ನಿಯಮವನ್ನು ಅಧಿಕಾರಿಗಳು ಸೇರಿಸಿರಬಹುದು: ಮಾಜಿ ಮುಜರಾಯಿ ಸಚಿವೆ ಸುಮಾ ವಸಂತ್

Public TV
2 Min Read
Suma Vasant

ಮಡಿಕೇರಿ: ಹಿಂದೂಯೇತರರಿಗೆ ಹಿಂದೂ ದೇವಾಲಯಗಳ ವ್ಯಾಪಾರ ವಹಿವಾಟಿನ ಗುತ್ತಿಗೆ ನೀಡಬಾರದು ಎಂದು ನಿಯಮ ಮಾಡಿರುವುದು ನನಗೆ ಸರಿಯಾಗಿ ಗೊತ್ತಿಲ್ಲ ಎಂದು ಮಾಜಿ ಸಚಿವೆ ಮುಜರಾಯಿ ಖಾತೆಯ ಸಚಿವೆ ಸುಮಾ ವಸಂತ್ ಹೇಳಿದ್ದಾರೆ.

hijab karnataka bandh Temples in coastal Karnataka and Malnad region ban Muslim traders at annual fairs muzrai department rules 2

ಹಿಂದೂ ದೇವಾಲಯಗಳಲ್ಲಿ ಹಿಂದೂಯೇತರ ವರ್ತಕರಿಗೆ ಜಾಗ ನೀಡಬಾರದು ಎಂಬ ಸರ್ಕಾರ ನಿಯಮಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಗೆ ಅಂದಿನ ಎಸ್.ಎಂ. ಕೃಷ್ಣ ಕ್ಯಾಬಿನೆಟ್‍ನಲ್ಲಿ ಮುಜರಾಯಿ ಖಾತೆ ಸಚಿವೆಯಾಗಿದ್ದ ಸುಮಾವಸಂತ್ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಹಿಜಬ್‍ಗೂ ಪರೀಕ್ಷೆಗೂ ಸಂಬಂಧವಿಲ್ಲ, ತುರ್ತು ವಿಚಾರಣೆ ನಡೆಸಲ್ಲ: ಸುಪ್ರೀಂ

hijab karnataka bandh Temples in coastal Karnataka and Malnad region ban Muslim traders at annual fairs muzrai department rules 3

ಅಂದು 2001 ರಿಂದ 2004ರವರೆಗೆ ಮುಜರಾಯಿ ಇಲಾಖೆಯ ಸಚಿವೆಯಾಗಿ ಕೆಲಸ ಮಾಡಿದೆ. ಆದರೆ ಈ ಕಾಯ್ದೆ ರಚನೆಯಾಗಿರುವ ಬಗ್ಗೆ ನನಗೆ ಸರಿಯಾಗಿ ಗೊತ್ತಿಲ್ಲ. ಇದನ್ನು ಅಧಿಕಾರಿಗಳು ಸೇರಿಸಿರಬಹುದು. ಆದರೆ 2003 ರಲ್ಲಿ ರಾಜ್ಯದಲ್ಲಿ ಏಕರೂಪ ಕಾಯ್ದೆ ತಂದಿದ್ದೆವು. ರಾಜ್ಯ ಪುನರ್ ವಿಂಗಡನೆ ಪೂರ್ವದಲ್ಲಿದ್ದ ನಿಯಮಗಳಿಗೆ ತಿದ್ದುಪಡಿ ತಂದಿದ್ದೆವು. ಅದರಲ್ಲಿ ಹಿಂದೂಯೇತರರಿಗೆ ಅವಕಾಶವಿಲ್ಲ ಎಂಬ ನಿಯಮ ಮಾಡಿದ್ದೆವು. ಇದು ಕೂಡ ಕಾನೂನು ಇಲಾಖೆಯಲ್ಲಿ ಚರ್ಚಿಸಿ ಎರಡು ಸದನದಲ್ಲಿ ಒಪ್ಪಲಾಗಿತ್ತು. ಆದರೆ 2002ರಲ್ಲಿ ಆಗಿರುವ ನಿಯಮ ನನಗೆ ಗೊತ್ತಿಲ್ಲ. ಹಿಂದೂಯೇತರರಿಗೆ ಅಂದರೆ ಜೈನ, ಸಿಖ್, ಬೌದ್ಧ ಧರ್ಮಿಯರಿಗೆ ಅನ್ವಯಿಸುವುದಿಲ್ಲ ಎಂದು ನಿಯಮ ರಚಿಸಲಾಗಿತ್ತು. ಆದರೆ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ತಾಲೂಕು ಆಡಳಿತಗಳು ನಿಯಮ ಮಾಡುತ್ತವೆ. ಹಾಗೆ ಏನಾದರೂ ಮಾಡಿಕೊಂಡಿರಬಹುದು ಎಂದರು.

hijab karnataka bandh Temples in coastal Karnataka and Malnad region ban Muslim traders at annual fairs muzrai department rules 1

ಈ ಹಿಂದಿನಿಂದಲೂ ಹಿಂದೂ ದೇವಾಲಯಗಳಲ್ಲಿ ಮುಸ್ಲಿಂ ಎಲ್ಲರೂ ಸೌಹಾರ್ದತೆಯಿಂದ ವ್ಯಾಪಾರ ವಹಿವಾಟು ಮಾಡುತ್ತಿದ್ದರು. ಅಂದಿನಿಂದ ವ್ಯಾಪಾರ ವಹಿವಾಟಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಹಿಂದಿನಿಂದಲೂ ಸೌಹಾರ್ದತೆಯಿಂದ ನಡೆಯುತ್ತಿತ್ತು. ಹಾಗೇನಾದರೂ ಸಮಸ್ಯೆಗಳಿದ್ದರೆ ಈಗಲೂ ಅವರದೇ ಸರ್ಕಾರವಿದೆ. ಸಮಸ್ಯೆಯನ್ನು ಸರಿಮಾಡಿ ಶಾಂತಿ ಕಾಪಾಡಬಹುದಿತ್ತು. ಆದರೆ ಈಗ ಚುನಾವಣಾ ಕಾರಣಕ್ಕೆ ಶಾಂತಿ ಕದಡುವ ಕೆಲಸ ಬಿಜೆಪಿ ಹಾಗೂ ಸಂಘ ಪರಿವಾರದವರಿಂದ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ನಿಯಮ ಏನಿದೆ?
ಮುಸ್ಲಿಮರಿಗೆ ಅಂಗಡಿ ಹಾಕಲು ಅವಕಾಶ ನಿರಾಕರಿಸುತ್ತಿರುವ ದೇಗುಲದ ಆಡಳಿತ ಮಂಡಳಿಗಳು, 2002ರಲ್ಲಿ ರೂಪಿಸಲಾದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಯ ನಿಯಮವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿವೆ. ಧಾರ್ಮಿಕ ದತ್ತಿ ಇಲಾಖೆಯ ನಿಯಮಾವಳಿ ಪುಸ್ತಕದ ಪುಟ ಸಂಖ್ಯೆ 446ರಲ್ಲಿರುವ 12 ನಿಯಮದಲ್ಲಿ, ಸಂಸ್ಥೆಯ ಸಮೀಪದ ಜಮೀನು ಕಟ್ಟಡ ಮತ್ತು ನಿವೇಶನಗಳೂ ಸೇರಿದಂತೆ ಯಾವುದೇ ಸವತ್ತನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡತಕ್ಕದಲ್ಲ ಎಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಕರ್ನಾಟಕದ ಗಣಿಗಾರಿಕೆ ಪ್ರಕರಣಗಳ ವಿಚಾರಣೆಗೆ ವಿಶೇಷ ಪೀಠ ರಚನೆ – ಸುಪ್ರೀಂಕೋರ್ಟ್

hijab karnataka bandh Temples in coastal Karnataka and Malnad region ban Muslim traders at annual fairs muzrai department rules

ಇದೀಗ ಇದೇ ನಿಯಮವನ್ನು ನಾವು ಜಾರಿ ಮಾಡಿದ್ದೇವೆ ಎಂದು ಹಿಂದೂ ಸಂಘಟನೆಗಳು ಹೇಳುತ್ತಿದೆ. ಹಿಂದೂ ಸಂಘಟನೆಗಳು ಈ ನಿಯಮವನ್ನು ಮುಂದಿಟ್ಟುಕೊಂಡು ದೇವಾಲಯದ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿ ಹಿಂದೂಯೇತರ ವ್ಯಕ್ತಿಗಳಿಗೆ ಅನುಮತಿ ನೀಡದಂತೆ ಮನವಿ ಮಾಡುತ್ತಿದೆ. ಈ ನಿಯಮ ಜಾರಿಯಾಗಿದ್ದು 2002ರಲ್ಲಿ. ಈ ವೇಳೆ ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇದ್ದಿದ್ದು ಎಸ್‍ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ. ಇಂದು ಅದೇ ಕಾಂಗ್ರೆಸ್ಸಿಗರು ಇದು ಸರಿಯಲ್ಲ ಎನ್ನುತ್ತಿದ್ದಾರೆ.

ಹಿಜಬ್ ವಿವಾದ ಸೃಷ್ಟಿಯಾಗುವರೆಗೂ ಈ ನಿಯಮ ಇದೆ ಎನ್ನುವುದು ಬಹುತೇಕ ಮಂದಿಗೆ ತಿಳಿದಿರಲಿಲ್ಲ. ಅಷ್ಟೇ ಅಲ್ಲದೇ ಕರಾವಳಿ ಭಾಗದಲ್ಲಿ ಹಿಂದೂ ದೇವಾಲಯಗಳಲ್ಲಿ ಇಲ್ಲಿಯವರೆಗೂ ಮುಸ್ಲಿಮ್ ವ್ಯಾಪಾರಿಗಳು ಅಂಗಡಿಗಳನ್ನು ತೆರೆಯುತ್ತಿದ್ದರು. ಆದರೆ ಹಿಜಬ್ ವಿವಾದ, ಕರ್ನಾಟಕ ಬಂದ್ ಬಳಿಕ ಕರಾವಳಿಯ ಹಿಂದೂ-ಮುಸ್ಲಿಂ ಸಾಮರಸ್ಯದಲ್ಲಿ ಮತ್ತಷ್ಟು ಬಿರುಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *