ಬಿಜೆಪಿ ಸರಕಾರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಟೀಕಿಸುವ ಭರದಲ್ಲಿ ಪುನೀತ್ ರಾಜ್ ಕುಮಾರ್ ನಿಧನವನ್ನು ಅಣಕಿಸುವ ರೀತಿಯಲ್ಲಿ ಟ್ವಿಟ್ ಮಾಡಿದ್ದಾರೆ ಎಂದು ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಚಿಂತಕ ಚಕ್ರವತಿ ಸೂಲಿಬೆಲೆ ವಿರುದ್ಧ ಗರಂ ಆಗಿದ್ದಾರೆ. ಪುನೀತ್ ನಿಧನರಾದಾಗ ಮುಖ್ಯಮಂತ್ರಿಗಳು ಮೂರು ದಿನಗಳ ಸಮಯವನ್ನು ಅವರಿಗಾಗಿ ವ್ಯಯಿಸಿದರು ಎಂದು ಲೇವಡಿ ರೂಪದಲ್ಲಿ ಸೂಲಿಬೆಲೆ ಟ್ವಿಟ್ ಮಾಡಿದ್ದಾರೆ ಎಂದು ಅಭಿಮಾನಿಗಳು ಆರೋಪಿಸಿದ್ದರು.
Advertisement
ತಮ್ಮದೇ ಪಕ್ಷದ ಶಾಸಕರ ಫೈಲ್ಸ್ ಗೆ ಸಹಿ ಮಾಡಲು ಮುಖ್ಯಮಂತ್ರಿಗಳಿಗೆ ಸಮಯದ ಅಭಾವಿದೆ ಎಂದು ಪಕ್ಷದವರೇ ಟೀಕಿಸಿದ್ದಾರೆ. ಆದರೆ, ಮುಖ್ಯಮಂತ್ರಿಗಳಿಗೆ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಮಯವಿದೆ. ಪ್ರಿಮಿಯರ್ ಶೋ ಅಟೆಂಡ್ ಮಾಡಿ, ಸಿನಿಮಾ ನೋಡಿ ಕಣ್ಣೀರು ಹಾಕಲು ಸಮಯವಿದೆ. ನಟನೊಬ್ಬನು ನಿಧನರಾದಾಗ ಮೂರು ದಿನಗಳ ಕಾಲ ಸಮಯ ಕೊಟ್ಟಿದ್ದಾರೆ. ಮುಂದೆ ವಿಕ್ರಾಂತ್ ರೋಣ ಸಿನಿಮಾವನ್ನೂ ಅವರು ನೋಡಲಿದ್ದಾರೆ ಎಂದು ಟ್ವಿಟ್ ಮಾಡಿದ್ದಾರೆ. ಇದು ಅಪ್ಪು ಅಭಿಮಾನಿಗಳನ್ನು ಕೆರಳಿಸಿತ್ತು.
Advertisement
ಈ ಟ್ವೀಟ್ ಪುನೀತ್ ಅವರನ್ನು ಅಗೌರವಿಸಿದ್ದು ಎಂದು ಅನೇಕರು ಭಾವಿಸಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ. ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ದಯವಿಟ್ಟು ಈ ಟ್ವೀಟನ್ನು ಅನ್ಯಥಾ ಭಾವಿಸಬೇಡಿ. ಅಭಿಮಾನಿಗಳಿಗೆ ನೋವಾಗಿದ್ದರೆ ನಿಸ್ಸಂಶಯವಾಗಿ ಕ್ಷಮೆ ಯಾಚಿಸುತ್ತೇನೆ. ಪುನೀತ್ ಅವರ ಅಭಿಮಾನಿಯಾಗಿ ಇದು ನನ್ನ ಕರ್ತವ್ಯವೂ ಹೌದು.???? pic.twitter.com/JRd3Bt4g8o
— Chakravarty Sulibele (@astitvam) August 1, 2022
Advertisement
ಬಿ.ಜೆ.ಪಿ ಸರಕಾರದ ವಿರುದ್ಧ ಅಥವಾ ಬಸವರಾಜ ಬೊಮ್ಮಾಯಿ ವಿರುದ್ಧ ಚಕ್ರವತಿ ಸೂಲಿಬೆಲೆ ಅವರು ಏನಾದರೂ ಕಾಮೆಂಟ್ ಮಾಡಲಿ. ಅಪ್ಪು ನಿಧನವನ್ನು ಇಂದಿಗೂ ನಮ್ಮಿಂದ ಅರಗಿಸಿಕೊಳ್ಳಲು ಆಗುತ್ತಿಲ್ಲ. ನಿಧನರಾದಾಗ ಯಾರೂ ಬರದೇ ಇದ್ದರೂ, ಅಭಿಮಾನಿಗಳು ಮೂರು ದಿನವಲ್ಲ, ನೂರು ದಿನವಾದರೂ ಅವರಿಗೆ ಗೌರವ ಸೂಚಿಸಿ ಕಳುಹಿಸಿ ಕೊಡುತ್ತಿದ್ದೆವು. ಈ ರೀತಿಯಲ್ಲಿ ಅವಮಾನ ಮಾತುಗಳನ್ನು ಕೇಳುವುದಕ್ಕೆ ಸಾಧ್ಯವಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಅನೇಕ ಅಭಿಮಾನಿಗಳು ಸೂಲಿಬೆಲೆಗೆ ಕಾಮೆಂಟ್ ಮಾಡಿದ್ದರು. ಕೂಡಲೇ ಎಚ್ಚೆತ್ತುಕೊಂಡ ಸೂಲಿಬೆಲೆ ಅವರು ಕ್ಷಮೆ ಕೇಳಿದ್ದಾರೆ.
Advertisement
ಈ ಕುರಿತಂತೆ ವಿಡಿಯೋ ಸಮೇತ ಟ್ವಿಟ್ ಮಾಡಿರುವ ಸೂಲಿಬೆಲೆ ‘ಈ ಟ್ವಿಟ್ ಪುನೀತ್ ಅವರನ್ನು ಅಗೌರವಿಸಿದ್ದು ಎಂದು ಅನೇಕರು ಭಾವಿಸಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ದಯವಿಟ್ಟು ಈ ಟ್ವಿಟ್ ಅನ್ನು ಅನ್ಯಥಾ ಭಾವಿಸಬೇಡಿ. ಅಭಿಮಾನಿಗಳಿಗೆ ನೋವಾಗಿದ್ದರೆ ನಿಸ್ಸಂಶಯವಾಗಿ ಕ್ಷಮೆ ಯಾಚಿಸುತ್ತೇನೆ. ಪುನೀತ್ ಅವರ ಅಭಿಮಾನಿಯಾಗಿ ಇದು ನನ್ನ ಕರ್ತವ್ಯವೈ ಹೌದು ಎಂದು ಬರೆದಿದ್ದಾರೆ.