ಧಾರವಾಡ: ವಿದ್ಯಾಕಾಶಿ ಧಾರವಾಡ (Dharwad) ಕ್ಕೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಆವರು ಆಗಮಿಸಿದ್ದರು. ಐಐಐಟಿ ಉದ್ಘಾಟನೆ ಮಾಡಿದ ರಾಷ್ಟ್ರಪತಿ ಮುರ್ಮು ಅವರಿಗೆ ಸುಧಾ ಮೂರ್ತಿಯವರು ಕೌದಿ ಕೊಟ್ಟು ಗೌರವಿಸಿದ್ದಾರೆ.
ವೇದಿಕೆ ಮೇಲೆ ರಾಷ್ಟ್ರಪತಿ (President) ಅವರಿಗೆ ಸ್ವಾಗತಿಸಿಕೊಂಡ ಸುಧಾ ಮೂರ್ತಿ ಅವರು, ಕೌದಿ ಜೊತೆ ರೇಷ್ಮೆ ಸೀರೆ ಕೂಡಾ ಕೊಟ್ಟಿದ್ದಾರೆ. ಇದನ್ನೂ ಓದಿ: ಡಿಸೆಂಬರ್‌ನಲ್ಲಿ ಮೋದಿಯವರಿಂದ್ಲೇ ಧಾರವಾಡ IIT ಕ್ಯಾಂಪಸ್ ಉದ್ಘಾಟನೆ – ಜೋಶಿ
Advertisement
Advertisement
ರಾಯಚೂರಿನ ಮೂರು ಸಾವಿರ ದೇವದಾಸಿಯರು ಈ ಕೌದಿಯನ್ನ ತಯಾರು ಮಾಡಿದ್ದಾರೆ. ಇವರನ್ನು ಸಮಾಜಕ್ಕೆ ಮರಳಿ ತರುವಲ್ಲಿ ಸುಧಾ ಮೂರ್ತಿ (SudhaMurthy) ಸಾಕಷ್ಟು ಪ್ರಯತ್ನ ಮಾಡಿದ್ದರು. ಅದಕ್ಕೆ ಆ ದೇವದಾಸಿಯರು ಇವರಿಗೆ ತಾವು ತಯಾರಿಸಿದ ಕೌದಿಯನ್ನ ಕೊಟ್ಟಿದ್ದರು. ಆ ಕೌದಿ ಮೇಲೆಯೇ ಸುಧಾ ಮೂರ್ತಿ ಅವರು ಹಿಂದಿಯಲ್ಲಿ 3 ಹಜಾರ್ ಟಾಕೆ ಹಾಗೂ ಇಂಗ್ಲೀಷ್ ನಲ್ಲಿ 3 thousand stitchs ಎಂದು ಪುಸ್ತಕ ಬರೆದಿದ್ರು. ಆ ಪುಸ್ತಕ (Book) ಕೂಡಾ ಸುಧಾ ಮೂರ್ತಿ ಇವತ್ತು ರಾಷ್ಟ್ರಪತಿಗೆ ನೀಡಿದರು. ರಾಷ್ಟ್ರಪತಿ ಕೂಡಾ ಇವರ ಈ ಗಿಫ್ಟ್ ನೋಡಿ ಸಂತಸ ಪಟ್ಟರು ಎಂದು ಸ್ವತಃ ಸುಧಾ ಮೂರ್ತಿ ಅವರೇ ಹೇಳಿದ್ದಾರೆ.
Advertisement
Advertisement
ರಾಷ್ಟ್ರಪತಿಗೆ ಮಧ್ಯಾಹ್ನ ಊಟದಲ್ಲಿ ಉತ್ತರ ಕರ್ನಾಟಕ (Uttara Karnataka) ದ ಬಿಳಿ ರೊಟ್ಟಿ, ಮೆಂತಿ ರೊಟ್ಟಿ, ಗೋಧಿ ಪಾಯಸ ಸೇರಿ ಹಲವು ಬಗೆಯ ಊಟ ತಯಾರು ಮಾಡಿದರು. ಆದರೆ ರಾಷ್ಟ್ರಪತಿ ಅವರು ಏನು ಊಟ ಮಾಡಿದ್ದಾರೆ ಅಂತಾ ನಮಗೆ ಗೊತ್ತಿಲ್ಲ ಎಂದು ಸುಧಾ ಮೂರ್ತಿ ಹೇಳಿದರು. ಇದನ್ನೂ ಓದಿ: ಮೈಸೂರು ಸಿಲ್ಕ್ ಸೀರೆ ಧರಿಸಿ ದಸರಾಗೆ ಚಾಲನೆ ನೀಡಿದ ದ್ರೌಪದಿ ಮುರ್ಮು
ರಾಷ್ಟ್ರಪತಿಗೆ ಕೊಟ್ಟ ಕೌದಿಯನ್ನೇ ಸುಧಾ ಮೂರ್ತಿ ಅವರು ರಾಜ್ಯಪಾಲ ಗೆಹ್ಲೋಟ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಗೂ ಕೊಟ್ಟಿದ್ದಾರೆ. ವೇದಿಕೆಯಲ್ಲಿ ರಾಷ್ಟ್ರಪತಿ ಬರುವ ಮೊದಲೇ ಈ ಮೂವರಿಗೆ ಸುಧಾ ಮೂರ್ತಿ ಈ ಕೌದಿ ಕೊಟ್ಟಿದ್ದಾರೆ.