ಗಂಡ ಹೊಟೇಲ್‍ಗೆ ಕರೆದುಕೊಂಡು ಹೋಗಿಲ್ಲವೆಂದು ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ

Public TV
1 Min Read
suicide doddaballapur

ಚಿಕ್ಕಬಳ್ಳಾಪುರ: ಗಂಡ ಹೋಟೆಲ್‍ಗೆ ಊಟಕ್ಕೆ ಕರೆದುಕೊಂಡು ಹೋಗಲ್ಲ ಎಂದು ಇಬ್ಬರು ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಎಸ್.ಎಂ ಗೊಲ್ಲಹಳ್ಳಿಯಲ್ಲಿ ನಡೆದಿದೆ.

doddaballapur incident home

ಸಂಧ್ಯಾ (24), ಕುಸುಮ (4) ಹಾಗೂ 1 ವರ್ಷ 7 ತಿಂಗಳಿನ ಮಗು ರೋಹಿತ್ ಮೃತರು. ಅಂದಹಾಗೆ ಮನೆಯಲ್ಲಿ ಅತ್ತೆ ಮಾವ ಗಂಡ ಯಾರೂ ಇಲ್ಲದ ವೇಳೆ ಸಂಧ್ಯಾ ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದರು. ಇದನ್ನು ಕಂಡ ಗ್ರಾಮಸ್ಥರು ಬಾಗಿಲು ಒಡೆದು ಮೂವರನ್ನು ರಕ್ಷಿಸಿಲು ಯತ್ನಿಸಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಮೂವರು ಸಹ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮಾಧುಸ್ವಾಮಿ ವಿರುದ್ಧ ಮಾತಾಡಿಲ್ಲ, ಅಧಿಕಾರಿಗಳಿಗೆ ಛೀಮಾರಿ ಹಾಕಿ ಅಂದೆ ಅಷ್ಟೇ: ಬಸವರಾಜ್

CKB GIRL

ಯಲಹಂಕ ಮೂಲದ ಸಂಧ್ಯಾ, ಎಸ್.ಎಂ ಗೊಲ್ಲಹಳ್ಳಿಯ ಶ್ರೀಕಾಂತ್‍ರೊಂದಿಗೆ ಕಳೆದ 5 ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಮೊದಲಿನಿಂದಲೂ ವಾರಕ್ಕೊಮ್ಮೆ ಆದ್ರೂ ಹೋಟೆಲ್ ಊಟ ಮಾಡುವ ಅಭ್ಯಾಸ ಇದ್ದ ಸಂಧ್ಯಾಗೆ ಗಂಡ ಆಗಾಗ್ಗೆ ಹೋಟೆಲ್‍ಗೆ ಕೆರೆದುಕೊಂಡು ಹೋಗಿ ಊಟ ಮಾಡಿಸಿಕೊಂಡು ಬರುತ್ತಿದ್ದರು. ಆದ್ರೆ ಇತ್ತೀಚೆಗೆ ಕೆಲಸದ ಒತ್ತಡದ ನಡುವೆ ಆಗಿರಲಿಲ್ಲ ಇದೇ ಕಾರಣಕ್ಕೆ ಜಗಳ ಮಾಡಿದ್ದ ಸಂಧ್ಯಾ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಂಗನವಾಡಿಗೆ ಹೋಗಿದ್ದ ತನ್ನ ಮಗುವನ್ನು ಮನೆಗೆ ಕರೆದುಕೊಂಡು ಬಂದು ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಮೃತಳ ತಂದೆ ನಾಗರಾಜು ದೂರು ನೀಡಿದ್ದಾರೆ. ಇದನ್ನೂ ಓದಿ: ನಮ್ಮ ಜಿಲ್ಲೆಯನ್ನೇ ಹಾಳ್ ಮಾಡಿಬಿಟ್ಟಿದ್ದಾನೆ – ಮಾಧುಸ್ವಾಮಿ ವಿರುದ್ಧ ಬಸವರಾಜ್, ಬೈರತಿ ಗುಸು ಗುಸು

Share This Article
Leave a Comment

Leave a Reply

Your email address will not be published. Required fields are marked *