ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿಯವರು ತೆಲುಗಿನ ನಟ ವಿಜಯ್ ದೇವರಕೊಂಡ ಅವರನ್ನು ಹಾಡಿಹೊಗಳಿದ್ದಾರೆ.
ತೆಲುಗಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಾನು ಹೆಚ್ಚು ಸಿನಿಮಾಗಳನ್ನು ನೋಡುತ್ತೇನೆ. ಎಲ್ಲಾ ಭಾಷೆಯ ಸಿನಿಮಾವನ್ನು ನಾನು ನೋಡುತ್ತೇನೆ. ಆಗ ತೆಲುಗಿನಲ್ಲಿ ಎನ್.ಟಿ.ಆರ್ ಸಿನಿಮಾವನ್ನು ಹೆಚ್ಚು ನೋಡುತ್ತಿದ್ದೆ. ಈಗ ಹೊಸಬರ ಚಿತ್ರವನ್ನು ವಿಕ್ಷೀಸುತ್ತೇನೆ ಎಂದು ಹೇಳಿದ್ದಾರೆ.
Advertisement
Advertisement
ಈ ವೇಳೆ ಸಂದರ್ಶನದಲ್ಲಿ ಇತ್ತೀಚೆಗೆ ಯಾವ ತೆಲುಗು ಸಿನಿಮಾವನ್ನು ನೋಡಿದ್ದೀರಾ ಎಂದು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಸುಧಾ ಮೂರ್ತಿ ಅವರು, ಇತ್ತೀಚೆಗೆ ನಾನು ತೆಲುಗಿನ ಮಹಾನಟಿ, ಎನ್.ಟಿ.ಆರ್ ಅವರ ಬಯೋಪಿಕ್ ಮತ್ತು ವಿಜಯ್ ದೇವರಕೊಂಡ ಅಭಿನಯದ ಗೀತಾ ಗೋವಿಂದಂ ಸಿನಿಮಾಗಳನ್ನು ನೋಡಿದ್ದೇನೆ. ನನಗೆ ಕಮರ್ಷಿಯಲ್ ಸಿನಿಮಾಗಳನ್ನು ನೋಡಲು ಇಷ್ಟ ಎಂದು ಹೇಳಿದ್ದಾರೆ.
Advertisement
ಈ ಸಮಯದಲ್ಲಿ ದೇವರಕೊಂಡರನ್ನು ಹಾಡಿಹೊಗಳಿರುವ ಸುಧಾ ಮೂರ್ತಿ ಅವರು, ಗೀತಾ ಗೋವಿಂದಂ ಚಿತ್ರ ತುಂಬಾ ಚೆನ್ನಾಗಿದೆ. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ತುಂಬಾ ಚೆನ್ನಾಗಿ ನಟನೆ ಮಾಡಿದ್ದಾರೆ. ನನಗೆ ವಿಜಯ್ ದೇವರಕೊಂಡ ಇಷ್ಟ ಎಂದು ಹೇಳಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಗೀತಾ ಗೋವಿಂದಂ ಚಿತ್ರ 2018ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ಪರುಶುರಾಮ್ ನಿರ್ದೇಶನ ಮಾಡಿದ್ದರು.
Advertisement
ಸದಾ ಒಂದಲ್ಲ ಒಂದು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಸರಳತೆಯಿಂದಲೇ ಜನಮನ ಗೆದ್ದಿರುವ ಸುಧಾ ಮೂರ್ತಿ ಅವರು, ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಎಪಿಎಂಸಿ ಆವರಣದಲ್ಲಿ ನಡೆಯುವ ವಾರದ ಸಂತೆಗೆ ಹೋಗಿ, ವ್ಯಾಪಾರಿಗಳನ್ನು ಮಾತನಾಡಿಸಿ ಅವರ ಕಷ್ಟಗಳನ್ನು ಆಲಿಸಿ ಸಾಮಾನ್ಯರಂತೆ ಕೈಯಲ್ಲಿ ಚೀಲ ಹಿಡಿದು ತರಕಾರಿ ಕೊಂಡು ಸರಳತೆ ಮೆರೆದಿದ್ದರು.
ಕೃಷ್ಣಾ ನದಿ ಪ್ರವಾಹದಿಂದ ಬಳಲಿದ್ದ ರೈತರನ್ನು ಮಾತನಾಡಿಸಲು ಸ್ವತಃ ಅವರೇ ಮಾರುಕಟ್ಟೆಗೆ ಬಂದಿದ್ದರು. ಮುಂಜಾನೆಯೇ ಎದ್ದು, ಕೈಯಲ್ಲಿ ಚೀಲವನ್ನು ಹಿಡಿದು ತರಕಾರಿಯನ್ನು ಖರೀದಿ ಮಾಡಿದ್ದರು. ಇದರ ಜೊತೆಗೆ ಅಲ್ಲಿನ ರಸ್ತೆಬದಿಯ ವ್ಯಾಪಾರಿಗಳನ್ನು ಮಾತನಾಡಿಸಿ ಅವರ ಕಷ್ಟಗಳನ್ನು ಆಲಿಸಿ, ನಂತರ ಅವರ ಬಳಿಯೇ ಚೌಕಸಿ ಮಾಡದೆ ತರಕಾರಿಯನ್ನು ಖರೀದಿಸಿ ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದರು.