ಮಂಗಳೂರು: ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ (Suhas Shetty Murder Case) ಸಂಬಂಧಿಸಿದಂತೆ 8 ಆರೋಪಿಗಳನ್ನು ಬಂಧಿಸಿರುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದ್ದಾರೆ. ಮೇ 1ರಂದು ರಾತ್ರಿ 8.30ರ ಸುಮಾರಿಗೆ ಮಂಗಳೂರು ಹೊರವಲಯದ ಬಜಪೆ ಕಿನ್ನಿಪದವು (Bajpe Kinnipadavu) ಎಂಬಲ್ಲಿ ಬರ್ಬರ ಹತ್ಯೆ ನಡೆದಿತ್ತು.