ನೀವೆಂದೂ ನನ್ನವರು: ಜಾಕ್ವೆಲಿನ್ ಗೆ ಜೈಲಿನಿಂದ ಮತ್ತೊಂದು ಪತ್ರ ಬರೆದ ಸುಕೇಶ್

Public TV
2 Min Read
jacqueline fernandez

ಹುಕೋಟಿ ವಂಚನೆ ಆರೋಪಿ, ಬೆಂಗಳೂರಿನ ಸುಕೇಶ್ ಚಂದ್ರಶೇಖರ್ (Sukesh Chandrasekhar) ಜೈಲಿನಿಂದ ಮತ್ತೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಗೆ ಪತ್ರ ಬರೆದಿದ್ದಾನೆ. ಈಸ್ಟರ್ ಹಬ್ಬದ ನೆಪದಲ್ಲಿ ಭಾವನಾತ್ಮಕವಾಗಿ ಪತ್ರ ಬರೆದಿರುವ ಸುಕೇಶ್, ಜೈಲಿನಲ್ಲಿ ಇದ್ದುಕೊಂಡೆ ನಟಿಗೆ ಬರೆದು ಐದನೇ ಪತ್ರ ಇದಾಗಿದೆ. ಜಾಕ್ವೆಲಿನ್ ಗೆ ಈಸ್ಟರ್ ಹಬ್ಬವೆಂದರೆ ಎಲ್ಲಿಲ್ಲದ ಸಂಭ್ರಮ ಎನ್ನುವುದನ್ನು ಈ ಪತ್ರದಲ್ಲಿ ಸುಕೇಶ್ ಬಹಿರಂಗ ಪಡಿಸಿದ್ದಾನೆ.

jacqueline fernandez 3

ದೆಹಲಿಯ ತಿಹಾರ್ ಜೈಲಿನಿಂದ (Tihar Jail) ನಟಿಗೆ ಬರೆದ ಪತ್ರದಲ್ಲಿ ‘ಮೈ ಬೇಬಿ ಮೈ ಬೊಮ್ಮಾ, ಜಾಕ್ವೆಲಿನ್.. ಬೇಬಿ ಐ ವಿಶ್ ಯು ವೆರಿ ಹ್ಯಾಪಿ ಈಸ್ಟರ್ (Easter). ನಿನ್ನ ನೆಚ್ಚಿನ ಹಬ್ಬಗಳಲ್ಲಿ ಇದು ಒಂದು ಅನ್ನುವುದನ್ನು ನಾನು ಬಲ್ಲೆ. ಈ ಹಬ್ಬದಲ್ಲಿ ನಿಮ್ಮೊಂದಿಗೆ ಇಲ್ಲ ಎನ್ನುವುದು ಬೇಸರ ತರಿಸುತ್ತಿದೆ. ಮುಂದಿನ ವರ್ಷ ಇಬ್ಬರೂ ಒಟ್ಟಿಗೆ ಈ ಹಬ್ಬವನ್ನು ಆಚರಿಸುವಂತೆ ನೋಡಿಕೊಳ್ಳುವೆ. ನೀವೆಂದು ನನ್ನವರು’ ಎಂದು ಸುಕೇಶ್ ಪತ್ರದಲ್ಲಿ ಬರೆದಿದ್ದಾನೆ.

jacqueline fernandez sukesh chandrashekhar

ಪ್ರತಿ ಕ್ಷಣವೂ ಜಾಕ್ವೆಲಿನ್ ಅವರನ್ನು ನೆನಪಿಸಿಕೊಳ್ಳುವುದಾಗಿಯೂ ತಿಳಿಸಿರುವ ಸುಕೇಶ್, ನನ್ನನ್ನು ನೀನೂ ಅಷ್ಟೇ ನೆನಪಿಸಿಕೊಳ್ಳುತ್ತಿಯಾ ಎಂದು ಗೊತ್ತು. ನೀನು ಮತ್ತು ನಾನು ಎಂದೆಂದಿಗೂ ಶಾಶ್ವತ ಎಂದು ಭಾವನಾತ್ಮಕವಾಗಿ ಪದಗಳನ್ನು ಹೆಣೆದಿದ್ದಾನೆ. ಈ ಪತ್ರವನ್ನು ಜಾಕ್ವೆಲಿನ್ ಓದಿದ್ದಾರೋ ಎಲ್ಲವೋ ಗೊತ್ತಿಲ್ಲ. ಆದರೆ, ನಿರಂತರವಾಗಿ ಪತ್ರಗಳನ್ನು ಸುಕೇಶ್ ಬರೆಯುತ್ತಲೇ ಇದ್ದಾನೆ. ಇದನ್ನೂ ಓದಿ: ನಿಮ್ಮ ಉಪಸ್ಥಿತಿಗೆ ಬೆಲೆ ಕೊಡುವವರನ್ನು ಬಿಟ್ಟೋಗ್ಬೇಡಿ-ರಾಧಿಕಾ ಪಂಡಿತ್ ಹಿಂಗ್ಯಾಕಂದ್ರು?

Jacqueline Fernandez 3

ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸುಕೇಶ್ ಚಂದ್ರಶೇಖರ್ ಡೇಟಿಂಗ್ ವಿಚಾರ ಗುಟ್ಟಾಗಿ ಉಳಿದಿರಲಿಲ್ಲ. ಇಬ್ಬರೂ ಜೊತೆಯಾಗಿ ಕಳೆದ ಖಾಸಗಿ ಫೋಟೋಗಳು ಕೂಡ ವೈರಲ್ ಆಗಿದ್ದವು. ಇವರ ಪ್ರೇಮಕ್ಕೆ ಸಾಕ್ಷಿ ಎನ್ನುವಂತೆ ಕೋಟಿ ಬೆಲೆಬಾಳುವ ಗಿಫ್ಟ್ ಪಡೆದಿದ್ದಳು ಜಾಕ್ವೆಲಿನ್. ಈ ಉಡುಗೊರೆಗಳೇ ಕೊನೆಗೆ ನಟಿಗೆ ಮುಳುವಾದವು. ಕೋರ್ಟ್ ಮೆಟ್ಟಿಲು ಕೂಡ ಹತ್ತಿಸಿದವು.

Jacqueline Fernandez 1

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಕೇಶ್ ಬಂಧನವಾಗುತ್ತಿದ್ದಂತೆಯೇ ಜಾಕ್ವೆಲಿನ್ ಗೂ ಕೂಡ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿತ್ತು. ವಂಚನೆಯ ಹಣದಲ್ಲೇ ನಟಿಗೆ ಉಡುಗೊರೆ ನೀಡಿದ್ದಾನೆ ಎಂದು ಆರೋಪಿಸಲಾಗಿತ್ತು. ಜಾಕ್ವೆಲಿನ್ ಕೂಡ ಬಂಧನವಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ನಟಿ ಮಧ್ಯಂತರ ಜಾಮೀನು  ಪಡೆದುಕೊಂಡರು. ಆದರೂ, ವಿಚಾರಣೆಗೆ ಹೋಗುವುದು ತಪ್ಪಲಿಲ್ಲ.

Jacqueline Fernandez

ನಂತರದ ದಿನಗಳಲ್ಲಿ ಸುಕೇಶ್ ಗೂ ತಮಗೂ ಸಂಬಂಧವಿಲ್ಲ. ಅವನಿಂದಾಗಿ ನನ್ನ ಜೀವನ ಹಾಳಾಯಿತು ಎಂದು ಜಾಕ್ವೆಲಿನ್ ಆರೋಪಿಸಿದರು. ಈಕೆ ಏನೇ ಆರೋಪ ಮಾಡಿದರೂ, ಸುಕೇಶ್ ಮಾತ್ರ ಇನ್ನೂ ಜಾಕ್ವೆಲಿನ್ ಜಪ ಮಾಡುವುದನ್ನು ನಿಲ್ಲಿಸಿಲ್ಲ. ಮೊನ್ನೆಯಷ್ಟೇ ಪ್ರೇಮಿಗಳ ದಿನದಂದು ವಿಶ್ ಮಾಡಿದ್ದ ಆತ, ನಂತರ ಹೋಳಿ ಹಬ್ಬಕ್ಕೂ ಸುಕೇಶ್ ಶುಭಾಶಯಗಳನ್ನು ಹೇಳಿದ್ದ. ಈಗ ಈಸ್ಟರ್ ಹಬ್ಬಕ್ಕೂ ಪತ್ರ ಬರೆದಿದ್ದಾನೆ.

Share This Article