– ಜಾಮೀನು, ಪ್ರಕರಣ ವಿಚಾರಣೆ ಜ.29ಕ್ಕೆ
ಚಾಮರಾಜನಗರ: ಸುಳ್ವಾಡಿಯ ಮಾರಮ್ಮ ದೇವಿ ಪ್ರಸಾದಕ್ಕೆ ವಿಷಬೆರೆಸಿ 17 ಜನ ಅಮಾಯಕರನ್ನು ಬಲಿ ಪಡೆದ ಪ್ರಕರಣದ ಎ1 ಆರೋಪಿ ಇಮ್ಮಡಿ ಮಹದೇವಸ್ವಾಮಿ ಪರ ವಕಾಲತ್ತು ವಹಿಸಲು ಮಡಿಕೇರಿ ಮೂಲದ ವಕೀಲರು ಮುಂದಾಗಿದ್ದಾರೆ.
ಮಡಿಕೇರಿ ಮೂಲದ ವಕೀಲ ಅಪ್ಪಣ್ಣ, ತಮ್ಮ ಕಿರಿಯ ವಕೀಲರಾದ ಸುದೇಶ್ ಹಾಗೂ ಲೋಹಿತ್ ಎಂಬವರ ಮೂಲಕ ಇಂದು ಇಮ್ಮಡಿ ಮಹದೇವಸ್ವಾಮಿ ಪರ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಚಾಮರಾಜನಗರ ಜಿಲ್ಲಾ ನ್ಯಾಯಲಯದಲ್ಲಿ ಜನವರಿ 29ಕ್ಕೆ ನಡೆಯುವ ವಿಚಾರಣೆ ಮುನ್ನವೇ ಜಾಮೀನು ನೀಡುವಂತೆ ಮನವಿ ಸಲ್ಲಿಸಿದ್ದರು. ಆದರೆ ಜಿಲ್ಲಾ ನ್ಯಾಯಾಧೀಶರ ಮುಂದೆ ಇಂದು ಮಧ್ಯಾಹ್ನ ಅರ್ಜಿ ಬರುತ್ತಿದ್ದಂತೆ, ಅದಕ್ಕೆ ತಕರಾರು ಅರ್ಜಿ ಸಲ್ಲಿಸಲು ಸರ್ಕಾರಿ ಅಭಿಯೋಜಕರು ಕಾಲಾವಕಾಶ ಕೇಳಿದ್ದಾರೆ. ಇದನ್ನು ಓದಿ: ವಿಷ ಪ್ರಸಾದ ಪ್ರಕರಣ- ದೇವಸ್ಥಾನದ ಆವರಣದಲ್ಲಿ ಭಕ್ತೆಯ ಗೋಳಾಟ
Advertisement
Advertisement
ಸರ್ಕಾರಿ ಅಭಿಯೋಜಕರು ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಜನವರಿ 29ರಂದು ಪ್ರಕರಣದ ವಿಚಾರಣೆ ಜೊತೆಗೆ ಜಾಮೀನು ವಿಚಾರಣೆ ನಡೆಸಲಾಗುತ್ತದೆ ಎಂದು ನ್ಯಾಯಾಧೀಶರಾದ ಬಸವರಾಜು ತಿಳಿಸಿದ್ದಾರೆ. ಈ ಮಧ್ಯೆ ಆರೋಪಿಗಳ ಪರ ವಕಾಲತ್ತು ವಹಿಸಬಾರದೆಂಬ ತಮ್ಮ ನಿರ್ಣಯ ಬೆಂಬಲಿಸುವಂತೆ ಮಡಿಕೇರಿ ವಕೀಲರಿಗೆ ಮನವಿ ಸಲ್ಲಿಸಲು ಚಾಮರಾಜನಗರ ವಕೀಲರ ಸಂಘ ನಿರ್ಧರಿಸಿದೆ. ಇದನ್ನು ಓದಿ: ಅಂಬಿಕಾ ಮನೆ ಬಾಡಿಗೆಯಲ್ಲೂ ಮಧ್ಯಸ್ಥಿಕೆ ವಹಿಸಿದ್ದ ಇಮ್ಮಡಿ ಮಹದೇವ ಸ್ವಾಮೀಜಿ
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv