ಬಾಲಿವುಡ್‌ನ ಸ್ಟಾರ್ ನಟ ಶಾರುಖ್ ಖಾನ್ (Shah Rukh Khan) ಪುತ್ರಿ ಸುಹಾನಾ ಖಾನ್ (Suhana Khan) ಅವರು ಬಿಗ್ ಬಿ ಮೊಮ್ಮಗ ಅಗಸ್ತ್ಯ ನಂದ ಬರ್ತ್‌ಡೇ ವಿಶ್ ಮಾಡಿದ್ದಾರೆ. ಇಬ್ಬರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆಡೇಟಿಂಗ್ ವಿಚಾರ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:BBK 11: ಒಂದು ಬಾಗಿಲು ಇದೆ ಹೊರಗಡೆ ಹೋಗೋಕೆ- ಅವಾಚ್ಯ ಪದ ಬಳಸಿದ ರಜತ್‌ಗೆ ಕಿಚ್ಚನ ಕ್ಲಾಸ್
ಶಾರುಖ್ ಪುತ್ರಿ ಸುಹಾನಾ ಮತ್ತು ಅಗಸ್ತ್ಯ (Agastya Nanda) ಡೇಟಿಂಗ್ ವಿಚಾರ ಹಳೇಯದು. ಆದರೆ ಈ ವಿಚಾರಕ್ಕೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಇದೀಗ ಮತ್ತೆ ಇಬ್ಬರ ಡೇಟಿಂಗ್ ವಿಚಾರಕ್ಕೆ ಪುಷ್ಠಿ ನೀಡುವಂತಹ ಫೋಟೋವೊಂದು ಸಖತ್ ವೈರಲ್ ಆಗುತ್ತಿದೆ. ಅಗಸ್ತ್ಯ ಹುಟ್ಟುಹಬ್ಬಕ್ಕೆ ನಟಿ, ಬ್ಲ್ಯಾಕ್ & ವೈಟ್ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಸುಹಾನಾ ಮುದ್ದಾದ ನಗು ಬೀರುತ್ತಾ ಅಗಸ್ತ್ಯನ ಕಿವಿ ಹಿಂಡಿದ್ದಾರೆ. ಅದಕ್ಕೆ ‘ಹ್ಯಾಪಿ ಬರ್ತ್‌ಡೇ’ ಅಂತ ಕ್ಯಾಪ್ಷನ್ ನೀಡಿದ್ದಾರೆ.
ಈ ಜೋಡಿ ಒಡನಾಟ ನೋಡಿ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ನೆಟ್ಟಿಗರಿಂದ ಕಾಮೆಂಟ್‌ಗಳ ಸುರಿಮಳೆ ಹರಿದು ಬರುತ್ತಿದೆ. ರೀಲ್‌ನಲ್ಲಿ ಜೊತೆಯಾಗಿ ನಟಿಸಿದ್ದಾರೆ. ರಿಯಲ್ ಆಗಿಯೂ ಜೋಡಿಯಾದ್ರೆ ಚೆನ್ನಾಗಿರುತ್ತದೆ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ. ಡೇಟಿಂಗ್ ಕುರಿತು ಹರಿದಾಡುತ್ತಿರುವ ವಿಚಾರಕ್ಕೆ ಸುಹಾನಾ, ಅಗಸ್ತ್ಯ ಪ್ರತಿಕ್ರಿಯೆ ನೀಡುತ್ತಾರಾ? ಎಂದು ಕಾದುನೋಡಬೇಕಿದೆ.
ಅಂದಹಾಗೆ, 2023ರಲ್ಲಿ ರಿಲೀಸ್ ಆಗಿದ್ದ ‘ದಿ ಆರ್ಚೀಸ್’ ಎಂಬ ಸಿನಿಮಾದಲ್ಲಿ ಅಗಸ್ತ್ಯ, ಸುಹಾನಾ ಖಾನ್, ಖುಷಿ ಕಪೂರ್, ವೇದಾಂಗ್ ರೈನಾ ಸೇರಿದಂತೆ ಅನೇಕರು ನಟಿಸಿದರು.