ಚಂಡೀಗಢ: ಕೆನಡಾಕ್ಕೆ ಹೋಗಲು ವೀಸಾ ವಿಳಂಬದಿಂದ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣದ ಕುರುಕ್ಷೇತ್ರ ಜಿಲ್ಲೆಯಲ್ಲಿ ನಡೆದಿದೆ.
ಶಹಬಾದ್‍ನ ಗೂರ್ಖಾ ಗ್ರಾಮದ ವಿಕೇಶ್ ಸೈನಿ ಅಲಿಯಾಸ್ ದೀಪಕ್ (23) ಮೃತ ಯುವಕ. ದೀಪಕ್ ವೀಸಾ ಗುರುವಾರವೇ ಬಂದಿತ್ತು. ಆದರೆ ವೀಸಾ ಕಾಣೆಯಾಗಿರುವುದರಿಂದ ಆತನಿಗೆ ಯಾರು ವೀಸಾ ಬಂದಿರುವ ವಿಷಯವನ್ನು ತಿಳಿಸಿರಲಿಲ್ಲ. ಆದರೆ ದೀಪಕ್ ತನ್ನ ಸ್ನೇಹಿತನಿಗೆ ವೀಸಾ ಬಂದಿದ್ದರೂ, ತನಗೆ ಇನ್ನೂ ವೀಸಾ ಬಂದಿಲ್ಲ ಎಂದು ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Advertisement
Advertisement
ಘಟನೆ ಸಂಬಂಧ ದೀಪಕ್ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ದೀಪಕ್‍ನ ಚಪ್ಪಲಿಗಳು ಮತ್ತು ಬೈಕ್ ನರ್ವಾನಾ ಬ್ರಾಂಚ್ ಕೆರೆ ಬಳಿ ಪತ್ತೆ ಆಗಿದೆ. ನಂತರ ಅಲ್ಲೆ ಹುಡುಕಿದಾಗ ಮೃತದೇಹವು ಅಲ್ಲೇ ಪತ್ತೆ ಆಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಘಟನೆ ಸಂಬಂಧಿಸಿ ಪೊಲೀಸರು ವಿಚಾರಣೆ ಆರಂಭಿಸಿದ್ದು, ಇದನ್ನು ಆತ್ಮಹತ್ಯೆ ಎಂದು ಪರಿಗಣಿಸಿದ್ದಾರೆ. ಇದನ್ನೂ ಓದಿ: ಇಯರ್‌ಫೋನ್ ಧರಿಸಿ ಹಳಿ ಮೇಲೆ ಹೋಗುತ್ತಿದ್ದ ಮೂವರು ರೈಲಿಗೆ ಸಿಲುಕಿ ಸಾವು
Advertisement
Advertisement
ಕೋವಿಡ್ ಕಡಿಮೆಯಾದ ನಂತರವೂ ವಿದ್ಯಾರ್ಥಿ ವೀಸಾ ವಿಳಂಬ ಸಮಸ್ಯೆಯಾಗಿದೆ. ಕೆನಡಾಕ್ಕೆ ಹೋಗಲು ವೀಸಾ ಪ್ರಕ್ರಿಯೆಯು ಸುಮಾರು 6 ತಿಂಗಳುಗಳನ್ನು ತೆಗೆದುಕೊಳ್ಳುತ್ತಿದೆ. ಯುಕೆ ಮತ್ತು ಯುಎಸ್ ವೀಸಾಕ್ಕಾಗಿ ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿವೆ. ಇದನ್ನೂ ಓದಿ: ಚಾಕುವಿನಿಂದ ಇರಿದು ಟಿಎಂಸಿ ಕಾರ್ಯಕರ್ತನ ಬರ್ಬರ ಹತ್ಯೆ – ನಾಲ್ವರು ಅರೆಸ್ಟ್