ಸುಮಲತಾ ದುರಹಂಕಾರದ ಮಾತನ್ನಾಡುತ್ತಿದ್ದಾರೆ: ಹೆಚ್‌ಡಿಕೆ ವಾಗ್ದಾಳಿ

Public TV
1 Min Read
HD Kumaraswamy 6

ಮಂಡ್ಯ: ಜೆಡಿಎಸ್ (JDS) ಮಂಡ್ಯ (Mandya) ಜಿಲ್ಲೆಯ ಜನತೆಯ ದಳ. ಇಂತಹ ಜೆಡಿಎಸ್ ಅನ್ನು ಧೂಳೀಪಟ ಮಾಡುತ್ತೇನೆ ಎಂದು ಕೆಲವರು ದುರಹಂಕಾರದಲ್ಲಿ ಹೇಳುತ್ತಾ ಇದ್ದಾರೆ ಎನ್ನುವ ಮೂಲಕ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಅವರ ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಭಾಷಣ ಮಾಡುವ ವೇಳೆ ಸುಮಲತಾ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಜನರಿಗಾಗಿ ಇರುವುದು ಜೆಡಿಎಸ್ ಪಕ್ಷ. ಇಂತಹ ಪಕ್ಷವನ್ನು ಯಾರು ಧೂಳೀಪಟ ಮಾಡುತ್ತೇನೆ ಎಂದು ಹೇಳಿದ್ದಾರೆ ಎಂದು ಜನರಿಗೆ ಗೊತ್ತು ಎಂದು ಕಿಡಿಕಾರಿದರು.

Sumalatha 4

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಮುಗಿಸಿದ್ದೇನೆ ಎಂದು ಹೇಳುತ್ತಾರೆ. ಇದಕ್ಕೆ ಉತ್ತರ ಮಂಡ್ಯ ಜಿಲ್ಲೆಯ ಜನರಿಂದ ನಾನು ಬಯಸುತ್ತಾ ಇದ್ದೇನೆ. ನನ್ನ ಕೈಯಲ್ಲಿ ಶಕ್ತಿ ಇಲ್ಲ, ನಮ್ಮದು ಸಣ್ಣ ಪಕ್ಷ. ರೈತರ ಈ ಪಕ್ಷವನ್ನು ಮುಗಿಸುತ್ತೇವೆ ಎಂದು ಸವಾಲು ಸ್ವೀಕಾರ ಮಾಡಿದ್ದಾರೆ. ನನಗೆ ಆಶ್ಚರ್ಯವಾಗಿದೆ ಕುಮಾರಣ್ಣ ಮಂಡ್ಯಗೆ ಬರ್ತಾರೆ ಎನ್ನುವುದು. ಯಾರು ಈ ಸುದ್ದಿಯನ್ನು ಹೊರಡಿಸಿದ್ದಾರೋ ಗೊತ್ತಿಲ್ಲ. ಈ ಸುದ್ದಿಯನ್ನು ಗಂಭೀರವಾಗಿ ತೆಗೆದುಕೊಂಡು, ಬರಲಿ ನಾನೇ ಅವರ ವಿರುದ್ಧ ಸ್ಪರ್ಧೆ ಮಾಡುತ್ತೇನೆ ಎನ್ನುವ ಮೂಲಕ ಉದ್ಧಟತನದ ಮಾತನ್ನು ಆಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿದ್ದು ಕುಟುಂಬದ ಮೂರನೇ ತಲೆಮಾರು ರಾಜಕೀಯ ಫೀಲ್ಡ್‌ಗೆ ಎಂಟ್ರಿ

ಕುಮಾರಣ್ಣ ಮಂಡ್ಯದಲ್ಲಿ ಬಂದು ನಿಲ್ಲಬೇಕಿಲ್ಲ. ಕುಮಾರಣ್ಣ ಮಂಡ್ಯ ಜಿಲ್ಲೆಯ ಜನರ ಮನಸ್ಸಿನಲ್ಲಿ ನೆಲೆಸಿದ್ದಾನೆ. ಮಂಡ್ಯ ಜನರಿಗೆ ದೇವೇಗೌಡರ ಕುಟುಂಬ ಮೋಸ ಮಾಡಿಲ್ಲ. ಜೆಡಿಎಸ್ ವಿರುದ್ಧ ಮಾತನಾಡುತ್ತಿರುವ ವ್ಯಕ್ತಿಯ ಪತಿಗೆ ಕಾಂಗ್ರೆಸ್ ತಿರಸ್ಕಾರ ಮಾಡಿದ್ದಾಗ ಗೌರವ ಕೊಟ್ಟಿದ್ದು ಜೆಡಿಎಸ್. ನಾನು ದುರಹಂಕಾರದ ಮಾತು ಆಡಲ್ಲ, ನಾನು ನಿಮ್ಮನ್ನು ನಂಬಿದ್ದೇನೆ. ನಮ್ಮ ಪಕ್ಷದ ಬಗ್ಗೆ ಮಾತನಾಡುವವರು ಸರ್ಟಿಫಿಕೇಟ್ ಕೊಡಲ್ಲ. ಮಂಡ್ಯದ ಜನರು ಸರ್ಟಿಫಿಕೇಟ್ ಕೊಡಬೇಕು. ಈ ಬಾರಿಯೂ ಮತ್ತೆ ಮಂಡ್ಯ ಜಿಲ್ಲೆಯಲ್ಲಿ 7 ಕ್ಷೇತ್ರದಲ್ಲಿ ಗೆಲ್ಲಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಅಮವಾಸ್ಯೆ ದಿನದಂದು ಸತೀಶ್‌ ಜಾರಕಿಹೊಳಿ‌ ನಾಮಪತ್ರ ಸಲ್ಲಿಕೆ

Share This Article