ಬೆಂಗಳೂರು: ಕನ್ನಡ ಸಾಹಿತ್ಯ ಲೋಕದ ದಿಗ್ಗಜರನ್ನು ಕಳೆದುಕೊಂಡ ನೋವಾಗಿದೆ. ಕನ್ನಡ ಸಾಹಿತ್ಯಕ್ಕೆ ಅವರು ಕೊಟ್ಟ ಕೊಡುಗೆ ಅಪಾರ ಎಂದು ಲೇಖಕಿಯೂ ಆದ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ (Sudha Murthy) ನೆನಪಿಸಿಕೊಂಡಿದ್ದಾರೆ.
ಎಸ್.ಎಲ್.ಭೈರಪ್ಪ (S.L.Bhyrappa) ಅವರ ನಿಧನ ಸುದ್ದಿ ಕೇಳಿ ಸುಧಾಮೂರ್ತಿ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾವಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಇದನ್ನೂ ಓದಿ: ಭೈರಪ್ಪರ ಸಾಹಿತ್ಯದಲ್ಲಿ ಬೇರೆ ಸಾಹಿತಿಗಳಂತೆ ಕಾಲ್ಪನಿಕತೆ ಇರಲಿಲ್ಲ, ವಸ್ತುನಿಷ್ಠತೆ ಇತ್ತು: ಪ್ರತಾಪ್ ಸಿಂಹ
ನಾನು 11 ವರ್ಷದವಳು ಆಗಿದ್ದಾಗಿನಿಂದಲೂ ಭೈರಪ್ಪನವರ ಪರಿಚಯವಿತ್ತು. ಕಳೆದ 64 ವರ್ಷಗಳಿಂದ ಅವರನ್ನು ನಾನು ಬಲ್ಲೆ. ನಮ್ಮ ಹುಬ್ಬಳ್ಳಿಯ ಕಾಡುಸಿದ್ದೇಶ್ವರ ಕಾಲೇಜಿನ ಉಪನ್ಯಾಸಕರಾಗಿ ಕೆಲಸ ಮಾಡಿದ್ದರು. ಆಗ ನಮ್ಮ ಮನೆಯ ಹಿಂದುಗಡೆಯೇ ಇದ್ದರು ಎಂದು ಸುಧಾಮೂರ್ತಿ ಮಾತನಾಡಿದ್ದಾರೆ.
ಭೈರಪ್ಪ ಅವರ ಎಲ್ಲಾ ಕಾದಂಬರಿಗಳು ಶ್ರೇಷ್ಠವಾಗಿವೆ. ನನಗೆ ಅನೇಕ ಕಾದಂಬರಿಗಳು ಪ್ರಿಯವಾಗಿವೆ. ಅವರ ಸಾಕಷ್ಟು ಕೃತಿಗಳನ್ನು ಓದಿದ್ದೇನೆ. ಇನ್ನೊಬ್ಬರ ಮನಸ್ಸಿನ ಒಳಗೆ ಹೋಗಿ, ಆ ಭಾವನೆಗಳನ್ನು ಲೇಖನ ರೂಪದಲ್ಲಿ ಅಭಿವ್ಯಕ್ತಿಸಿದ ಸಾಹಿತಿಗಳು ಬಹಳ ಕಡಿಮೆ ತಿಳಿಸಿದ್ದಾರೆ. ಇದನ್ನೂ ಓದಿ: ಕನ್ನಡ ಸಾಹಿತ್ಯ ಲೋಕದ ಅಕ್ಷರ ಮಾಂತ್ರಿಕ ಎಸ್‌ಎಲ್ ಭೈರಪ್ಪ ಇನ್ನಿಲ್ಲ
ಒಳ್ಳೆಯ ಕಲಾವಿದರು, ವಿದ್ವಾಂಸರು, ನೇರ ನುಡಿಯ ವ್ಯಕ್ತಿತ್ವದವರು. ಬಹಳ ದುಃಖದಿಂದ ಭೈರಪ್ಪನವರಿಗೆ ನಾವು ವಿದಾಯ ಹೇಳುತ್ತಿದ್ದೇವೆ ಎಂದು ಮಾತನಾಡಿದ್ದಾರೆ.