ನವದೆಹಲಿ: ಟೋಕಿಯೋದಲ್ಲಿ ನಡೆದ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಕನ್ನಡಿಗ, ಉತ್ತರ ಪ್ರದೇಶ ಗೌತಮ್ ಬುದ್ದ ನಗರ ಜಿಲ್ಲೆಯ ಜಿಲ್ಲಾಧಿಕಾರಿ ಸುಹಾಸ್ ಯತಿರಾಜ್‍ಗೆ ಅದೃಷ್ಟ ಖುಲಾಯಿಸಿದ್ದು ಉತ್ತರ ಪ್ರದೇಶ ಸರ್ಕಾರ ವಿಶೇಷ ಪುರಸ್ಕಾರ ನೀಡುವ ಮೂಲಕ ಗೌರವ ಸಲ್ಲಿಸಿದೆ.
ಬ್ಯಾಂಡ್ಮಿಟನ್‍ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸುಹಾಸ್ ಯತಿರಾಜ್‍ಗೆ ಉತ್ತರ ಪ್ರದೇಶ ಸರ್ಕಾರ ನಾಲ್ಕು ಕೋಟಿ ನಗದು ಬಹುಮಾನ ನೀಡಿದ್ದು, ವಿಶೇಷ ತಿದ್ದುಪಡಿ ಮೂಲಕ ವಿಶೇಷ ಗೌರವ ನೀಡಿದೆ.
ಒಲಿಂಪಿಕ್ಸಗೂ ಮುನ್ನ ಉತ್ತರ ಪ್ರದೇಶ ಸರ್ಕಾರ ವಿಜೇಯರಿಗೆ ಬಹುಮಾನ ಘೋಷಣೆ ಮಾಡಿತ್ತು. ಬಂಗಾರ ಪದಕ ವಿಜೇತರಿಗೆ ಐದು ಕೋಟಿ, ಬೆಳ್ಳಿ ಪದಕ ವಿಜೇತರಿಗೆ ನಾಲ್ಕು ಹಾಗೂ ಕಂಚು ಗೆದ್ದವರಿಗೆ ಎರಡು ಕೋಟಿ ನಗದು ನೀಡುವ ಭರವಸೆ ನೀಡಿತ್ತು ಅಂತೆಯೇ ಈಗ ಸುಹಾಸ್ ಯತಿರಾಜ್‍ಗೆ ನಾಲ್ಕು ಕೋಟಿ ನೀಡುವ ಮೂಲಕ ಗೌರವಿಸಿದೆ. ಇದನ್ನೂ ಓದಿ: ನೀವು ನನ್ನ ಫೇವರೆಟ್ – ಬಾಲಕಿಯ ಸಿಹಿ ಮಾತಿಗೆ ನೀರಜ್ ಚೋಪ್ರಾ ಪ್ರತಿಕ್ರಿಯೆ ಏನು ಗೊತ್ತಾ?
ಅಲ್ಲದೇ ಇದೇ ಮೊದಲ ಬಾರಿಗೆ ಸುಹಾಸ್ ವಿಶೇಷ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಐಎಎಸ್ ಅಧಿಕಾರಿಗಳಿಗೆ ತಮ್ಮ ಸೇವಾ ಅವಧಿಯಲ್ಲಿ ನೀಡುವ ಐದು ಇನ್ಕ್ರಿಮೆಂಟ್‍ಗಳನ್ನು ಒಟ್ಟಿಗೆ ನೀಡಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ವಿಶೇಷ ತಿದ್ದುಪಡಿ ಮಾಡಿದೆ. ಅಂತರಾಷ್ಟ್ರೀಯ ಮಟ್ಡದಲ್ಲಿ ಸಾಧನೆ ಮಾಡುವ ಐಎಎಸ್, ಐಪಿಎಸ್ ಸೇರಿ ಸಮಾನ ಶ್ರೇಣಿಯ ಅಧಿಕಾರಿಗಳಿಗೆ ಈ ರೀತಿಯ ಪುರಸ್ಕಾರ ನೀಡಲು ನಿರ್ಮಾನಿಸಿದ್ದು ಸುಹಾಸ್ ಯತಿರಾಜ್ ಮೂಲಕವೇ ಇದು ಆರಂಭವಾಗಿದೆ. ಇದನ್ನೂ ಓದಿ: ಚಿನ್ನಾಭರಣ ಕಳವು ಮಾಡಿರುವುದಾಗಿ ಮಗಳ ವಿರುದ್ಧವೇ ದೂರು ಕೊಟ್ಟ ತಾಯಿ
ಸುಹಾಸ್ ಯತಿರಾಜ್ 2016ರ ಬೀಜಿಂಗ್ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ, 2017ರ ಟರ್ಕಿಶ್ ಓಪನ್‍ನಲ್ಲಿ ಬೆಳ್ಳಿ, 2018 ರ ಜಕಾರ್ತಾ ಏಷ್ಯನ್ ಪ್ಯಾರಾ ಗೇಮ್ಸ್‍ನಲ್ಲಿ ಕಂಚು, 2018ರ ರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ, 2019ರ ಐಲೆರ್ಂಡ್ ಓಪನ್‍ನಲ್ಲಿ ಬೆಳ್ಳಿ, 2019 ರ ಟರ್ಕಿಶ್ ಓಪನ್‍ನಲ್ಲಿ ಚಿನ್ನ, 2020 ರ ಬ್ರೆಜಿಲ್ ಓಪನ್‍ನಲ್ಲಿ ಚಿನ್ನ 2020 ಪೆರು ಓಪನ್‍ನಲ್ಲಿ ಚಿನ್ನ, 2021ರ ಟೋಕಿಯೊ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.