ಸ್ಯಾಂಡಲ್ ವುಡ್ ಹೆಸರಾಂತ ನಟ ಡಾರ್ಲಿಂಗ್ ಕೃಷ್ಣ (Darling Krishna) ಇಂದು ಹುಟ್ಟು ಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. ಅವರ ಹುಟ್ಟು ಹಬ್ಬಕ್ಕಾಗಿ ‘ಶುಗರ್ ಫ್ಯಾಕ್ಟರಿ’ (Sugar Factory) ಚಿತ್ರತಂಡ ವಿಶೇಷ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದೆ. ಈ ಮೂಲಕ ತನ್ನ ಚಿತ್ರದ ನಾಯಕನಿಗೆ ಚಿತ್ರತಂಡ ಶುಭಾಶಯ ತಿಳಿಸಿದೆ.
ದೀಪಕ್ ಅರಸ್ (Deepak) ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ನಟಿ ಅಮೂಲ್ಯ ಸಹೋದರರಾಗಿರುವ ದೀಪಕ್ ಅರಸ್ ಈ ಹಿಂದೆ ಅಮೂಲ್ಯ, ರಾಕೇಶ್ ಅಡಿಗ ಜೋಡಿಯ ಮನಸಾಲಜಿ ಚಿತ್ರ ನಿರ್ದೇಶಿಸಿದ್ದರು, ಇದೀಗ ಎರಡನೇ ಸಿನಿಮಾವಾಗಿ ಶುಗರ್ ಫ್ಯಾಕ್ಟರಿ ಚಿತ್ರ ನಿರ್ದೇಶನ ಮಾಡುತ್ತಿದ್ದು, ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನ ದೀಪಕ್ ಅರಸ್ ಅವರೇ ಬರೆದಿದ್ದಾರೆ. ಇದನ್ನೂ ಓದಿ:ಶರ್ವಾನಂದ್ ರಿಸೆಪ್ಷನ್ ಸಂಭ್ರಮದಲ್ಲಿ ಸಿನಿ ತಾರೆಯರ ದಂಡು
ಫನ್ ರೋಮ್ಯಾಂಟಿಕ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಅದ್ವಿತಿ ಶೆಟ್ಟಿ, ಸೊನಾಲ್ ಮೊಂಥೆರೋ, ಶಿಲ್ಪಾ ಶೆಟ್ಟಿ ಶುಗರ್ ಫ್ಯಾಕ್ಟರಿ ನಟಿಮಣಿಯರಾಗಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್, ಅರಸು ಅಂತಾರೆ, ಚಂದನ್ ಶೆಟ್ಟಿ ಸಾಹಿತ್ಯ ಬರೆಯುತ್ತಿದ್ದಾರೆ. ಕಬೀರ್ ರಫಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣದಲ್ಲಿ ಶುಗರ್ ಫ್ಯಾಕ್ಟರಿ ಚಿತ್ರ ಸೆರೆಯಾಗಿದೆ.
ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್.ಗಿರೀಶ್ ಶುಗರ್ ಫ್ಯಾಕ್ಟರಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮೈಸೂರು, ಗೋವಾ ಹಾಗೂ ವಿದೇಶಗಳಲ್ಲೂ ಸಿನಿಮಾ ಸೆರೆ ಹಿಡಿಯಲಾಗಿದೆ. ರಂಗಾಯಣ ರಘು, ಗೋವಿಂದೇ ಗೌಡ, ಸೂರಜ್ ಕುಮಾರ್, ಮಹಂತೇಶ್, ಪವನ್ ಎಸ್ ನಾರಾಯಣ್, ರಾಯಲ್ ರವಿ, ಅವೀಕ್ಷ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಬಳಗದಲ್ಲಿದ್ದಾರೆ.
ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ “ಶುಗರ್ ಫ್ಯಾಕ್ಟರಿ” ಚಿತ್ರ ಆರಂಭದ ದಿನದಿಂದಲೂ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಇತ್ತೀಚಿಗೆ ಈ ಚಿತ್ರದ ಟೈಟಲ್ ಟ್ರ್ಯಾಕ್ ಮಂತ್ರಿಮಾಲ್ ನಲ್ಲಿ ಬಿಡುಗಡೆಯಾಯಿತು. ಅಲ್ಲಿ ನೆರದಿದ್ದ ಅಪಾರ ಜನಸ್ತೋಮ ಶೀರ್ಷಿಕೆ ಹಾಡು ಬಿಡುಗಡೆಗೆ ಸಾಕ್ಷಿಯಾದರು. ಅಲ್ಲಿದ್ದ ಆರು ಜನ ಸಿನಿಪ್ರೇಕ್ಷಕರೆ, ಈ ಹಾಡನ್ನು ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.
ಚಿತ್ರದಲ್ಲಿ ನಾಯಕ ಹಾಗೂ ನಾಯಕಿ ಪಾರ್ಟಿಯಲ್ಲಿ ಹಾಡಿ, ಕುಣಿಯುವ ಈ ಹಾಡು, ಪಾರ್ಟಿ ಪ್ರಿಯರಿಗೆ ಸರ್ವಕಾಲಕ್ಕೂ ಮೆಚ್ಚುಗೆಯ ಗೀತೆಯಾಗಲಿದೆ. ತಮ್ಮ ವಿಶಿಷ್ಟ ಕಂಠದ ಮೂಲಕ ಜನಪ್ರಿಯರಾಗಿರುವ ಚಂದನ್ ಶೆಟ್ಟಿ, ಈ ಹಾಡನ್ನು ಬರೆದು ಹಾಡಿದ್ದಾರೆ. ರುಚಿರ ವೈದ್ಯ English rap ಗೆ ಧ್ವನಿಯಾಗಿದ್ದಾರೆ. ಕಬೀರ್ ರಫಿ ಸಂಗೀತ ನೀಡಿದ್ದಾರೆ.