ದಿಸ್ಪುರ: ಭಾರತೀಯ ವಾಯು ಸೇನೆಗೆ ಸೇರಿದ್ದ ಸುಖೋಯ್ ಫೈಟರ್ ಜೆಟ್ ಅಸ್ಸಾಂನ ತೇಜ್ಪುರದ ಭತ್ತದ ಗದ್ದೆಯಲ್ಲಿ ಗುರುವಾರದಂದು ಪತನಗೊಂಡಿದೆ.
ಗುರುವಾರ ಸುಖೋಯ್ ಫೈಟರ್ ಜೆಟ್(ಎಸ್‍ಯು-30 ಎಂಕೆಐ ಫೈಟರ್ ಜೆಟ್) ಎಂದಿನಂತೆ ತರಬೇತಿ ಮಿಷನ್ ನಲ್ಲಿ ತೊಡಗಿತ್ತು. ಈ ವೇಳೆ ತೇಜ್ಪುರದ ಮಿಲನ್‍ಪುರ ಪ್ರದೇಶದ ಭತ್ತದ ಗದ್ದೆಯಲ್ಲಿ ಪತನವಾಗಿದ್ದು, ವಿಮಾನ ಅಪಘಾತಕ್ಕೀಡಾದ ಕೆಲ ಸಮಯದ ಬಳಿಕ ರಾತ್ರಿ ಸುಮಾರು 8.30ರ ಹೊತ್ತಿಗೆ ಬೆಂಕಿ ಹೊತ್ತಿಕೊಂಡು ಸುಟ್ಟುಹೋಗಿದೆ. ಆದರೆ ಅದೃಷ್ಟವಶಾತ್ ಜೆಟ್‍ನಲ್ಲಿದ್ದ ಇಬ್ಬರು ಪೈಲಟ್‍ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಬ್ಬರಲ್ಲಿ ಓರ್ವ ಪೈಲಟ್ ಕಾಲಿಗೆ ಗಂಭಿರವಾಗಿ ಪೆಟ್ಟಾಗಿದೆ ಎಂದು ಸೇನಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಹರ್ಷವರ್ಧನ್ ಪಾಂಡೆ ತಿಳಿಸಿದ್ದಾರೆ.
Advertisement
IAF: Today evening a Su-30 aircraft on a routine training mission from Tezpur(Assam) crashed in the local flying area. Both pilots ejected safely from the aircraft and have been rescued. A Court of Inquiry will ascertain cause of the accident. pic.twitter.com/zxqzwgTTqP
— ANI (@ANI) August 8, 2019
Advertisement
ಈ ಅಪಘಾತದಿಂದ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಯಾವುದೇ ನಷ್ಟವಾಗಿಲ್ಲ. ವಿಮಾನ ಪತನಗೊಂಡ ತಕ್ಷಣ ಸ್ಥಳೀಯರು ಇಬ್ಬರು ಪೈಲಟ್‍ಗಳನ್ನು ರಕ್ಷಿಸಿ, ತೇಜ್ಪುರದ ಸೇನಾ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ್ದಾರೆ. ಈ ಬಗ್ಗೆ ತಿಳಿದು ಸ್ಥಳಕ್ಕೆ ಆಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಿಯಂತ್ರಿಸಿದರು ಎಂದು ಪಾಂಡೆ ಅವರು ಮಾಹಿತಿ ನೀಡಿದ್ದಾರೆ.
Advertisement
ವಿಮಾನ ಪತನವಾಗಲು ಕಾರಣವೇನು ಎನ್ನುವುದನ್ನು ತಿಳಿಯಲು ತನಿಖೆ ನಡೆಸುವಂತೆ ಕೋರ್ಟ್ ಆದೇಶಿಸಿದೆ ಎಂದು ಅಧಿಕಾರಿಗಳು ದೆಹಲಿಯಲ್ಲಿ ತಿಳಿಸಿದ್ದಾರೆ.