ರಾಯಚೂರು: ತಾಲೂಕಿನ ದೇವಸುಗೂರಿನ ಸುಗೂರೇಶ್ವರ ದೇವಸ್ಥಾನ ತನ್ನ ವಿಶಿಷ್ಠ ವಾಸ್ತುಶಿಲ್ಪದಿಂದ ಗ್ರಹಣ ಮುಕ್ತವಾಗಿದೆ. ಹೀಗಾಗಿ ಕೇತುಗ್ರಸ್ತ ಸೂರ್ಯಗ್ರಹಣದ (Solar Eclipse) ವೇಳೆಯೂ ಎಂದಿನಂತೆ ಪೂಜಾ ಕೈಂಕರ್ಯಗಳು ನೆರವೇರುತ್ತಿವೆ.
ಇತ್ತ ಮಂತ್ರಾಲಯದಲ್ಲೂ (Mantralaya) ರಾಘವೇಂದ್ರ ಸ್ವಾಮಿ ಮಠ ಹಾಗೂ ರಾಯರ ಶಾಖಾ ಮಠಗಳಲ್ಲಿ ಭಕ್ತರಿಗೆ ಯಾವುದೇ ನಿರ್ಬಂಧವಿಲ್ಲ. ಎಂದಿನಂತೆ ರಾಯರ ವೃಂದಾವನ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಗ್ರಹಣದ ವೇಳೆ ದಿನನಿತ್ಯದ ಪೂಜೆ ಪುರಸ್ಕಾರಗಳಿಗೆ ಮಾತ್ರ ನಿರ್ಬಂಧ ಮಾಡಲಾಗಿದೆ. ಗ್ರಹಣದ ಬಳಿಕ ರಾಯರ ಮಠದಲ್ಲಿ (Sri Raghavendra Swamy Mutt) ಗ್ರಹಣ ಶಾಂತಿ ಹೋಮ ನಡೆಯಲಿದೆ. ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮಿ ಗ್ರಹಣ ಶಾಂತಿ ಹೋಮ ನೆರವೇರಿಸಲಿದ್ದಾರೆ.
Advertisement
Advertisement
ಇನ್ನೂ ರಾಯಚೂರಿನ (Raichur) ಜವಾಹರ್ ನಗರದ ರಾಘವೇಂದ್ರ ಸ್ವಾಮಿಗಳ ಶಾಖಾ ಮಠ ಹಾಗೂ ಸತ್ಯನಾಥ ಕಾಲೋನಿಯ ಉತ್ತರಾಧಿ ಮಠದಲ್ಲಿ ಗ್ರಹಣದ ವೇಳೆ ಗ್ರಹಣ ಶಾಂತಿ ಹೋಮ ಹಾಗೂ ಗೋಗ್ರಾಸ ಹೋಮ ಜರುಗಲಿವೆ. ಗ್ರಹಣದ ಬಳಿಕ ದೇವಾಲಯ, ಮಠಗಳ ಸ್ವಚ್ಛತಾ ಕಾರ್ಯ ನಡೆಯಲಿದೆ. ಸೂರ್ಯಾಸ್ತದ ಸಮಯದಲ್ಲಿ ಗ್ರಹಣ ಮುಕ್ತಾಯವಾಗುವ ಹಿನ್ನೆಲೆ ಸಂಜೆ ವೇಳೆ ಯಾವುದೇ ಪೂಜೆಗಳು ನಡೆಯುವುದಿಲ್ಲ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
Advertisement
Advertisement
ಸೂಗುರೇಶ್ವರ ದೇವಾಲಯಕ್ಕಿಲ್ಲ ಎಫೆಕ್ಟ್:
ರಾಯಚೂರು (Mantralaya) ತಾಲೂಕಿನ ದೇವಸುಗೂರಿನ ಸೂಗುರೇಶ್ವರ ದೇವಸ್ಥಾನ ತನ್ನ ವಿಶಿಷ್ಟವಾದ ವಾಸ್ತುಶಿಲ್ಪದಿಂದಾಗಿ ಗ್ರಹಣ ಮುಕ್ತವಾಗಿದೆ. ಹೀಗಾಗಿ ಕೇತುಗ್ರಸ್ತ ಸೂರ್ಯಗ್ರಹಣದ ವೇಳೆಯೂ ದೇವಾಲಯದ ಗರ್ಭಗುಡಿ ಬಾಗಿಲು ಬಂದ್ ಆಗುವುದಿಲ್ಲ. ಎಂದಿನಂತೆ ಎಲ್ಲಾ ಪೂಜಾ ಕೈಂಕರ್ಯಗಳು ಯಾವುದೇ ಅಡ್ಡಿಯಿಲ್ಲದೇ ಸಾಗುತ್ತವೆ.
800 ವರ್ಷಗಳ ಇತಿಹಾಸ:
ಸುಗೂರೇಶ್ವರ ದೇವಸ್ಥಾನದಲ್ಲಿ ಗ್ರಹಣದೋಷದ ವಾಸ್ತುಶಿಲ್ಪದ ಶಾಸನಗಳು, ಹಾಲಗಂಭಗಳು ಪ್ರತಿಷ್ಟಾಪನೆಯಾಗಿವೆ. ಇಲ್ಲಿನ ಎರಡು ಶಾಸನ ಕಂಬಗಳ ಮೇಲೆ ಸೂರ್ಯಚಂದ್ರ ಕೆತ್ತನೆಗಳಿದ್ದು, 13ನೇ ಶತಮಾನದಿಂದಲೂ ಗ್ರಹಣಮುಕ್ತ ದೇವಾಲಯವಾಗಿದೆ. ಈ ಹಿನ್ನೆಲೆ ಸೂಗುರೇಶ್ವರ ದೇವಸ್ಥಾನಕ್ಕೆ ಗ್ರಹಣದೋಷ ತಟ್ಟುವುದಿಲ್ಲ, ದೋಷಪರಿಹಾರವನ್ನ ಇಲ್ಲಿನ ವಾಸ್ತುಶಿಲ್ಪವೇ ಮಾಡುತ್ತದೆ ಅನ್ನೋ ಪ್ರತೀತಿಯಿದೆ. ಹೀಗಾಗಿ ಸೂರ್ಯಗ್ರಹಣದ ವೇಳೆಯೂ ಇಲ್ಲಿ ತ್ರಿಕಾಲ ಪೂಜೆಗಳು ನಡೆಯುವುದು ವಿಶೇಷವಾಗಿದೆ.