ಮಂಗಳೂರು: ಹಿಂದುತ್ವಕ್ಕಾಗಿ ನನ್ನ ಪ್ರಾಣವನ್ನೇ ಕೊಡುತ್ತೇನೆ ಅಂತಿದ್ದ. ಈಗ ಅವನ ಪ್ರಾಣವನ್ನೇ ತೆಗೆದರು ಎಂದು ಮೃತ ಸುಹಾಸ್ ಶೆಟ್ಟಿ (Suhas Shetty) ಅವರ ತಾಯಿ ಸುಲೋಚನಾ ಕಣ್ಣೀರು ಹಾಕಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ನಿನ್ನೆ ಬೆಳಗ್ಗೆ ಮದುವೆಯ ಬ್ಯುಸಿಯಲ್ಲಿದ್ದೆವು. ಹಾಗಾಗಿ ಮಗನಿಗೆ ಫೋನ್ ಮಾಡಲು ಆಗಲಿಲ್ಲ. ರಾತ್ರಿ ಕಾಲ್ ಮಾಡಿದಾಗ ಕಾಲ್ ಸಿಗುತ್ತಿರಲಿಲ್ಲ. ಹಿಂದುತ್ವಕ್ಕಾಗಿ ನನ್ನ ಪ್ರಾಣವನ್ನೇ ಕೊಡುತ್ತೇನೆ ಅಂತಿದ್ದ. ಈಗ ಅವನ ಪ್ರಾಣವನ್ನೇ ತೆಗೆದರು ಎಂದು ದುಃಖಿಸಿದರು. ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆಗೆ ಪಾಕಿಸ್ತಾನ್ ಜಿಂದಾಬಾದ್ ಕಾರಣ: ಆರ್.ಅಶೋಕ್ ಕಿಡಿ
ಹಿಂದೂಗಳು ಹೆದರಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. 85% ಹಿಂದೂಗಳಿದ್ದರೂ ಅವರಿಗೆ ಹೆದರಿ ಬದುಕಬೇಕಾಗಿದೆ. ಹತ್ಯೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಸುಹಾಸ್ ಹತ್ಯೆ ಮಾಡಿದವರಿಗೆ ಕಠಿಣ ಕ್ರಮ ಆಗಲಿದೆ: ಪರಮೇಶ್ವರ್
ಗುರುವಾರ ರಾತ್ರಿ ಮಂಗಳೂರಿನಲ್ಲಿ (Mangaluru) ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು.