ಚಾಮರಾಜನಗರ: ಸುಳ್ವಾಡಿ ಮಾರಮ್ಮನ ಪ್ರಸಾದ ದುರಂತ ಪ್ರಕರಣಕ್ಕೆ ಬಿಗ್‍ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಸಂಬಂಧ ಸಾಲೂರು ಮಠದ ಇಮ್ಮಡಿ ಮಹದೇವ ಶ್ರೀಗಳನ್ನು ಪೊಲೀಸರು ಕೊಳ್ಳೇಗಾಲದ ಮಠದಿಂದ ವಶಕ್ಕೆ ಪಡೆದಿದ್ದಾರೆ.
ಈಗಾಗಲೇ ಪೊಲೀಸರ ವಶದಲ್ಲಿರುವ ಮ್ಯಾನೇಜರ್ ಮಾದೇಶ್ ಪತ್ನಿ ಅಂಬಿಕಾರನ್ನು ವಶಕ್ಕೆ ಪಡೆದಿದ್ದ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಅಂಬಿಕಾ, ದೇವಾಲಯ ಆಡಳಿತ ಮಂಡಳಿ ಮತ್ತು ಟ್ರಸ್ಟಿಗಳ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಮಾಹಿತಿ ನೀಡಿದ್ದಾಳೆ ಎನ್ನುವ ಮಾಹಿತಿ ಸಿಕ್ಕಿದೆ. ಅಲ್ಲದೆ ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮಿ ಕೈವಾಡವಿರುವ ಬಗ್ಗೆ ಬಾಯ್ಬಿಟ್ಟಿದ್ದಾಳೆ ಎನ್ನುವ ವಿಚಾರ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಪ್ರಸಾದದಲ್ಲಿ ವಿಷ ಕೇಸ್: ಅಂದು ಕೂಲಿ ಕಾರ್ಮಿಕ -ಇಂದು ಐಷಾರಾಮಿ ಮನೆಯ ಒಡೆಯ!
Advertisement
Advertisement
ಈ ವಿಚಾರ ಗೊತ್ತಾದ ಕೂಡಲೇ ಪೊಲೀಸರು ಸಾಲೂರು ಮಠದತ್ತ ತೆರಳಿದ್ದರು. ಆದರೆ ಮಹದೇವಸ್ವಾಮಿ ಅಲ್ಲಿರಲಿಲ್ಲ. ಬಳಿಕ ಸ್ವಾಮೀಜಿ ಕೊಳ್ಳೇಗಾಲದ ಸಂಸ್ಕೃತ ಪಾಠ ಶಾಲೆಯಲ್ಲಿ ಇರುವ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಅಲ್ಲಿಗೆ ತೆರಳಿ ತೀವ್ರ ವಿಚಾರಣೆಯ ಬಳಿಕ ವಶಕ್ಕೆ ಪಡೆದರು. ಇದನ್ನೂ ಓದಿ:ತಾಯಿ ಮೃತಪಟ್ಟ ಮರುದಿನವೇ ಪರೀಕ್ಷೆ ಬರೆದ ಮೂವರು ಮಕ್ಕಳು – ಮನಕಲಕುವ ದೃಶ್ಯ
Advertisement
ಇದರ ಬೆನ್ನಲ್ಲೇ ದೇವಸ್ಥಾನದ ಟ್ರಸ್ಟಿ ಚಿನ್ನಪ್ಪಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ನಾಲ್ವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಆದರೆ ಅವರನ್ನು ಎಲ್ಲಿಗೆ ಕರೆದೊಯ್ದಿದ್ದಾರೆ ಎನ್ನುವುದು ಮಾತ್ರ ಇನ್ನೂ ಖಚಿತವಾಗಿಲ್ಲ. ಈವರೆಗೆ ಒಟ್ಟು 10 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವರಲ್ಲಿ ಟ್ರಸ್ಟಿಗಳು, ಇಬ್ಬರು ಚಾಲಕರೂ ಸೇರಿದ್ದಾರೆ. ಇದನ್ನೂ ಓದಿ:ಪಬ್ಲಿಕ್ ಟಿವಿ ವರದಿ ನಂತ್ರ ಎಚ್ಚೆತ್ತ ಪುಟ್ಟರಂಗ ಶೆಟ್ಟಿ – ಮೃತರ ಮನೆಗಳಿಗೆ ಹೋಗಿ ಪರಿಹಾರ ವಿತರಣೆ
Advertisement
ಎರಡನೇ ಬಾರಿ ವಿಚಾರಣೆ:
ಭಾನುವಾರ ಕೊಳ್ಳೇಗಾಲದ ಸಾಲೂರು ಮಠದ ಐಟಿಐ ಕಾಲೇಜಿನಲ್ಲಿ ಇಮ್ಮಡಿ ಮಹದೇವ ಸ್ವಾಮೀಜಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಮೊದಲ ಹಂತದ ವಿಚಾರಣೆ ಬಳಿಕ ಇಮ್ಮಡಿ ಮಹದೇವ ಸ್ವಾಮೀಜಿ ಸೋಮವಾರ ರಾತ್ರಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಧಿಕ ರಕ್ತದೊತ್ತಡ ಇತ್ತು ಅಂತ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ಸ್ವಾಮೀಜಿ, ಬುಧವಾರ ಬೆಳಗ್ಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠಕ್ಕೆ ವಾಪಸ್ ಆಗಿದ್ದರು. ಸ್ವಾಮೀಜಿಯವರ ಈ ನಡೆ ಅಲ್ಲಿನ ಜನಸಾಮಾನ್ಯರಲ್ಲಿ ಅನುಮಾನ ಉಂಟು ಮಾಡಿತ್ತು. ಕಿರಿಯ ಸ್ವಾಮೀಜಿಯಾಗಿದ್ದ ಇಮ್ಮಡಿ ಮಹದೇವ ಸ್ವಾಮೀಜಿಯವರು ಮಾರಮ್ಮ ದೇವಸ್ಥಾನದ ಪ್ರತಿ ಸಣ್ಣ ಕಾರ್ಯಕ್ರಮದಲ್ಲೂ ಭಾಗಿಯಾಗುತ್ತಿದ್ದರು. ಆದ್ರೆ ದುರಂತ ನಡೆದ ಕಾರ್ಯಕ್ರಮದಂದು ನಾನು ಬರಲ್ಲ. ನೀವೇ ಕಾರ್ಯಕ್ರಮ ಮಾಡಿ ಅಂತ ಹೇಳಿ ಗೈರಾಗಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv