ಮಂಡ್ಯ: ರಸಗೊಬ್ಬರ ತಯಾರಿಕೆಯ ಹೆಸರಿನಲ್ಲಿ ಸಲ್ಫ್ಯೂರಿಕ್ ಆಸಿಡ್ ಉತ್ಪಾದಿಸಿ, ವಿಷಾನಿಲ ಸೋರಿಕೆಯಾಗಿ ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿಯಾಗಿರುವ ಘಟನೆ ಮಂಡ್ಯದ ಕಾರೇಕಟ್ಟೆ ಗ್ರಾಮದಲ್ಲಿ ನಡೆದಿದೆ.
ಕೀರ್ತಿ ಕೆಮಿಕಲ್ ಫ್ಯಾಕ್ಟರಿ ಹೆಸರಿನ ರಸಗೊಬ್ಬರ ತಯಾರಿಕಾ ಘಟಕ ಗ್ರಾಮದ ಹೊರವಲಯದಲ್ಲಿ ಕೆಲ ದಿನಗಳಿಂದ ಅನುಮತಿ ಪಡೆಯದೇ ಸಲ್ಫ್ಯೂರಿಕ್ ಆ್ಯಸಿಡ್ ತಯಾರಿಸುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹಾಗೆಯೇ ಸ್ಥಳೀಯ ರೈತರು ಕಾರ್ಖಾನೆಗೆ ಮುತ್ತಿಗೆ ಹಾಕಿ ಬಾಗಿಲು ಮುಚ್ಚಿಸಿದ್ದಾರೆ. ಇದನ್ನೂ ಓದಿ: ಪಾದಯಾತ್ರೆ ಕೇಸ್‍ಗೆ ಕೌಂಟರ್ ಕೊಡಲು ಕೈ ಪಾಳಯ ಸಿದ್ಧ
ಕಾರ್ಖಾನೆಯ ವಿಷಾನಿಲ ಸೋರಿಕೆಯಿಂದಾಗಿ 15 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ತೆಂಗು, ರಾಗಿ, ಹುರುಳಿ ಬೆಳೆಗಳು ನಾಶವಾಗಿದೆ. ಸುತ್ತಮುತ್ತಲ ಗ್ರಾಮದ ಕೆಲವರಿಗೆ ಉಸಿರಾಟದ ಸಮಸ್ಯೆಯೂ ಕಂಡುಬಂದಿದೆ ಎಂದು ನಷ್ಟಕ್ಕೊಳಗಾದ ಗ್ರಾಮಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಮದ್ಯಪಾನಕ್ಕೆ ಕರೆದೊಯ್ದು ಸ್ನೇಹಿತರಿಂದಲೇ ಯುವಕನ ಕತ್ತು ಕೊಯ್ದು ಕೊಲೆ
ಕಾರ್ಖಾನೆಯನ್ನು ಅನುಮತಿ ಪಡೆದೇ ಆರಂಭಿಸಿದ್ದೇವೆ ಎಂದು ಕೀರ್ತಿ ಕಾರ್ಖಾನೆಯ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡುತ್ತೇವೆ ಎಂದು ತಿಳಿಸಿದೆ. ಆದರೂ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚುವಂತೆ ಸ್ಥಳೀಯ ರೈತರು ಆಗ್ರಹಿಸುತ್ತಿದ್ದಾರೆ.