ಚಾಮರಾಜನಗರ: ಪೊಲೀಸ್ ಕ್ವಾಟರ್ಸ್ ನಲ್ಲಿ ಆತ್ಮಹತ್ಯೆಗಳನ್ನು ತಡೆಗಟ್ಟಿ ಶಾಂತಿ ನೆಲೆಸಲು ಪೊಲೀಸ್ ಸಿಬ್ಬಂದಿ ಕುಟುಂಬ ಸದಸ್ಯರು ಈಗ ಹೋಮ ಹವನದ ಮೊರೆ ಹೋಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರಿನ ಪೊಲೀಸ್ ಕ್ವಾಟ್ರಸ್ ನಲ್ಲಿ ಹೆಚ್ಚುತ್ತಿದ್ದ ಆತ್ಮಹತ್ಯೆಗಳನ್ನು ತಡೆಗಟ್ಟಲು ಹೋಮ ಹವನವನ್ನು ಮಾಡಿಸಲಾಗಿದೆ.
Advertisement
ಕೆಲ ದಿನಗಳ ಹಿಂದೆ ಅಷ್ಟೆ ಈ ಕ್ವಾಟರ್ಸ್ ನಲ್ಲಿ ಇಬ್ಬರು ಪೊಲೀಸ್ ಪೇದೆಗಳು ಆತ್ಮಹತ್ಯೆಗೆ ಶರಣಾಗಿದ್ದರು. ಹೀಗಾಗಿ ಮುಂದಿನ ದಿನಗಳಲ್ಲಿ ಇಲ್ಲಿ ಈ ರೀತಿಯ ಪ್ರಕರಣಗಳು ನಡೆಯದೇ ಇರಲು ಹೋಮ ಮಾಡಿಸಿದ್ದಾರೆ.
Advertisement
Advertisement
ಈ ಕ್ವಾಟರ್ಸ್ ನ್ನು ಉದ್ಘಾಟಿಸಿದ ಸಂಧರ್ಭದಲ್ಲಿ ಇಲ್ಲಿ ಯಾವುದೇ ರೀತಿಯ ಹೋಮವನ್ನು ಮಾಡಿಸಿಲ್ಲದ ಕಾರಣ ಈ ರೀತಿಯ ಅವಘಡಗಳು ಸಂಭವಿಸುತ್ತಿವೆ. ಹೀಗಾಗಿ ಹೋಮ ಮಾಡಿಸಲಾಗಿದೆ ಎಂದು ಇಲ್ಲಿ ನೆಲೆಸಿರುವ ಜನರ ಹೇಳಿದ್ದಾರೆ.
Advertisement
ಆತ್ಮಹತ್ಯೆ ಪ್ರಕರಣಗಳು ಬೆಳಕಿಗೆ ಬಂದ ಬಳಿಕ ಸಿಬ್ಬಂದಿ ಕುಟುಂಬ ಇಲ್ಲಿ ವಾಸಿಸಲು ಹಿಂದೇಟು ಹಾಕುತ್ತಿದ್ದವು. ಹೀಗಾಗಿ ಇಲ್ಲಿ ವಿಶೇಷ ಪೂಜೆ ಹಾಗೂ ಹೋಮ ಮಾಡಿಸಿ ಕ್ವಾಟರ್ಸ್ ಗೆ ಶಾಂತಿ ಮಾಡಿಸಲಾಯಿತು. ಹಾಗೆ ಸಾರ್ವಜನಿಕರಿಗೆ ಅನ್ನದಾನ ಮಾಡುವ ಮೂಲಕ ಕ್ವಾಟರ್ಸ್ ನಲ್ಲಿ ಮುಂದೆ ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ದೇವರಿಗೆಲ್ಲ ಪ್ರಾರ್ಥನೆ ಮಾಡಲಾಯಿತು.