ಬೆಳಗಾವಿ: ಕೊರೊನಾ ಪಾಸಿಟಿವ್ ಬಂದ ತಕ್ಷಣ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ನಾವು ಚೀನಾಗೆ ಹೋಲಿಕೆ ಮಾಡೋದು ಬೇಡ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ (K Sudhakar) ಹೇಳಿದರು.
ಈ ಬಗ್ಗೆ ಬೆಳಗಾವಿ (Belagavi) ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಚೀನಾ (China) ಮುನ್ನೆಚ್ಚರಿಕೆ ಕ್ರಮ ಹಾಗೂ ಲಸಿಕೆ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ನಮ್ಮ ರಾಜ್ಯದಲ್ಲಿ ಯಾರು ಆತಂಕ ಪಡುವ ಅಗತ್ಯವಿಲ್ಲ ಮುಂಜಾಗ್ರತಾ ಕ್ರಮ ತಗೆದುಕೊಂಡರೆ ಸಾಕು. ನಮ್ಮ ಲಸಿಕೆ ಚೆನ್ನಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದರು.
Advertisement
Advertisement
ನಮ್ಮ ದೇಶದಲ್ಲಿ ಎರಡು ಪಟ್ಟು ನಾವು ಚೆನ್ನಾಗಿದ್ದೇವೆ. ಸ್ವಾಭಾವಿಕವಾಗಿ ನಮ್ಮಲ್ಲಿ ರೋಗನಿರೋಧಕ ಶಕ್ತಿ ಜಾಸ್ತಿ ಇದೆ. ಯಾವ ರೀತಿ ಮಾರ್ಗಸೂಚಿ ಕೊಡಬೇಕು ಮತ್ತು ಆಸ್ಪತ್ರೆಯ ವ್ಯವಸ್ಥೆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು. ಹೊಸ ವರ್ಷಾಚರಣೆಗೆ ನ್ಯೂ ರೂಲ್ಸ್- ಮಧ್ಯರಾತ್ರಿ 1 ಗಂಟೆವರೆಗಷ್ಟೇ ಸೆಲಬ್ರೇಷನ್!
Advertisement
Advertisement
ತಜ್ಞರ ಜೊತೆ ಸಭೆಯ ಬಳಿಕ ಮಾರ್ಗಸೂಚಿ ಹೊರಡಿಸುವಂತೆ ಸಲಹೆ ಬಂದರೆ ಸಿಎಂ ಜೊತೆ ಚರ್ಚೆ ಮಾಡಿ ಮಾರ್ಗಸೂಚಿ ಹೊರಡಿಸುತ್ತೇವೆ. ಚೀನಾದಿಂದ ಬಂದ ವ್ಯಕ್ತಿಗೆ ಪಾಸಿಟಿವ್ ಹಿನ್ನೆಲೆ ಯಾವ ತಳಿ ಇನ್ನೂ ಪತ್ತೆಯಾಗಿಲ್ಲ. ಜಿನೋಮಿಕ್ ಸ್ವೀಕ್ವೆನ್ಸ್ ವರದಿಗಾಗಿ ಕಾಯುತ್ತಿದ್ದೇವೆ. ಜನ ಸಂದಣಿ ಇರುವ ಕಡೆ ಮಾಸ್ಕ್ ಬಳಸಿದರೆ ಒಳ್ಳೆಯದು ಎಂದು ಸಲಹೆ ನೀಡಿದರು. ಜನಾಂಗೀಯ ದಾಳಿ – ಫ್ರಾನ್ಸ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆ, ಕಾರುಗಳಿಗೆ ಬೆಂಕಿ ಹಚ್ಚಿ ಆಕ್ರೋಶ