ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ರಾಜಧಾನಿ ಇಸ್ಲಾಮಾಬಾದ್‌ನಲ್ಲಿ (Islamabad) ಶುಕ್ರವಾರ ಆತ್ಮಹತ್ಯಾ ಸ್ಫೋಟ (Suicide Bombing) ನಡೆಸಲಾಗಿದ್ದು, ಭೀಕರ ಘಟನೆಯಲ್ಲಿ ಒಬ್ಬ ಪೊಲೀಸ್ ಸಾವನ್ನಪ್ಪಿದ್ದಾರೆ. ಹಲವರಿಗೆ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆ.
ಇಸ್ಲಾಮಾಬಾದ್‌ನ ಐ-10/4 ಸೆಕ್ಟರ್ ಬಳಿ ಸ್ಫೋಟ ಉಂಟಾಗಿದೆ. ಘಟನೆಯ ಬಳಿಕ ಸ್ಥಳಕ್ಕೆ ವಿಶೇಷ ಭಯೋತ್ಪಾದನಾ ನಿಗ್ರಹ ಪಡೆ ಧಾವಿಸಿದೆ. ಘಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ದೂರದರ್ಶನಗಳ ದೃಶ್ಯಾವಳಿಗಳಲ್ಲಿ ಛಿದ್ರಗೊಂಡಿರುವ ವಾಹನವೊಂದು ಬೆಂಕಿಯಲ್ಲಿ ಉರಿಯುತ್ತಿರುವುದನ್ನು ತೋರಿಸಿದೆ. ಇದನ್ನೂ ಓದಿ: ಹಿಜಬ್ ಸೂಚನೆ ಕಡೆಗಣನೆ, ಮಹಿಳೆಯರು ಮದುವೆಗೆ ಹೋಗುವ ಉಡುಪು ಧರಿಸುತ್ತಾರೆ: ತಾಲಿಬಾನ್ ಸಮರ್ಥನೆ
Advertisement
Advertisement
ಘಟನೆಯಲ್ಲಿ ಸಾವನ್ನಪ್ಪಿರುವ ಅಧಿಕಾರಿಯನ್ನು ಹೆಡ್ ಕಾನ್ಸ್ಟೇಬಲ್ ಆದಿಲ್ ಹುಸೇನ್ ಎಂದು ಗುರುತಿಸಿದ್ದಾರೆ. ವರದಿಗಳ ಪ್ರಕಾರ ಇಂದು ಬೆಳಗ್ಗೆ 10:15ರ ವೇಳೆಗೆ ಒಬ್ಬ ಮಹಿಳೆ ಹಾಗೂ ಪುರುಷ ಪ್ರಯಾಣಿಸುತ್ತಿದ್ದ ವಾಹನವನ್ನು ಪೊಲೀಸರು ಗುರುತಿಸಿದ್ದಾರೆ. ಅನುಮಾನಾಸ್ಪದವಾಗಿ ಕಂಡ ವಾಹನವನ್ನು ಅಧಿಕಾರಿಗಳು ತಪಾಸಣೆ ನಡೆಸಲು ಮುಂದಾದಾಗ ದಂಪತಿ ವಾಹನದಿಂದ ಹೊರಬಂದಿದ್ದಾರೆ. ಬಳಿಕ ಪುರುಷ ಯಾವುದೋ ನೆಪ ಹೇಳಿ ಮತ್ತೆ ಕಾರಿನೊಳಗೆ ಹೋಗಿದ್ದು, ಈ ವೇಳೆ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಕೊರೊನಾ ಆತಂಕ, ಖಾಸಗಿ ಆಸ್ಪತ್ರೆಗಳು ಆ್ಯಕ್ಟಿವ್ – ಕಳೆದ ಬಾರಿಯ ಬಿಲ್ ಕ್ಲಿಯರ್ ಮಾಡಲು ಸರ್ಕಾರಕ್ಕೆ ಮನವಿ
Advertisement
ಸ್ಫೋಟ ಉಂಟಾದಾಗ ಪಕ್ಕದಲ್ಲಿದ್ದ ಅಧಿಕಾರಿ ಸಾವನ್ನಪ್ಪಿದ್ದಾರೆ. ಸುತ್ತಮುತ್ತಲಿದ್ದ ನಾಲ್ವರಿಗೆ ಗಾಯಗಳಾಗಿವೆ ಎಂದು ಪೊಲೀಸ್ ಉಪ ಮಹಾನಿರೀಕ್ಷಕ ಸೊಹೈಲ್ ಜಾಫರ್ ಚಟ್ತಾ ಹೇಳಿದ್ದಾರೆ.