ನಿರ್ಮಾಪಕ ಎನ್.ಕುಮಾರ್ (N. Kumar) ವಿರುದ್ದ ಕಾನೂನು ಸಮರಕ್ಕೆ ಇಂದು ಸುದೀಪ್ (Kiccha Sudeep) ಅಧಿಕೃತವಾಗಿ ಇಳಿದಿದ್ದಾರೆ. ಇಂದು ಬೆಂಗಳೂರಿನ ಎಸಿಎಂಎಂ ನ್ಯಾಯಾಲಯಕ್ಕೆ ಆಗಮಿಸಿದ್ದ ಅವರು, ನಿರ್ಮಾಪಕ ಎನ್.ಕುಮಾರ್ ವಿರುದ್ಧ ಕ್ರಿಮಿನಲ್ ಮಾನನಷ್ಟ (Defamation) ಪ್ರಕರಣ ದಾಖಲಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸುದೀಪ್, ‘ನಾನು ಯಾರಿಗೆ ಉತ್ತರ ಕೊಡಬೇಕಿದೆಯೋ, ಅದನ್ನು ಕೋರ್ಟಿನಲ್ಲಿ (Court) ಕೊಡುವೆ’ ಎಂದರು.
ಈ ಕುರಿತು ನಿರ್ಮಾಪಕ ಎನ್.ಕುಮಾರ್ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ‘ಅವರು ಈ ಹಿಂದೆ ನನಗೆ ಕಳುಹಿಸಿದ್ದ ನೋಟಿಸ್ ಜುಲೈ 13ಕ್ಕೆ ಸಿಕ್ಕಿದೆ. ಅದು ಇಂಗ್ಲಿಷಿನಲ್ಲಿತ್ತು. ನನಗೆ ಇಂಗ್ಲಿಷ್ ಬರುವುದಿಲ್ಲ. ಹಾಗಾಗಿ ಇಂದು ವಕೀಲರನ್ನು ಭೇಟಿ ಮಾಡಲು ಸಮಯ ನಿಗದಿ ಮಾಡಿದ್ದೆ. ಅಷ್ಟರಲ್ಲೇ ಅವರು ಕೋರ್ಟಿಗೆ ಹೋಗಿದ್ದಾರೆ. ನನ್ನ ಮೇಲೆ ಏನೆಲ್ಲ ಆರೋಪ ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ಕಾನೂನು ಸಲಹೆ ಪಡೆದುಕೊಂಡು ನಾನು ಪ್ರತಿಕ್ರಿಯೆ ಮಾಡುತ್ತೇನೆ’ ಎಂದರು. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ ರಾವ್
ನಾನು ತುಂಬಾ ತಾಳ್ಮೆ ಇರುವಂತಹ ನಿರ್ಮಾಪಕ. ನನಗೆ ಆದ ನೋವನ್ನು ಮಾಧ್ಯಮಗಳೊಂದಿಗೆ ಹೇಳಿಕೊಂಡಿದ್ದೇನೆ. ನಾನು ನಿರ್ಮಾಪಕನಾಗಿ ಮೂವತ್ತಕ್ಕೂ ಹೆಚ್ಚು ಸಿನಿಮಾ ಮಾಡಿದ್ದೇನೆ. ವಿತರಕನಾಗಿ ನೂರಾರು ಚಿತ್ರಗಳನ್ನು ವಿತರಣೆ ಮಾಡಿದ್ದೇನೆ. ಸರಿ ತಪ್ಪುಗಳು ನನಗೂ ಅರ್ಥವಾಗುತ್ತವೆ. ನಾನು ಮತ್ತು ಸುದೀಪ್ ಇಬ್ಬರ ಮಧ್ಯ ನಡೆದ ಮಾತುಕತೆಗೆ ಅವರು ಬದ್ಧರಾಗಲಿ ಎಂದಷ್ಟೇ ಹೇಳುತ್ತೇನೆ’ ಎಂದರು ಕುಮಾರ್.
ನಮಗೆ ಏನೇ ತೊಂದರೆಯಾದರೂ ನಾವು ಚಲನಚಿತ್ರ ವಾಣಿಜ್ಯ ಮಂಡಳಿಗೆ ಮೊರೆ ಹೋಗುತ್ತೇವೆ. ನಾನು ಅಲ್ಲಿಗೇ ಹೋಗಿದ್ದು. ವಾಣಿಜ್ಯ ಮಂಡಳಿಯಲ್ಲಿ ಕೂತು ಮಾತನಾಡೋಣ ಬನ್ನಿ ಎಂದು ಕರೆದರೂ ಅವರು ಬರಲಿಲ್ಲ. ಕೋರ್ಟಿಗೆ ಹೋಗಿದ್ದಾರೆ. ನಾನು ಈ ಕುರಿತು ನನ್ನ ವಕೀಲರನ್ನು ಸಂಪರ್ಕಿಸುತ್ತೇನೆ ಎನ್ನುವುದು ಕುಮಾರ್ ಮಾತು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]