ಬೆಳಗಾವಿ: ಇಲ್ಲಿನ ಸಕ್ಕರೆ ಕಾರ್ಖಾನೆ ಬಾಯ್ಲರ್ ಸ್ಫೋಟದಲ್ಲಿ (Sugar factory Boiler Blast) 8 ಕಾರ್ಮಿಕರು ಪ್ರಾಣ ಬಿಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಖಾನೆಯು ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ವರ್ತಿಸುತ್ತಿದೆ.
ಮೃತಪಟ್ಟಿರುವ 8 ಜನರ ಪೈಕಿ ಕೇವಲ ಓರ್ವ ಕಾರ್ಮಿಕನಿಗೆ ಮಾತ್ರ ಪರಿಹಾರ ಘೋಷಣೆ ಮಾಡಿದೆ. ಸೂಕ್ತ ಪರಿಹಾರಕ್ಕಾಗಿ ಕುಟುಂಬಸ್ಥರ ಒತ್ತಾಯ ಹಿನ್ನೆಲೆ ಮೃತ ಮಂಜುನಾಥ ಕಾಜಗಾರ್ ಕುಟುಂಬಕ್ಕೆ 18 ಲಕ್ಷ ಪರಿಹಾರ ನೀಡುವ ಮೌಖಿಕ ಭರವಸೆಯನ್ನು ನೀಡಿದೆ. ಇದನ್ನೂ ಓದಿ: ಬೆಳಗಾವಿ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ – ಮತ್ತೆ ಮೂವರು ಸಾವು, ಮೃತರ ಸಂಖ್ಯೆ 7ಕ್ಕೆ ಏರಿಕೆ
ಈ ಹಿನ್ನೆಲೆ ಬೈಲಹೊಂಗಲದಲ್ಲಿ ಗ್ರಾಮಸ್ಥರು ಪ್ರತಿಭಟನೆಯನ್ನು ನಡೆಸಿದ್ದರು. ಆದರೂ ಸಹ ಕಾರ್ಖಾನೆಯು ಈವರೆಗೆ ಕಾರ್ಮಿಕರಿಗೆ ಪರಿಹಾರದ ಮಾಹಿತಿಯನ್ನು ನೀಡಿಲ್ಲ. ಮಾಜಿ ಸಂಸದ ಪ್ರಭಾಕರ್ ಕೋರೆ, ಉದ್ಯಮಿ ವಿಜಯ ಮೆಟಗುಡ್ಡ ಹಾಗೂ ವಿಕ್ರಂ ಇನಾಮ್‌ದಾರ್ ಪಾಲುದಾರಿಕೆ ಕಾರ್ಖಾನೆ ಮೃತರಿಗೆ ಪರಿಹಾರ ನೀಡುವ ಕುರಿತು ಅಧಿಕೃತವಾಗಿ ಘೋಷಣೆ ಮಾಡಿಲ್ಲ.
ಇನಾಮ್‌ದಾರ್ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯೂ ಮೌನಕ್ಕೆ ಜಾರಿದೆ. ಮೃತರ ಕುಟುಂಬಸ್ಥರಿಗೆ ಸಾಂತ್ವನವನ್ನೂ ಹೇಳದ ಕಾರ್ಖಾನೆಯ ಆಡಳಿತ ಮಂಡಳಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ – ಇಬ್ಬರು ಕಾರ್ಮಿಕರು ಸಾವು, 6 ಮಂದಿ ಗಂಭೀರ


