ಬೆಳಗಾವಿ: ಯಾವುದೇ ಕಠಿಣ ಸಂದರ್ಭ ಎದುರಾದರೂ ಆರೋಗ್ಯ ಇಲಾಖೆ (Health Department) ಸನ್ನದ್ಧವಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ( K Sudhakar) ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ (Covid19) ರೂಪಾಂತರಿ ತಳಿಯ ಬಗ್ಗೆ ನಮ್ಮ ಸರ್ಕಾರ ಎಚ್ಚರವಹಿಸಿದೆ. ಇಡೀ ರಾಜ್ಯಾದ್ಯಂತ ತಾಲೂಕು ಆಸ್ಪತ್ರೆಗಳಲ್ಲಿ, ಆರೋಗ್ಯ ಇಲಾಖೆಗೆ ಒಳಪಡುವ ಎಲ್ಲ ಆಸ್ಪತ್ರೆಗಳಲ್ಲಿ (Hospital) ಪೂರ್ವ ತಯಾರಿ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದರು.
Advertisement
Advertisement
ರಾಜ್ಯವ್ಯಾಪಿ ಮಾರ್ಕ್ ಡೀಲ್ ಮಾಡಲಾಗುವುದು. ಯಾವುದೇ ಕಠಿಣ ಸಂದರ್ಭ ಎದುರಾದರೂ ಆರೋಗ್ಯ ಇಲಾಖೆ ಸಿದ್ಧವಾಗಿದೆ. ಆಯಾ ವಿಭಾಗದ ಆರೋಗ್ಯ ಅಧಿಕಾರಿಗಳು ಅಲ್ಲಿರುವ ಸಂಸ್ಥೆಗಳನ್ನು ಪರಿಶೀಲನೆ ಮಾಡುತ್ತಾರೆ. ಎಲ್ಲ ಸಿದ್ಧತೆಗಳ ಬಗ್ಗೆ ಹಿರಿಯ ಅಧಿಕಾರಿಗಳು ನನಗೆ ವರದಿ ನೀಡುತ್ತಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಸ್ಪೆಷಲ್ ಮಾಸ್ಕ್ ರಿಲೀಸ್ – ಬಾರ್, ಪಬ್‌ಗಳಲ್ಲಿ ಮಾಸ್ಕ್ ಹಾಕಿಕೊಂಡೇ ಡ್ರಿಂಕ್ಸ್ ಮಾಡ್ಬೋದು: ಆರ್.ಅಶೋಕ್
Advertisement
Advertisement
ಯಾರಾದರೂ ಸೋಂಕಿತರು ಬಂದರೆ ಅವರನ್ನು ಗುಣಪಡಿಸಲು ನಮ್ಮ ಸರ್ಕಾರ ಸಿದ್ಧವಾಗಿದೆ. ಜನರಿಗೆ ಸರ್ಕಾರದ ಮೇಲೆ ನಂಬಿಕೆ ಬರಬೇಕು. ಹೀಗಾಗಿ ರಾಜ್ಯವ್ಯಾಪಿ ಮಾರ್ಕ್ ಡ್ರೀಲ್ ಮಾಡಲಾಗುತ್ತಿದೆ. BF.7 ತಳಿಯ ಹರಡುವ ಪ್ರಮಾಣ ಜಾಸ್ತಿಯಿದೆ. ಆದರೆ ಗಂಭೀರತೆ ಬಹಳ ಕಡಿಮೆ ಇದೆ. ಜನಜಂಗುಳಿ ಇರುವ ಕಡೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಗರ್ಭಿಣಿಯರು ಚಿಕ್ಕಮಕ್ಕಳು ಎಚ್ಚರದಿಂದರಬೇಕು. ಆರೋಗ್ಯ ಸಮಸ್ಯೆ ಇದ್ದವರೂ ಜನಜಂಗುಳಿ ಇರುವ ಪ್ರದೇಶಗಳಿಂದ ದೂರ ಇರಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಸುವರ್ಣ ಸೌಧದ ಬ್ಯಾರಿಕೇಡ್ ಎಸೆದು ದ್ವಾರದ ಮೇಲೆ ಹತ್ತಿ ವಕೀಲರ ಪ್ರತಿಭಟನೆ