ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಜೆಡಿಎಸ್‍ನ ಟಾಪ್ ಲೀಡರ್ ಒಬ್ಬರು ನನ್ನನ್ನು ಸಂಪರ್ಕ ಮಾಡಿದ್ದರು ಎಂದು ಜೆಡಿಎಸ್ ವಿರುದ್ಧ ಆರೋಪ ಮಾಡಿದ್ದಾರೆ.
ಶ್ರೀರಂಪಟ್ಟಣದ ಕಾಳೇನಹಳ್ಳಿಯಲ್ಲಿ ಪ್ರಚಾರ ಮಾಡುವಾಗ ಸುಮಲತಾ ಅವರು, ಈ ಸಂದರ್ಭದಲ್ಲಿ ನಾನು ಈ ವಿಚಾರವನ್ನು ಈಗ ಹೇಳಬೇಕಾ ಅಥವಾ ಮುಂದೆ ಹೇಳಬೇಕಾ ಗೊತ್ತಾಗುತ್ತಿಲ್ಲ. ಜೆಡಿಎಸ್‍ನ ಟಾಪ್ ಲೀಡರ್ ಒಬ್ಬರು ನನ್ನ ಸಂಪರ್ಕ ಮಾಡಿದ್ದರು. ನನ್ನ ಫೋಟೋ ಮಾರ್ಫ್ ಮಾಡಿ ಏನ್ ಬೇಕಾದರೂ ಮಾಡುವುದಕ್ಕೆ ತಯಾರಿ ಮಾಡಿಕೊಂಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ಆದರೂ ಜೆಡಿಎಸ್ ಅವರು ನನ್ನ ಖಾಸಗಿ ಜೀವನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಪ್ಲಾನ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಫೋಟೋ ಮಾರ್ಫ್ ಮಾಡಿರುವ ವೀಡಿಯೊಗಳನ್ನ ನೀವು ನೋಡಿದರೂ ನೋಡಬಹುದು ಎಂದು ಜೆಡಿಎಸ್ ವಿರುದ್ಧ ಆರೋಪಿಸಿದ್ದಾರೆ.
Advertisement
Advertisement
ನಮ್ಮ ಸೋಶಿಯಲ್ ಮೀಡಿಯಾದಲ್ಲಿ ಕೆಲಸ ಮಾಡುವ ಇಬ್ಬರು ಹುಡುಗರನ್ನ ಸಂಪರ್ಕ ಮಾಡಿದ್ದಾರೆ. ಈ ರೀತಿಯಾಗಿ ಮಾಡಬೇಕು ಎಂದು ಹೇಳಿಕೊಟ್ಟಿದ್ದಾರೆ. ಜೊತೆಗೆ ಅವರಿಗೆ ಒಂದು ಸೈಟ್ ಹಾಗೂ 15 ಲಕ್ಷ ಕೊಡುವುದಾಗಿ ಆಮಿಷ ವೊಡ್ಡಿದ್ದಾರೆ. ಅಷ್ಟೇ ಅಲ್ಲದೇ ಫಾರೀನ್‍ಗೆ ಕಳಿಸುವುದಾಗಿ ಹುಡುಗರಿಗೆ ಹೇಳಿದ್ದಾರೆ. ನೀವು ಫಾರೀನ್‍ಗೆ ಹೋಗಿ. ಇಲ್ಲಿ ಯಾವುದೇ ಸಂದರ್ಭ ಬಂದರೂ ನಾವು ನಿಭಾಯಿಸುತ್ತೇವೆ ಎಂದು ಹೇಳಿದ್ದಾರೆ. ಈ ರೀತಿಯಾಗಿ ಜೆಡಿಎಸ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಕೆಳಮಟ್ಟಕ್ಕೆ ಇಳಿಯುವುದಕ್ಕೆ ರೆಡಿಯಾಗಿದ್ದಾರೆ ಎಂದು ಸುಮಲತಾ ಅವರು ಆರೋಪಿಸಿದ್ದಾರೆ.
Advertisement
ಈ ಎಲ್ಲ ಮಾಹಿತಿ ನನಗೆ ಅವರ ಕುಟುಂಬದವರು ಹೇಳಿದ್ದಾರೆ. ಜೆಡಿಎಸ್ ಅವರ ಇಂತಹ ಕೀಳುಮಟ್ಟದ ರಾಜಕೀಯವನ್ನು ನಾನು ನೋಡಿರಲಿಲ್ಲ. ಮುಂದಿನ ದಿನಗಳಲ್ಲಿ ನನ್ನ ಫೋಟೋ ಮಾರ್ಫ್ ಮಾಡಿ ರುವ ವಿಡಿಯೋಗಳ ಬರಬಹುದು. ನೋಡೋಣ ಏನು ಬರುತ್ತೊ ಅದನ್ನ ಫೇಸ್ ಮಾಡುವುದಕ್ಕೆ ನಾನು ರೆಡಿ ಇದ್ದೇನೆ ಎಂದು ಸುಮಲತಾ ಹೇಳಿದ್ದಾರೆ.