
ಬಾಗಲಕೋಟೆ: ಇನ್ಫೋಸಿಸ್ (Infosys) ಮುಖ್ಯಸ್ಥೆ ಸುಧಾಮೂರ್ತಿ ಅವರಿಗೆ ಪದ್ಮಭೂಷಣ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ಕೆಹೆಚ್ ಬಿ ಕಾಲೋನಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ಸುಧಾಮೂರ್ತಿ (udhamurthy) ಅವರಿಗೆ ಆರತಿ ಬೆಳಗಿ ಕುಂಕುಮ ಹಚ್ಚಿ ಕುಟುಂಬ ಸಂತಸ ವ್ಯಕ್ತಪಡಿಸಿದೆ. ಇದನ್ನೂ ಓದಿ: ಮೋದಿ ಪ್ರಧಾನಿಯಾಗಿದ್ರಿಂದ ನನಗೆ ಪ್ರಶಸ್ತಿ ಬಂತು, ಇಲ್ಲದಿದ್ದರೆ ಬರುತ್ತಿರಲಿಲ್ಲ: ಎಸ್.ಎಲ್ ಭೈರಪ್ಪ
ಸುಧಾಮೂರ್ತಿ ಅವರ ಅಣ್ಣನ ಮಗ ನಾರಾಯಣ ಕುಲಕರ್ಣಿ, ಪತ್ನಿ ವನಜಾ ಕುಲಕರ್ಣಿ, ಮಗಳು ಶ್ರೇಯಾ ಕುಲಕರ್ಣಿ ಆರತಿ ಬೆಳಗಿ ಸಂಭ್ರಮಿಸಿದ್ದಾರೆ. ಸಾಮಾನ್ಯ ಮಹಿಳೆಯಂತೆ ನೆಲದ ಕೂತು ಆರತಿ ಮಾಡಿಸಿಕೊಂಡ ಸುಧಾಮೂರ್ತಿ, ಆರತಿ ತಟ್ಟೆಗೆ ಹಣ ಹಾಕಿದ್ದಾರೆ.
ಗುರುವಾರ ಅವರು ಬಾಗಲಕೋಟೆ (Bagalkote) ಗೆ ಭೇಟಿ ನೀಡಿದ್ದರು. ಹೀಗಾಗಿ ಜಮಖಂಡಿ ನಗರಕ್ಕೆ ಬಂದ ವೇಳೆಯೇ ಪ್ರಶಸ್ತಿ ಘೋಷಣೆಯಾಗಿದ್ದಕ್ಕೆ ಸಂಬಂಧಿಕರ ಸಂತಸ ಇಮ್ಮಡಿಯಾಗಿದೆ. ನಿನ್ನೆ ಜಮಖಂಡಿಯಲ್ಲಿ ನಾರಾಯಣ ಕುಲಕರ್ಣಿ ಅವರ ಮನೆಯಲ್ಲಿ ವಾಸ್ತವ್ಯ ಮಾಡಿದ್ದ ಸುಧಾಮೂರ್ತಿಯವರು ಶುಕ್ರವಾರ ಬೆಳಗ್ಗೆ ಪಾಂಡವಪುರಕ್ಕೆ ತೆರಳಿದರು.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k