BollywoodCinemaLatestNational

ಭಯ ಹುಟ್ಟಿಸುತ್ತಿದೆ ಅಲ್ಲಾವುದ್ದೀನ್ ಖಿಲ್ಜಿಯ ಫಸ್ಟ್ ಲುಕ್!

ಮುಂಬೈ: ಬಾಲಿವುಡ್ ನ ಬಹು ನಿರೀಕ್ಷಿತ `ಪದ್ಮಾವತಿ’ ಸಿನಿಮಾದ ರಣ್‍ವೀರ್ ಸಿಂಗ್ ಅವರ ಅಲ್ಲಾವುದ್ದೀನ್ ಖಿಲ್ಜಿಯ ಪಾತ್ರದ ಫಸ್ಟ್ ಲುಕ್ ಔಟ್ ಆಗಿದೆ. ಈ ಮೊದಲು ದೀಪಿಕಾ ಮತ್ತು ಶಾಹಿದ್ ಫಸ್ಟ್ ಲುಕ್ ಮಾತ್ರ ಬಿಡುಗಡೆಗೊಂಡಿತ್ತು.

ಸಿನಿಮಾದಲ್ಲಿ ಭಗ್ನ ಪ್ರೇಮಿಯಾಗಿ ರಣ್‍ವೀರ್ ಕಾಣಿಸಿಕೊಳ್ಳುತ್ತಿದ್ದಾರೆ. ರಣ್‍ವೀರ್ ಸಿನಿಮಾಗಾಗಿ ಸಂಪೂರ್ಣವಾಗಿ ಅಲ್ಲಾವುದ್ದೀನ್ ಖಲ್ಜಿಯಾಗಿ ಬದಲಾಗಿದ್ದಾರೆ. ಒಟ್ಟು ಎರಡು ಫೋಟೋಗಳು ಚಿತ್ರತಂಡ ಹೊರತಂದಿದೆ. ಒಂದರಲ್ಲಿ ಕಿರೀಟ, ಆಭರಣಗಳನ್ನು ಧರಿಸಿರುವ ರಣ್‍ವೀರ್ ತುಂಬಾ ವಿಭಿನ್ನ ಲುಕ್ ನಲ್ಲಿ ಕಾಣಸಿಗುತ್ತಾರೆ. ಫೋಟೋ ಮುಖಾಂತರವೇ ರಣ್‍ವೀರ್ ಎಷ್ಟೂ ಭಯಬೀಳಸಲಿದ್ದಾರೆ ಎಂದು ಹೇಳಬಹುದಾಗಿದೆ.

ಇನ್ನೂ ಎರಡನೇ ಫೋಟೋದಲ್ಲಿ ಕೊಳವೊಂದರಲ್ಲಿ ಸ್ನಾನ ಮಾಡುತ್ತಿರುವ ಅಲ್ಲಾವುದ್ದೀನ್ ಖಿಲ್ಜಿಯನ್ನು ನೋಡಬಹುದು. ಈ ಫೋಟೋದಲ್ಲಿ ರಣ್‍ವೀರ್ ಕಣ್ಣುಗಳು ನಿಜಕ್ಕೂ ಒಂದು ಸಾರಿ ಭಯ ಬೀೀಳುವಂತೆ ಮಾಡುತ್ತದೆ.

ಡಿಸೆಂಬರ್ 1ರಿಂದು ಸಿನಿಮಾ ದೇಶಾದ್ಯಂತ ತೆರೆಕಾಣಲಿದೆ. ಸಿನಿಮಾದಲ್ಲಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ, ಮಹಾ ರಾವಲ್ ರತನ್‍ಸಿಂಗ್ ರಾಜನ ಪಾತ್ರದಲ್ಲಿ ಶಾಹಿದ್ ಕಪೂರ್ ಮತ್ತು ಅಲ್ಲಾವುದ್ದೀನ್ ಖಿಲ್ಜಿಯಾಗಿ ರಣ್‍ವೀರ್ ಕಾಣಿಸಿಕೊಂಡಿದ್ದಾರೆ.

https://twitter.com/deepikapadukone/status/910673498376364033

https://twitter.com/deepikapadukone/status/910668862336544768

Related Articles

Leave a Reply

Your email address will not be published. Required fields are marked *