– ರಾತ್ರಿಯೊಳಗೆ ಕೋವಿಡ್ ಗೈಡ್‌ಲೈನ್ಸ್ ರಿಲೀಸ್
– ಮೂರನೇ ಡೋಸ್‍ನ್ನು ಎಲ್ಲರೂ ಪಡೆಯಬೇಕು
– ಸಿಎಂ ನೇತೃತ್ವದ ಕೋವಿಡ್ ಸಭೆ
– ಮೂರನೇ ಡೋಸ್‍ನ್ನು ಎಲ್ಲರೂ ಪಡೆಯಬೇಕು
– ಸಿಎಂ ನೇತೃತ್ವದ ಕೋವಿಡ್ ಸಭೆ
ಬೆಳಗಾವಿ: ಎಸಿ ಇರುವ ಕ್ಲೋಸ್ ಡೋರ್ ಕೊಠಡಿಗಳಲ್ಲಿ ಮಾಸ್ಕ್ ಬಳಕೆ ಮಾಡಬೇಕು ಜೊತೆಗೆ ಮೂರನೇ ಡೋಸ್‍ನ್ನು ಎಲ್ಲರೂ ಪಡೆಯಬೇಕು ಎಂದು ಆರೋಗ್ಯ ಸಚಿವ ಕೆ. ಸುಧಾಕರ್ (K Sudhakar) ತಿಳಿಸಿದರು.
ಸಿಎಂ ನೇತೃತ್ವದ ಕೋವಿಡ್ ಸಭೆ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾಗತಿಕ ಕೋವಿಡ್ ಸ್ಥಿತಿಗತಿಯ ವರದಿಯನ್ನು ತಾಂತ್ರಿಕಾ ಸಲಹಾ ಸಮಿತಿ ಇಂದು ಕೊಟ್ಟಿದೆ. ಸಭೆಯಲ್ಲಿ ಐಎಲ್‍ಐ ಮತ್ತು ಸಾರಿ ಇರುವ ಎಲ್ಲಾ ಪ್ರಕರಣಗಳಿಗೂ ಕಡ್ಡಾಯ ತಪಾಸಣೆಗೆ ನಿರ್ಧಾರಿಸಿದ್ದು, ಎಸಿ ಇರುವ ಕ್ಲೋಸ್ ಡೋರ್ ಕೊಠಡಿಗಳ ಕಡೆ ಮಾಸ್ಕ್ ಬಳಕೆ ಮಾಡಬೇಕು ಎಂದು ತಿಳಿಸಿದರು.
Advertisement
Advertisement
ವಿದೇಶದಿಂದ ಬರುವ ಪ್ರಯಾಣಿಕರಿಗೆ ಟೆಸ್ಟ್ ಮಾಡಲಾಗುವುದು ಜೊತೆಗೆ ಕೇಂದ್ರ ಮಾರ್ಗಸೂಚಿ ಅನ್ವಯ ಟೆಸ್ಟ್ ಮಾಡಲಾಗುತ್ತದೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್‍ಗಳ ಸಿದ್ಧತೆ ಆರಂಭವಾಗಿದೆ. ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್‍ಗೆ ಬೆಡ್ ಮೀಸಲು ಹಾಗೂ ಖಾಸಗಿ ಆಸ್ಪತ್ರೆಗಳಲ್ಲೂ ಬೆಡ್ ಮೀಸಲಿಗೆ ಹೆಚ್ಚು ಒತ್ತು ಕೊಡಲಾಗುತ್ತದೆ ಎಂದು ಮಾಹಿತಿ ನೀಡಿದರು.
Advertisement
Advertisement
ಮೂರನೇ ಡೋಸ್ ಎಲ್ಲರಿಗೂ ನೀಡುವ ಟಾಸ್ಕ್ ಕಂಪ್ಲಿಟ್ ಮಾಡಲು ತೀರ್ಮಾನಿಸಲಾಗಿದೆ. ಕೋವಿಡ್ (Covid) ಕಡಿಮೆ ಆದ್ದರಿಂದ ಜನ ಮೂರನೇ ಡೋಸ್ ಪಡೆದಿಲ್ಲ. 20% ಜನ ಮಾತ್ರ ಮೂರನೇ ಡೋಸ್ ಪಡೆದಿದ್ದಾರೆ. ಜಾಗೃತಿ ಮೂಡಿಸುವ ಮೂಲಕ 3ನೇ ಡೋಸ್ ಕೊಡಲಾಗುವುದು, 100% ಆಗಬೇಕು. ಕೇಂದ್ರದ ಜೊತೆ ಸಂಪರ್ಕ ಹೊಂದಿ ಲಸಿಕೆ ಸ್ಟಾಕ್‍ಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ನಮ್ಮ ಸರ್ಕಾರ ಕೊರೊನಾ ಹಾಗೂ ಅದರ ತಳಿ ವಿರುದ್ಧ ಹೊರಾಡಲು ಸಿದ್ದರಾಗಿದ್ದೇವೆ. ನಾನು ಜನರಲ್ಲಿ ಮನವಿ ಮಾಡ್ತೇನೆ ಎಲ್ಲರೂ 3ನೇ ಡೋಸ್ ಪಡೆಯಿರಿ. ಯಾವುದೇ ಅಂತೆ ಕಂತೆಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಲಸಿಕೆ ಮೂಲಕ ನಾವು ನಮ್ಮನ್ನ ರಕ್ಷಣೆ ಮಾಡಿಕೊಳ್ಳಬೇಕು, ಯಾವುದೇ ಸೈಡ್ ಎಫೆಕ್ಟ್ ಇಲ್ಲ ಎಂದು ತಿಳಿಸಿದರು.
ಕೋವಿಡ್ ತಳಿ ಬಿಎಫ್7 ಯಾವುದೇ ಕ್ಷಣದಲ್ಲಿ ನಮ್ಮ ರಾಜ್ಯಕ್ಕೆ ಕಾಲಿಡಬಹುದು ಎಚ್ಚರಿಕೆ ವಹಿಸಬೇಕಿದೆ. ಜನರು ಸರ್ಕಾರದ ಜೊತೆ ಸಹಕರಿಸಬೇಕೆಂದು ಮನವಿ ಮಾಡುತ್ತೇನೆ. ಹೊರಾಂಗಣ ಪ್ರದೇಶದಲ್ಲಿ ಅಷ್ಟಾಗಿ ಪ್ರಾಬ್ಲಮ್ ಆಗಲ್ಲ, ಕ್ಲೋಸ್ ಪ್ಲೇಸ್ ಅಲ್ಲಿ ಮಾಸ್ಕ್ (Mask) ಕಡ್ಡಾಯ. ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಆ ನಂತರದಲ್ಲಿ ಹೊಸ ವರ್ಷದ ಆಚರಣೆಯ ಬಗ್ಗೆ ನಿರ್ಧಾರ ತೆಗೆದುಕೊಳ್ತೇವೆ. ಸಂಜೆಯೊಳಗೆ ಸರ್ಕಾರದ ನಿರ್ಧಾರ ತಿಳಿಸ್ತೇವೆ ಎಂದರು.
ಕೇಂದ್ರದ ಮಾರ್ಗಸೂಚಿ ನೋಡಿಕೊಂಡು ನಮ್ಮ ಸಭೆಯ ಅಂಶವನ್ನು ಸೇರಿಸಿಕೊಂಡು ರಾತ್ರಿಯೊಳಗೆ ರಾಜ್ಯದ ಅಧಿಕೃತ ಮಾರ್ಗಸೂಚಿ ಪ್ರಕಟಿಸುತ್ತೇವೆ. ಸದ್ಯಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಹೆಚ್ಚುವರಿ ಟೆಸ್ಟಿಂಗ್ ವ್ಯವಸ್ಥೆ ಇಲ್ಲ. ಇದು ಹೆಚ್ಚು ಹರಡುವ ಆಗುವಂತ ತಳಿ ಎಂಬ ಮಾಹಿತಿ ಇದೆ ಎಂದು ತಿಳಿಸಿದರು.
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]