– ಫಾಝಿಲ್ ಕೊಲೆ ಪ್ರತೀಕಾರಕ್ಕೆ ಸುಹಾಸ್ ಹತ್ಯೆ; ಆದಿಲ್ ಬಂಧನ
ಮಂಗಳೂರು: ಫಾಝಿಲ್ ಕೊಲೆಯ ಪ್ರತೀಕಾರಕ್ಕೆ ಸುಹಾಸ್ ಶೆಟ್ಟಿ ಹತ್ಯೆ ಆಗಿದೆ ಎನ್ನಲಾಗುತ್ತಿದೆ. ಸುಹಾಸ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಫಾಝಿಲ್ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ.
ಆದಿಲ್ ಮೆಹರೂಫ್ ಕೊಲೆ ಆರೋಪಿಯಾಗಿದ್ದು, ಈತ ಫಾಝಿಲ್‌ನ ಸಹೋದರ. ಫಾಝಿಲ್ ಅಮಾಯಕ, ಆದರೂ ಆತನ ಹತ್ಯೆ ಮಾಡಿದ್ರು. ಹತ್ಯೆ ಮಾಡಿ ಜೈಲಿಗೆ ಹೋಗಿ ಬಂದವರೆಲ್ಲಾ ಜಾಮೀನು ಮೇಲೆ ಇದ್ದಾರೆ. ಪ್ರವೀಣ್ ನೆಟ್ಟಾರು ಕೊಲೆ ಮಾಡಿದವರು ಇನ್ನೂ ಜೈಲಲ್ಲಿ ಇದ್ದಾರೆ. ಸುಹಾಸ್‌ನ ಕೊಲ್ಲೋ ಮೂಲಕ ಸಂದೇಶ ಕೊಡ್ಬೇಕು ಎಂದು ಆದಿಲ್ ಗುಂಪು ಕಟ್ಟಿಕೊಂಡು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಕರಾವಳಿಯಲ್ಲಿ ಕೋಮುಗಲಭೆ ನಿಗ್ರಹ ಪಡೆ ರಚನೆ: ಸಚಿವ ಪರಮೇಶ್ವರ್ ಘೋಷಣೆ
ಫಾಝಿಲ್‌ನ ಸಹೋದರ ಆದಿಲ್ ಮೆಹರೂಫ್. ಈತ ಸಫ್ವಾನ್ ಗ್ಯಾಂಗ್‌ಗೆ 5 ಲಕ್ಷ ರೂ. ಸುಪಾರಿ ನೀಡಿದ್ದ. ಸುಹಾಸ್ ಹತ್ಯೆ ಪ್ರಕರಣದಲ್ಲಿ ಇದುವರೆಗೆ 8 ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.