ಸುಹಾಸ್ ಶೆಟ್ಟಿ ಹತ್ಯೆಗೂ ಮುನ್ನ ಭರ್ಜರಿ ಪಾರ್ಟಿ ಮಾಡಿದ್ದ ಆರೋಪಿಗಳು!

Public TV
1 Min Read
muzammil Suhas Shetty 1

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಹತ್ಯೆಗೂ ಮುನ್ನ ಆರೋಪಿಗಳು ಭರ್ಜರಿ ಪಾರ್ಟಿ ಮಾಡಿದ್ದ ಫೋಟೋ ಈಗ ಲಭ್ಯವಾಗಿದೆ.

ಚಿಕ್ಕಮಗಳೂರಿನ (Chikkamagaluru) ಕಳಸದ ರೆಸಾರ್ಟ್ (Kalasa Resort) ಒಂದರಲ್ಲಿ ಏ.2 ರಂದು ಆರೋಪಿಗಳು ನೈಟ್‌ ಪಾರ್ಟಿ ಮಾಡಿದ್ದಾರೆ. ಹತ್ಯೆಗೆ ಸ್ಕೆಚ್ ರೂಪಿಸಲೆಂದೇ ಪಾರ್ಟಿ ಮಾಡಿರುವ ಅನುಮಾನ ವ್ಯಕ್ತವಾಗಿದೆ.

ಕ್ಯಾಂಪ್ ಫೈರ್ ಹಾಕಿ ಸುಹಾಸ್‌ ಶೆಟ್ಟಿ ಹತ್ಯೆಯ ಆರೋಪಿಗಳಾದ ಮುಝಮ್ಮಿಲ್, ನಿಯಾಜ್ ಹಾಗೂ ಚಿಕ್ಕಮಗಳೂರು ಮೂಲದ ರಂಜಿತ್ ಪಾರ್ಟಿ ಮಾಡಿದ್ದಾರೆ. ಈ ಮೂವರ ಜೊತೆ ಇನ್ನೂ ಐದು ಜನ ಅಪರಿಚಿತರು ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆಗೆ 50 ಲಕ್ಷ ಫಂಡಿಂಗ್‌ – ಪ್ರಭಾವಿ ಮುಸ್ಲಿಮರ ಬ್ಯಾಂಕ್ ಖಾತೆ ಮೇಲೆ ಕಣ್ಣು!

muzammil Suhas Shetty 2

ಈ ಪಾರ್ಟಿಯಲ್ಲಿ ರಂಜಿತ್‌ನನ್ನು ಮುಝಮ್ಮಿಲ್‌ಗೆ ನಿಯಾಜ್‌ ಪರಿಚಯ ಮಾಡಿಕೊಟ್ಟಿದ್ದ. ಈ ಪಾರ್ಟಿಯಲ್ಲೇ ಸುಹಾಸ್ ಹತ್ಯೆ ಬಗ್ಗೆ ಮಾತುಕತೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಸುಹಾಸ್ ಶೆಟ್ಟಿ ಹತ್ಯೆಗೆ ಫಾಝಿಲ್‌ ಸಹೋದರ ಆದಿಲ್‌ (Adil) 5 ಲಕ್ಷ ರೂ. ಸುಪಾರಿ ನೀಡಿದ್ದ. ಈ ಹಣದ ಪೈಕಿ 3 ಲಕ್ಷ ರೂ.ಹಣವನ್ನು ಮುಂಗಡವಾಗಿ ಪಾವತಿಸಲಾಗಿತ್ತು. ಈ ಹಣದಲ್ಲೇ ಪಾರ್ಟಿ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಇದನ್ನೂ ಓದಿ: ಸುಹಾಸ್ ಶೆಟ್ಟಿ ಬೆನ್ನಲ್ಲೇ ಮಂಗಳೂರಲ್ಲಿ ಮತ್ತೊಬ್ಬ ಹಿಂದೂ ಮುಖಂಡನ ಹತ್ಯೆಗೆ ಸ್ಕೆಚ್

ಮಂಗಳೂರಿನ ಮೊಹಮ್ಮದ್ ಮುಝಮ್ಮಿಲ್‌ 4 ತಿಂಗಳ ಹಿಂದೆ ಸೌದಿ ಅರೇಬಿಯಾದಿಂದ ಬಂದಿದ್ದು ಈತನ ವಿರುದ್ಧ ಪಣಂಬೂರು ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಮೇಸ್ತ್ರಿ ಕೆಲಸ ಮಾಡುತ್ತಿರುವ ನಿಯಾಜ್ ಬಜ್ಪೆ ಶಾಂತಿಗುಡ್ಡೆ ಮಸೀದಿ ಬಳಿ ನೆಲೆಸಿದ್ದ. ಕಳಸ ತಾಲೂಕಿನ ರುದ್ರ ಪಾದದ ರಂಜಿತ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಸುಹಾಸ್ ಮೇಲೆ ದಾಳಿ ಮಾಡಲು ಈತನೇ ಲಾಂಗ್ ತಂದುಕೊಟ್ಟ ಆರೋಪವಿದೆ.

Share This Article