆದರೆ ನಾವು ಅವರ ಮಾತನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಆದರೆ ಈಗ ಅಯ್ಯೋ ನೀರು ನಿಂತು ಹೋಗಿದೆ. ಈಗ ಏನು ಮಾಡುವುದು ಎಂದು ಸಮಸ್ಯೆ ಬಂದಾಗ ಯೋಜನೆ ಮಾಡುವುದು ಬಹಳ ತಪ್ಪು. ಮುಂಜಾಗೃತಾ ಕ್ರಮವನ್ನು ತೆಗೆದುಕೊಳ್ಳಬೇಕು ಎಂದರು. ಇದನ್ನೂ ಓದಿ: 15 ದಿನ ಮಳೆ ಬರದಿದ್ದರೆ ಮಂಜುನಾಥನ ಅಭಿಷೇಕಕ್ಕೂ ನೀರಿಲ್ಲ: ಡಾ. ವೀರೇಂದ್ರ ಹೆಗ್ಗಡೆ
Advertisement
ನಾವು ಸರ್ಕಾರವೇ ಕಾರಣ ಎಂದು ಹೇಳಬಾರದು. ಇದಕ್ಕೆ ನಾವು ಏನೇ ಪರಿಹಾರ ಮಾಡಬೇಕೆಂದರೂ ಸಾರ್ವಜನಿಕರು ಮತ್ತು ಸರ್ಕಾರ ಇಬ್ಬರು ಒಟ್ಟಿಗೆ ಕೆಲಸ ಮಾಡಬೇಕು. ಹೀಗಾಗಿ ನಾವು ಪರಿಸರವನ್ನು ಕಾಪಾಡಬೇಕು. ಆಗ ಮಳೆ ಬರುತ್ತದೆ. ಇದರಿಂದ ನೀರಿನ ಸಮಸ್ಯೆ ಪರಿಹರಿಸಬಹುದು ಎಂದು ಸುಮಲತಾ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ನಂತರ ರಾಯರ ಮಂತ್ರಾಲಯಕ್ಕೂ ತಟ್ಟಿದ ಬರದ ಬಿಸಿ!