ಬೆಂಗಳೂರು: ಇನ್ಫೋಸಿಸ್ ಫೌಂಡೆಶನ್ ಮುಖ್ಯಸ್ಥೆ, ಲೇಖಕಿ ಸುಧಾಮೂರ್ತಿ ಅವರ ವ್ಯಕ್ತಿತ್ವಕ್ಕೆ ಸರಿಸಾಟಿಯಿಲ್ಲ. ಅವರ ಸರಳ ಜೀವನಕ್ಕೆ ಮಾರು ಹೋಗದವರಿಲ್ಲ. ಅದರಲ್ಲೂ ಚಿಕ್ಕ ಮಕ್ಕಳೊಂದಿಗೆ ಅವರು ಇಂದು ಪುಟ್ಟ ಮಗುವಿನಂತಾಗಿದ್ದರು.
ನಗರದ ಪಂಚತಾರಾ ಹೋಟೆಲ್ ನಲ್ಲಿ ಲಿಟ್ಸ್ ಕಿಂಗ್ಡಮ್ ಸಂಸ್ಥೆ ಆಯೋಜಿಸಿದ, ವಸ್ತು ಪ್ರದರ್ಶನವನ್ನು ಸುಧಾಮೂರ್ತಿ ಅವರು ಉದ್ಘಾಟಿಸಿದರು. ಈ ಪ್ರದರ್ಶನದಲ್ಲಿ ನವಜಾತ ಶಿಶು ಹಾಗೂ ಮಕ್ಕಳಿಗೆ ಸಂಬಂಧಿಸಿದ ಚಟುವಟಿಕೆಗಳು, ಬೆಳವಣಿಗೆಗೆ ಸಂಬಂಧಿಸಿದ ಚರ್ಚೆಯಲ್ಲಿ ಭಾಗವಹಿಸಿದ್ದರು. ಜೊತೆಗೆ ಚಿಣ್ಣರ ಕುತೂಹಲಭರಿತ ಪ್ರಶ್ನೆಗಳಿಗೆ ಸುಧಾಮೂರ್ತಿ ಉತ್ತರಿಸಿದರು. ಇದೇ ವೇಳೆ ಮಕ್ಕಳಿಗೆ ತಾವು ಸಹಿ ಮಾಡಿದ ಪುಸ್ತಕ ನೀಡಿ ನಕ್ಕು ನಲಿದರು.
ಕೆಲವು ದಿನಗಳ ಹಿಂದೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ಸಾಮಾನ್ಯರಂತೆ ಕೈಚೀಲ ಹಿಡಿದು ತರಕಾರಿ ಖರೀದಿ ಮಾಡಿದ್ದರು. ಈ ವೇಳೆ ಹಳ್ಳಿಯ ಜನರೊಂದಿಗೆ ಸಾಮನ್ಯರಂತೆ ಬೆರೆತು ಅವರ ಕಷ್ಟಗಳನ್ನು ಆಲಿಸಿದ್ದರು. ಅಲ್ಲದೇ ಮಾರುಕಟ್ಟೆಯಲ್ಲಿ ಚೌಕಾಸಿ ಮಾಡದೇ ತರಕಾರಿ ಖರೀದಿಸಿದ್ದರು.