ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ಯಾರಾ ಪವರ್ ಲಿಫ್ಟಿಂಗ್‌ನಲ್ಲಿ ಭಾರತದ ಸುಧೀರ್ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ಪುರುಷರ ಹೆವಿವೇಯ್ಟ್ ವಿಭಾಗದಲ್ಲಿ ಸುಧೀರ್ ತಮ್ಮ ಮೊದಲ ಪ್ರಯತ್ನದಲ್ಲಿ 208 ಕೆ.ಜಿ ಭಾರ ಎತ್ತಿದರು. ಇದರಿಂದ 134.5 ಅಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನ ಗಳಿಸಿದ್ದಾರೆ. ಈ ಮೂಲಕ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಚಿನ್ನ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಸುಧೀರ್ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಚಿನ್ನದ ಪದಕ ಗೆಲ್ಲಲು ಭಾರತದ ಮೀರಾಬಾಯಿ ಚಾನು ನನಗೆ ಸ್ಫೂರ್ತಿ ಎಂದ ಪಾಕ್ ವೇಟ್ ಲಿಫ್ಟರ್
Advertisement
Advertisement
ಇದೇ ಗೇಮ್‌ನಲ್ಲಿ ಪ್ರತಿಸ್ಪರ್ಧಿಗಳಾಗಿದ್ದ ನೈಜೀರಿಯಾದ ಇಕೆಚುಕ್ವು ಕ್ರಿಶ್ಚಿಯನ್ ಉಬಿಚುಕ್ವು 133.6 ರೊಂದಿಗೆ ಬೆಳ್ಳಿ ಮತ್ತು ಸ್ಕಾಟ್ಲೆಂಡ್‌ನ ಮಿಕ್ಕಿ ಯೂಲ್ 130.9 ಕಂಚಿನ ಪದಕ ಗೆದಿದ್ದಾರೆ. ಕ್ರಿಸ್ಟಿಯನ್ 197 ಕೆಜಿ ಎತ್ತಿದರೆ ಯೂಲ್ 192 ಕೆಜಿ ಎತ್ತಿದರು.
Advertisement
ಸುಧೀರ್ 2013ರಲ್ಲಿ ಪವರ್ ಲಿಫ್ಟಿಂಗ್ ಆರಂಭಿಸಿದರು. ಈ ಹಿಂದೆ ಸೌತ್ ಕೊರಿಯಾದಲ್ಲಿ ನಡೆದ ಪ್ಯಾರಾ ಪವರ್ ಲಿಫ್ಟಿಂಗ್ ಏಷ್ಯಾ ಒಕೆಶನ್ ಓಪನ್ ಚಾಂಪಿಯನ್ ಶಿಪ್‌ನಲ್ಲಿ 88 ಕೆಜಿ ವಿಭಾಗದ ಪುರುಷರ ವಿಭಾಗದಲ್ಲಿ 214 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ಗೆದ್ದಿದ್ದರು. 2022ರ ಏಷ್ಯಾ ಪ್ಯಾರಾ ಗೇಮ್ಸ್‌ಗೂ ಅವರು ಅರ್ಹತೆ ಪಡೆದಿದ್ದಾರೆ. ಈ ನಡುವೆ ಕಾಮನ್‌ವೆಲ್ತ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.