ಜೈಲಿನಿಂದಲೇ ನಟಿ ಜಾಕ್ವೆಲಿನ್ ಗೆ ಭರ್ಜರಿ ಗಿಫ್ಟ್ ಕೊಟ್ಟ ಸುಕೇಶ್: ಇದು 25 ಕೋಟಿ ರೂ. ಕಥೆ

Public TV
1 Min Read
sukesh

ಹುಕೋಟಿ ವಂಚನೆಯ ಆರೋಪಿ ಸುಕೇಶ್ ಚಂದ್ರಶೇಖರ್ (Sukesh Chandrasekhar) ಜೈಲಿನಲ್ಲಿ ಇದ್ದುಕೊಂಡೇ ಗೆಳತಿ, ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಗೆ ಪತ್ರ ಬರೆಯುತ್ತಲೇ ಇರುತ್ತಾನೆ. ಪ್ರೇಮಿಗಳ ದಿನಕ್ಕೊಂದು ಪತ್ರ ಬರೆದಿದ್ದ ಸುಕೇಶ್ ಆನಂತರ ಜಾಕ್ವೆಲಿನ್ ಹುಟ್ಟು ಹಬ್ಬಕ್ಕೂ ಒಂದು ಪತ್ರ ಕಳುಹಿಸಿದ್ದ. ಇದೀಗ ಜೈಲಿನಿಂದ (Jail) ಮತ್ತೊಂದು ಪತ್ರ (Letter) ಬರೆದಿದ್ದು, ಅದರಲ್ಲಿ ಕೋಟಿ ಕೋಟಿ ಬಜೆಟ್ ನ ಯೋಜನೆಯನ್ನು ಪ್ರಸ್ತಾಪ ಮಾಡಿದ್ದಾರೆ.

jacqueline fernandez 1

ಜಾಕ್ವೆಲಿನ್ ಗೆ ಪ್ರಾಣಿಗಳ (Animal) ಮೇಲೆ ಅಪಾರ ಪ್ರೀತಿಯಂತೆ. ಅದರಲ್ಲೂ ನಾಯಿ, ಬೆಕ್ಕು, ಕುದುರೆಗಳು ಅಂದರೆ ಪ್ರಾಣವಂತೆ. ತನ್ನ ಗೆಳತಿಯ ಪ್ರಾಣಿ ಮೇಲಿನ ಪ್ರೀತಿಗಾಗಿ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸುವುದಾಗಿ ಹೇಳಿದ್ದಾನೆ. ಇದೇ ಸೆಪ್ಟಂಬರ್ 11 ರಿಂದ ಕಟ್ಟಡ ನಿರ್ಮಾಣ ಕಾಮಗಾರಿ ಶುರುವಾಗಲಿದ್ದು, ಮುಂದಿನ ವರ್ಷ ಆಗಸ್ಟ್ 11ಕ್ಕೆ ಲೋಕಾರ್ಪಣೆ ಮಾಡುವುದಾಗಿ ತಿಳಿಸಿದ್ದಾನೆ. ಇದು ಗೆಳತಿ ಹುಟ್ಟುಹಬ್ಬಕ್ಕಾಗಿ ಕೊಡುತ್ತಿರುವ ಉಡುಗೊರೆ ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ:ಸರ್ಜರಿಗೆ ಮೊರೆ ಹೋಗಿದ್ರಾ ಬಸಣ್ಣಿ? ತುಟಿ ಮೇಲೆ ಕಣ್ಣಿಟ್ಟವರಿಗೆ ತಾನ್ಯಾ ಗರಂ

jacqueline fernandez

ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಬೆಂಗಳೂರಿನಲ್ಲಿ ನಿರ್ಮಾಣವಾಗಲಿದ್ದು, ಒಟ್ಟು 25 ಸಾವಿರ ಚದರಡಿ ವಿಸ್ತೀರ್ಣದಲ್ಲಿ ತಯಾರಾಗಲಿದೆ. ಈ ಆಸ್ಪತ್ರೆಗಾಗಿ ಸುಕೇಶ್ 25 ಕೋಟಿ ರೂಪಾಯಿ ವೆಚ್ಚ ಮಾಡಲಿದ್ದಾನೆ. ಈ ಆಸ್ಪತ್ರೆಯು ಉಚಿತವಾಗಿ ಕೆಲಸ ಮಾಡಲಿದೆಯಂತೆ. ನುರಿತು ವೈದ್ಯರು ಮತ್ತು ಅತ್ಯಾಧುನಿಕ ಉಪಕರಣಗಳನ್ನು ಹೊಂದಿರಲಿದೆ ಎಂದು ಪತ್ರದಲ್ಲಿ ಬರೆದಿದ್ದಾನೆ.

 

ಸುಕೇಶ್ ವಿರುದ್ಧವಾಗಿಯೇ ಜಾಕ್ವೆಲಿನ್ ಹಲವು ಬಾರಿ ಮಾತನಾಡಿದ್ದರೂ, ಸುಕೇಶ್ ಗೂ ನನಗೂ ಯಾವುದೇ ಸಂಬಂಧವಿಲ್ಲ. ಅವನಿಂದ ಯಾವುದೇ ಉಡುಗೊರೆಯನ್ನು ಪಡೆದಿಲ್ಲ ಎಂದು ತನಿಖಾಧಿಕಾರಿಗಳಿಗೆ ಜಾಕ್ವೆಲಿನ್ ಹೇಳಿದ್ದರೂ, ಪದೇ ಪದೇ ಈ ರೀತಿ ಪತ್ರವನ್ನು ಬರೆಯುವ ಮೂಲಕ ಜಾಕ್ವೆಲಿನ್ ನಿದ್ದೆ ಹಾಳು ಮಾಡುತ್ತಿದ್ದಾನೆ ಸುಕೇಶ್. ನಿಜಕ್ಕೂ ಈ ಆಸ್ಪತ್ರೆ ನಿರ್ಮಾಣ ಆಗಲಿದೆಯಾ ಎಂದು ಕಾದು ನೋಡಬೇಕು.

Web Stories

Share This Article