– ಹೈದರಾಬಾದ್‌ನ ಒಂದು ಬ್ಯಾಂಕ್ ಅಥವಾ ಕಂಪನಿಗೆ ಹಣ ಹೋಗಿದೆ
– ಹಾಲಿ ನ್ಯಾಯಾಧೀಶರರಿಂದ ಪ್ರಕರಣದ ತನಿಖೆ ನಡೆಸಬೇಕು
– ಡಿಕೆಶಿ, ರಾಮಲಿಂಗಾ ರೆಡ್ಡಿ ಜೊತೆ ನಾಗರಾಜ್ ಇರುವ ಫೋಟೋ ರಿಲೀಸ್
ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಅಧಿಕಾರಿ ಆತ್ಮಹತ್ಯೆ ವಿಚಾರದಲ್ಲಿ ಬಿಜೆಪಿಯಿಂದ ಎನ್.ನಾಗರಾಜ್ (N Nagaraj) ಸಂಬಂಧದ ಅಸ್ತ್ರ ಪ್ರಯೋಗವಾಗಿದೆ. ಡೆತ್‌ನೋಟ್‌ನಲ್ಲಿರುವ ಎನ್.ನಾಗರಾಜ್ ಜಾಡು ಹಿಡಿದು ಹೊರಟ ಬಿಜೆಪಿ ಸಚಿವ ನಾಗೇಂದ್ರ (Nagendra) ಜೊತೆ ನಾಗರಾಜುಗೆ ವ್ಯವಹಾರಿಕ ಸಂಬಂಧ ಎಂದು ಗಂಭೀರ ಆರೋಪ ಮಾಡಿದೆ.
ನಾಗೇಂದ್ರ ಜೊತೆ ನಾಗರಾಜ್ ಇರುವ ಫೋಟೋ ರಿಲೀಸ್ ಮಾಡಿ ಬಿಜೆಪಿ ನಾಯಕರು ಆರೋಪ ಮಾಡಿದ್ದಾರೆ. ಅಲ್ಲದೆ ಸಿಎಂ ಜೊತೆ, ಡಿಸಿಎಂ ಜೊತೆ, ರಾಮಲಿಂಗರೆಡ್ಡಿ ಜೊತೆ ಇರುವ ಫೋಟೋ ರಿಲೀಸ್ ಮಾಡಿ ಸಚಿವ ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಸಚಿವ ನಾಗೇಂದ್ರ ರಾಜೀನಾಮೆ ಅಗತ್ಯ ಇಲ್ಲ: ಮಹದೇವಪ್ಪ
ಸಿ.ಟಿ.ರವಿ (CT Ravi) ಮಾತನಾಡಿ, ಡೆತ್‌ನೋಟ್‌ನಲ್ಲಿ ಎನ್.ನಾಗರಾಜ್ ಹೆಸರು ಇದೆ. ಆ ಎನ್.ನಾಗರಾಜ್ ನಾಗೇಂದ್ರ ಪರಮಾಪ್ತನಾಗಿದ್ದು ಬ್ಯುಸಿನೆಸ್ ಪಾರ್ಟ್‌ನರ್ ಆಗಿದ್ದಾನೆ. ಎನ್.ನಾಗರಾಜು ಜೊತೆ ನಾಗೇಂದ್ರಗೆ ವ್ಯವಹಾರ ಇದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜೊತೆ ಎನ್.ನಾಗರಾಜ್ ಇರುವ ಫೋಟೋಗಳು ಇವೆ. ಹೀಗಾಗಿ ಈ ಪ್ರಕರಣದಲ್ಲಿ ಎಲ್ಲರ ಪಾತ್ರವಿದೆ ಎಂದು ಆರೋಪಿಸಿದರು.
ಅಂಗೈ ಹುಣ್ಣಿಗೆ ಸಾಕ್ಷಿ ಬೇಕಾ? ಸಚಿವರ ಮೌಖಿಕ ಆದೇಶ ಇಲ್ಲದೇ ಹಣ ವರ್ಗಾವಣೆ ಹೇಗೆ ಆಗುತ್ತೆ? ಎನ್.ನಾಗರಾಜ್ ಗೂ ನಾಗೇಂದ್ರಗೂ ಏನ್ ಸಂಬಂಧ? ಎನ್.ನಾಗರಾಜ್‌ಗೂ ಸಿಎಂಗೂ, ಎನ್. ನಾಗರಾಜ್‌ಗೂ ಡಿಸಿಎಂಗೆ ಏನು ಸಂಬಂಧ ಎಂದು ಸಿ.ಟಿ.ರವಿ ಖಾರವಾಗಿ ಪ್ರಶ್ನಿಸಿದರು. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ 94 ಕೋಟಿ ಗೋಲ್ಮಾಲ್ – ಯೂನಿಯನ್ ಬ್ಯಾಂಕ್‌ನಿಂದಲೇ ವಂಚನೆ, ಕೇಸ್ ದಾಖಲು
ಹೈದರಾಬಾದ್‌ನ ಒಂದು ಬ್ಯಾಂಕ್ ಅಥವಾ ಕಂಪನಿಗೆ ಹಣ ಹೋಗಿದೆ ಎಂಬ ಮಾಹಿತಿ ಇದೆ. ಇದೆಲ್ಲದರ ಬಗ್ಗೆ ತನಿಖೆ ನಡೆಯಬೇಕು. ಅದಕ್ಕಾಗಿ ಹಾಲಿ ನ್ಯಾಯಾಧೀಶರರಿಂದ ತನಿಖೆ ನಡೆಸಬೇಕು. ಇದೊಂದು ಹಗಲು ದರೋಡೆಯಾಗಿದೆ. ವಿಶೇಷ ವಿಮಾನದಲ್ಲಿ ಸಿದ್ದರಾಮಯ್ಯ ಜೊತೆ ಹೋಗಿದ್ದಾರೆ. ಡೆತ್ ನೋಟ್‌ನಲ್ಲಿ ನಾಗರಾಜ್ ಹೆಸರು ಉಲ್ಲೇಖವಾಗಿದ್ದು ಯಾಕೆ ಎಂದು ಪ್ರಶ್ನಿಸಿದ್ರು.
ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಾಗ ಇದೊಂದು ಕೊಲೆ ಅಂತಾ ಸುರ್ಜೇವಾಲಾ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹೇಳಿದ್ದರು. ವರ್ಕ್ ಆರ್ಡರ್ ಮಾಡದೇ ಇದ್ದರೂ ಈಶ್ವರಪ್ಪ ರಾಜೀನಾಮೆ ನೀಡಿದರು. ಅವರ ರಾಜಕೀಯ ಭವಿಷ್ಯವನ್ನೇ ಮುಗಿಸುವ ಕೆಲಸ ಮಾಡಿದರು. ಈಗ ಬಿ.ನಾಗೇಂದ್ರ ರಾಜೀನಾಮೆ ಪಡೆಯುತ್ತಿಲ್ಲ ಯಾಕೆ? ಬಿ.ನಾಗೇಂದ್ರ ರಾಜೀನಾಮೆ ಕೊಡಲೇಬೇಕು. ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯೇ ಎಂದು ಸಿಟಿ ರವಿ ಕಿಡಿಕಾರಿದರು.