ಮಂಡ್ಯ: ಮೇಲುಕೋಟೆ ಕ್ಷೇತ್ರದ ಜೀರ್ಣೋದ್ಧಾರ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರು ತಮ್ಮ ಕಾಯಕದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಮೇಲುಕೋಟೆಯಲ್ಲಿ ಮಾತನಾಡಿದ ಅವರು, ನನ್ನ ತಂದೆ ಡಾಕ್ಟರ್, ತಾಯಿ ಸ್ಕೂಲ್ ಟೀಚರ್ ಆಗಿದ್ದರು. ನಾನು ಶ್ರೀಮಂತ ಮನೆತನದಿಂದ ಬಂದವಳಲ್ಲ, ಸಾಮಾನ್ಯ ಕುಟುಂಬದಿಂದ ಬಂದವಳು. ಆದರೂ ನನಗೆ ದೇವರು ಇಷ್ಟೊಂದು ಹಣಕೊಟ್ಟಿದ್ದಕ್ಕೆ ಒಂದು ಕಾರಣವಿದೆ. ಹಿರಿಯರು ಕಟ್ಟಿದ ಶ್ರೇಷ್ಠವಾದ ಕಟ್ಟಡಗಳನ್ನ ಕಲ್ಯಾಣಿಗಳನ್ನ ಉಳಿಸಕೊಳ್ಳಬೇಕು ಎಂಬುವುದು ದೇವರ ಆಶೀರ್ವಾದವಾಗಿದೆ ಎಂದರು.
ಈ ರೀತಿಯ ಮಾಡಲು ನನಗೆ ಯಾರ ಒತ್ತಾಯವು ಇಲ್ಲ. ಆದರೆ ಹೃದಯದಲ್ಲಿರುವ ದೇವರು ಇಂತಹ ಕೆಲಸ ಮಾಡಿಲ್ಲ ಅಂದರೆ ಒಪ್ಪವುದಿಲ್ಲ. ಇಂತಹ ಕೆಲಸ ಮಾಡದೇ ನಿನ್ನ ಜೀವನ ಹಾಳುಮಾಡುತ್ತಿದ್ದೀಯಾ ಎಂದು ಆ ದೇವರು ಹೇಳುತ್ತಾನೆ. ನನಗೆ ಹಣ, ಹೆಸರಿನ ಆಸೆಯಿಲ್ಲ. ನಮ್ಮ ಶ್ರೇಷ್ಠವಾದ ಸಂಸ್ಕೃತಿ ಉಳಿಯಬೇಕು ಎಂದು ಭಾವನಾತ್ಮಕವಾಗಿ ಮಾತನಾಡಿದರು.
ಇದೇ ವೇಳೆ ಸುಧಾಮೂರ್ತಿ ಅವರ ಕಾರ್ಯವನ್ನು ಸಚಿವರಾದ ಪುಟ್ಟರಾಜು ಮತ್ತು ಸಾರಾ ಮಹೇಶ್ ಹಾಡಿ ಹೊಗಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv