ಬೆಂಗಳೂರು: ವರ್ಷಕ್ಕೊಂದು ಬಾರಿ ಕೆಇಆರ್‌ಸಿ (KERC) ಮೂಲಕ ಇಂಧನ ಇಲಾಖೆ ದರ ಏರಿಕೆ ಮಾಡಿ, ಇದರಿಂದ ಗ್ರಾಹಕರಿಗೆ ಹೊರೆಯಾಗುವುದನ್ನು ನೋಡಿದ್ದೇವೆ. ಆದರೀಗ ಬಸ್‌ದರ (Bus) ಏರಿಕೆಗೂ ಇದೇ ಮಾಡೆಲ್ ಅನುಸರಿಸುವಂತೆ ಸಾರಿಗೆ ಇಲಾಖೆಗೆ ಗಂಭೀರ ಸಲಹೆ ಬಂದಿದೆ.
ಇಂಧನ ಇಲಾಖೆಯಲ್ಲಿ ಎಸ್ಕಾಂಗಳು ವರ್ಷಕ್ಕೊಮ್ಮೆ ಕೆಇಆರ್‌ಸಿ ಮುಂದೆ ದರ ಪ್ರಸ್ತಾಪ ಇಡುತ್ತದೆ. ಕೆಇಆರ್‌ಸಿ ಕೂಡ ಒಪ್ಪಿಗೆ ನೀಡಿ ವರ್ಷಕ್ಕೊಮ್ಮೆ ದರ ಏರಿಕೆ ಮಾಡುತ್ತಿದೆ. ಇದೇ ಮಾಡೆಲ್‌ನ್ನು ಈಗ ಸಾರಿಗೆ ಇಲಾಖೆಗೂ ಅನ್ವಯ ಮಾಡುವಂತೆ ಹಿರಿಯ ಐಎಎಸ್ ಅಧಿಕಾರಿ ಶ್ರೀನಿವಾಸ್ ಮೂರ್ತಿ ಅವರ ಏಕ ಸದಸ್ಯ ಸಮಿತಿ ಸಲಹೆ ನೀಡಿದೆ.
Advertisement
Advertisement
ಇಂಧನ ಇಲಾಖೆಯಲ್ಲಿ ಹೇಗೆ ವರ್ಷಕ್ಕೊಮ್ಮೆ ದರ ಏರಿಕೆ ಆಗುತ್ತೋ ಅದೇ ತರ ಟಿಕೆಟ್ ರೇಟ್ (Bus Ticket Rate) ಅನ್ನು ಏರಿಸಬೇಕು. ಕೆಇಆರ್‌ಸಿ ಮಾದರಿಯಲ್ಲಿ ಸಾರಿಗೆ ಇಲಾಖೆಯಲ್ಲೂ ಟಿಕೆಟ್ ರೇಟ್ ಬಗ್ಗೆ ಮತ್ತು ಆರ್ಥಿಕ ನಿರ್ವಹಣೆ ಮಾಡಲು ಒಂದು ಬೋರ್ಡ್ ಸ್ಥಾಪಿಸುವಂತೆ ಸಲಹೆ ನೀಡಲಾಗಿದೆ. ಇದನ್ನೂ ಓದಿ: ದೇಶದಲ್ಲಿ ಫಸ್ಟ್ – ಶಂಕಿತ ಉಗ್ರರ ಕಾಲಿಗೆ ಜಿಪಿಎಸ್ ಬಳೆ
Advertisement
Advertisement
ಸದ್ಯ ಈ ಪ್ರಸ್ತಾವನೆಗೆ ಸಾರಿಗೆ ಇಲಾಖೆ ಕಾದು ನೋಡುವ ತಂತ್ರ ಅನುಸರಿಸಲು ನಿರ್ಧರಿಸಿದೆ. ಬೊಮ್ಮಾಯಿ ಸರ್ಕಾರದಲ್ಲಿ ಈ ಸಮಿತಿ ರಚನೆಯಾಗಿದ್ದು ಈಗ ವರದಿ ಕೊಡಲಾಗಿದೆ. 2015ರಿಂದ ಬಸ್ ಟಿಕೆಟ್ ರೇಟ್ ಹೆಚ್ಚು ಮಾಡಿಲ್ಲ. ಜೊತೆಗೆ ಡಿಸೇಲ್ ಮತ್ತು ಉಪಕರಣಗಳ ಬೆಲೆ ಏರಿಕೆಯಾಗಿದೆ. ದರ ಏರಿಕೆ ಅನಿವಾರ್ಯವಾಗಿದ್ದರೂ ಸದ್ಯಕ್ಕೆ ಟಿಕೆಟ್ ದರ ಏರಿಕೆ ಮಾಡಲ್ಲ ಎಂದು ಗುಡ್ ನ್ಯೂಸ್ ಕೊಟ್ಟಿದೆ. ಇದನ್ನೂ ಓದಿ: ಬೆಂಗಳೂರು ಕಂಬಳಕ್ಕೆ 1 ಕೋಟಿ ರೂ. ಘೋಷಿಸಿದ ಸಿಎಂ – ಐಶ್ವರ್ಯಾ ರೈ, ಅನುಷ್ಕಾ ಶೆಟ್ಟಿ ಸಿನಿಸ್ಟಾರ್ಸ್ ಭಾಗಿ