Connect with us

Chamarajanagar

ಸುಳ್ವಾಡಿ ವಿಷಪ್ರಸಾದ ದುರಂತ- ಪೊಲೀಸರ ನಡೆಯ ಬಗ್ಗೆ ಎದ್ದಿದೆ ಅನುಮಾನ

Published

on

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷಪ್ರಸಾದ ಸೇವಿಸಿ 15 ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಇದೀಗ ಪೊಲೀಸರು ನಾಲ್ವರನ್ನು ಜೈಲಿಗಟ್ಟಿದ್ದಾರೆ.

ರಾತ್ರೋರಾತ್ರಿ ಆರೋಪಿಗಳನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ಈ ಬೆನ್ನಲ್ಲೇ ಜೈಲಿಗಟ್ಟಿದ್ದಾರೆ. ಇದೀಗ ಪೊಲೀಸರ ಈ ನಡೆಯ ಬಗ್ಗೆ ತೀವ್ರ ಅನುಮಾನ ಸೃಷ್ಟಿಯಾಗಿದೆ. ಇದನ್ನೂ ಓದಿ: ಪೊಲೀಸರೇ ನಮ್ಮ ಮನೆಯಲ್ಲಿ ವಿಷ ಇಟ್ಟಿದ್ದಾರೆ – ವಿಷಜಂತು ಅಂಬಿಕಾ ಹೈಡ್ರಾಮ

ಪೊಲೀಸರ ನಡೆಯಿಂದ ಎದ್ದಿರುವ ಪ್ರಶ್ನೆಗಳೇನು?:
10 ದಿನ ಕಸ್ಟಡಿಗೆ ಕೇಳಿದ್ದ ಪೊಲೀಸರು ಕೇವಲ 2 ದಿನದಲ್ಲಿ ತನಿಖೆ ಮುಗಿಸಿದ್ದು ಹೇಗೆ?. ಅಂಬಿಕಾಳ ನಡೆ ಪೊಲೀಸರಿಗೆ ಭಯ ತರಿಸಿದೆಯೇ? ಜಿಲ್ಲಾ ಪೊಲೀಸರಿಂದ ನನಗೆ ನ್ಯಾಯ ಸಿಗೋದಿಲ್ಲ ಎಂಬ ಹೇಳಿಕೆ ಪೊಲೀಸರಿಗೆ ನಡುಕ ಹುಟ್ಟಿಸಿದೆಯೇ ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಅಂಬಿಕಾಳ ಬಳಿ ಅಧಿಕಾರಿಗಳು, ರಾಜಕೀಯ ಮುಖಂಡರು ಮತ್ತು ಮಠಾಧೀಶರ ಮಹತ್ತರವಾದ ದಾಖಲೆಗಳಿರುವುದು ನಿಜನಾ. ಯಾಕಂದ್ರೆ ಪದೇ ಪದೇ ಅಂಬಿಕಾ ಮಾಧ್ಯಮದವರ ಮುಂದೆ ಬಂದ್ರೆ ಅಕ್ರಮಗಳನ್ನ ಬಾಯಿ ಬಿಡುವಳೇ ಎಂಬ ಅನುಮಾನ ಪೊಲೀಸರಿಗಿದೆಯೇ ಅನ್ನೋ ಪ್ರಶ್ನೆಯೂ ಮೂಡಿದೆ. ಇದನ್ನೂ ಓದಿ: ಸುಳ್ವಾಡಿ ಕೇಸ್ – ಅಂಬಿಕಾ ಬಳಿಕ ಪೊಲೀಸರ ಮುಂದೆ ವಿಷಸ್ವಾಮಿ ನಾಟಕ!

ಇಂದು ಮದ್ಯಾಹ್ನವರೆಗೆ ಕಾಲಾವಕಾಶವಿದ್ದರೂ ಮಧ್ಯರಾತ್ರಿ ಹಾಜರಿಪಡಿಸಿದ ಮರ್ಮ ಏನು? ಅಂಬಿಕಾ ಬಳಿ ಇರುವ ಕೆಲವು ದಾಖಲೆ ಪೊಲೀಸರ ಬಳಿಯೂ, ಕೆಲವು ದಾಖಲೆಗಳು ಆಕೆರ ಆಪ್ತರ ಬಳಿ ಇದೆಯೇ? ಅಂಬಿಕಾ ಸಿಬಿಐ ತನಿಖೆ ಕೇಳೋದಾದರೂ ಏಕೆ? ತನ್ನ ಬಳಿ ಇರುವ ದಾಖಲಾತಿಯನ್ನ ಜಿಲ್ಲಾ ಪೊಲೀಸರಿಗೆ ನೀಡಿದರೆ ನಾಶಪಡಿಸುವ ಸಾಧ್ಯತೆ ಇದೆಯೇ ಎಂಬ ಅನುಮಾನ ಇದೆಯೇ? ಸಿಬಿಐ ಮುಂದೆ ಶರಣು ಪಡಿಸಿದರೆ ಅಧಿಕಾರಿಗಳು ಮತ್ತು ರಾಜಕಾರಣಿಗಳ ಮತ್ತೊಂದು ಮುಖ ಕಳಚಿ ಬೀಳಲಿದೆಯೇ ಅನ್ನೋ ಪ್ರಶ್ನೆಗಳ ಸುರಿಮಳೆಯೇ ಇದೀಗ ಎದ್ದಿದೆ. ಇದನ್ನೂ ಓದಿ: ಮಾರಮ್ಮ ದೇವಸ್ಥಾನದ ದುರಂತ – ಆರೋಪಿಗಳು ಜೈಲಿಗೆ ಶಿಫ್ಟ್

https://www.youtube.com/watch?v=Ejrz4lVX5-4

 ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *