ಬಾಗಲಕೋಟೆ: ನನಗೆ ರಾಷ್ಟ್ರಪತಿ ಹುದ್ದೆ ಏನು ಬೇಡ, ನಾನು ನಮ್ಮ ಊರಲ್ಲಿ ಆರಾಮವಾಗಿ ರಾಣಿ ಇದ್ದಂಗೆ ಇದ್ದೇನೆ ಎಂದು ಇನ್ಫೋಸಿಸ್ (Infosys) ಫೌಂಡೇಶನ್‌ನ ಸುಧಾಮೂರ್ತಿ (Sudha Murthy) ಕೈಮುಗಿದು ನಯವಾಗಿ ತಿರಸ್ಕರಿಸಿದರು.
ಖಾಸಗಿ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮಕ್ಕಾಗಿ ಬಾಗಲಕೋಟೆಗೆ (Bagalkote) ಆಗಮಿಸಿ ಮಕ್ಕಳ ಜೊತೆ ಸಂವಾದ ನಡೆಸಿದರು. ಇದೇ ವೇಳೆ ಸುಧಾಮೂರ್ತಿ ಅವರಿಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವಿವಿಧ ಪ್ರಶ್ನೆಗಳನ್ನು ಕೇಳಿದರು. ಈ ವೇಳೆ ಶಾಲಾ ಮುಖ್ಯ ಶಿಕ್ಷಕಿಯೊಬ್ಬರು, ಸುಧಾಮೂರ್ತಿ ಅವರಿಗೆ ನೀವು ನಮ್ಮ ದೇಶದ ಮುಂದಿನ ರಾಷ್ಟ್ರಪತಿಗಳಾಗಬೇಕೆಂದು ತಮ್ಮ ಆಶಯ ವ್ಯಕ್ತಪಡಿಸಿದರು.
Advertisement
Advertisement
ಇದಕ್ಕೆ ನಗುತ್ತಲೇ ಉತ್ತರಿಸಿದ ಅವರು, ನಾನು ಈಗ ಆರಾಮವಾಗಿದ್ದೇನೆ. ನಾ ಆರಾಮ ಇರೋದು ಬೇಡ್ವಾ? ಎಂದು ಸುಧಾಮೂರ್ತಿ ಮರು ಪ್ರಶ್ನೆಹಾಕಿದರು. ಆಗ ಶಾಲಾ ಆಡಳಿತ ಮಂಡಳಿಯವರು, ನೀವು ಆರಾಮ ಇದ್ದೀರಿ, ಅದೇ ರೀತಿ ದೇಶ ಕೂಡ ಆರಾಮ ಆಗಿ ಇರಬೇಕು. ಅಬ್ದುಲ್ ಕಲಾಂ ಹಾಗೆಯೇ ನೀವು ನಮಗೆ ಬೇಕು ಎಂದು ಮನವಿ ಮಾಡಿದರು. ಏನು ಬೇಡ ನಾನು ನಮ್ಮ ಊರಲ್ಲಿ ಆರಾಮಾಗಿ, ರಾಣಿ ಇದ್ದಂಗೆ ಇದ್ದೇನೆ ಎಂದು ಕೈಮುಗಿದು ನಯವಾಗಿ ತಿರಸ್ಕರಿಸಿದರು. ಇದನ್ನೂ ಓದಿ: ಬೆಳಗಾವಿ ಬಿಜೆಪಿಯಲ್ಲಿ ಬಣ ಸಂಘರ್ಷ – ಕಚ್ಚಾಟಕ್ಕೆ ತೆರೆ ಎಳೆಯಲು ಅಮಿತ್ ಶಾ ಸೂತ್ರ
Advertisement
Advertisement
ಈ ವೇಳೆ ಸುಧಾಮೂರ್ತಿ ಅವರಿಗೆ ಯಶಸ್ಸಿನ ಮೂಲ, ಜೀವನದಲ್ಲಿ ಏನು ಮಿಸ್ ಮಾಡಿಕೊಂಡಿದ್ದೀರಿ? ಇನ್ಫೋಸಿಸ್ ಸಂಸ್ಥೆ ಕಟ್ಟುವಾಗ ಪತಿಗೆ ನಿಮ್ಮ ಪ್ರೋತ್ಸಾಹ ಹೇಗಿತ್ತು ಹಾಗೂ ನಿಮ್ಮ ರೋಲ್ ಮಾಡಲ್ ಯಾರು ಎಂದೆಲ್ಲ ಶಾಲಾ ಮಕ್ಕಳು ಪ್ರಶ್ನೆಗಳನ್ನು ಕೇಳಿದರು. ಇದನ್ನೂ ಓದಿ: ರಾಜ್ಯದ 20 ಪೊಲೀಸರಿಗೆ ರಾಷ್ಟ್ರಪತಿ ಪದಕ – ಯಾರಿಗೆ ಯಾವ ಪದಕ ಸಿಕ್ಕಿದೆ?
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k