ಬಿಗ್ ಬಾಸ್ ಮನೆಯ ಆಟಕ್ಕೆ (Bigg Boss Kannada 10) ಅಂತಿಮ ಪರದೆ ಎಳೆಯುವ ಸಮಯ ಬಂದಿದೆ. ಇದೀಗ ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ಸುದೀಪ್ ಮಾತನಾಡುವಾಗ ಕಾರ್ತಿಕ್ ಮಹೇಶ್ (Karthik Mahesh) ವಿನ್ನರ್ ಎನ್ನುವ ಸುಳಿವು ನೀಡಿದ್ರಾ ಎಂಬ ಅನುಮಾನ ಪ್ರೇಕ್ಷಕರಲ್ಲಿ ಮೂಡಿದೆ. ಇದನ್ನೂ ಓದಿ:ಸೈನಿಕನಾದ ಅಕ್ಷಯ್ ಕುಮಾರ್: ಬಡೇ ಮಿಯಾ ಚೋಟೆ ಮಿಯಾ ಟೀಸರ್ ರಿಲೀಸ್
ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಕಾರ್ತಿಕ್ ವಿನ್ನರ್ ಎಂದೇ ಹರಿದಾಡುತ್ತಿದೆ. ಅದಕ್ಕೆ ಪೂರಕವಾಗಿ ಸುದೀಪ್ ಅವರು ಕಾರ್ತಿಕ್ ಮಾತನಾಡುವ ರೀತಿ ನೋಡಿ ವಿನ್ನರ್ ಯಾರು ಎಂದು ಸುಳಿವು ನೀಡಿದ್ರಾ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕಾರ್ತಿಕ್ ಮಹೇಶ್ ಕೂಡ ದೊಡ್ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿ. ವಿನಯ್, ಸಂಗೀತಾರಂತಹ ಸ್ಪರ್ಧಿಗಳಿಗೆ ಠಕ್ಕರ್ ಕೊಟ್ಟು ಆಟವಾಡಿದ್ದಾರೆ. ಇದೀಗ ಕಾರ್ತಿಕ್ ಮಹೇಶ್ ಬಗ್ಗೆ ಹೊರಗಡೆ ಒಳ್ಳೆ ಹೆಸರೂ ಇದೆ. ಜನರ ಕೂಡ ಕಾರ್ತಿಕ್ ವಿನ್ನರ್ ಅಂತಲೇ ಹೇಳುತ್ತಿದ್ದಾರೆ. ಈ ಒಂದು ವಿಚಾರವನ್ನ ಸುದೀಪ್ ಇಲ್ಲಿ ಕಾರ್ತಿಕ್‌ಗೆ ಹೇಳಿದ್ರು. ಆಗ ಕಣ್ಣೀರು ಹಾಕಿದ ಕಾರ್ತಿಕ್ ಧನ್ಯವಾದ ಹೇಳಿದ್ರು. ನನ್ನ ಅಭಿನಯದ ಮೂಲಕವೇ ಎಲ್ಲರಿಗೂ ಉತ್ತರವನ್ನೂ ಕೊಡುತ್ತೇನೆ ಅಂತಲೂ ಕಾರ್ತಿಕ್ ಮಹೇಶ್ ಹೇಳಿದ್ದರು.
ಕಾರ್ತಿಕ್ ಮಹೇಶ್ ಅವರೇ ಅಳಬೇಡಿ, ಕೂಲ್ ಆಗಿಯೇ ಇದ್ದು ಬಿಡಿ. ಹೊರಗಡೆ ಬಂದ್ಮೇಲೆ ಜನರು ನಿಮಗೆ ತೋರಿದ ಪ್ರೀತಿಯನ್ನ ಸ್ವೀಕರಿಸಿ, ಹಾಗೇನೆ ಎಂಜಾಯ್ ಮಾಡಿ, ಪಾರ್ಟಿ ಮಾಡಿ ಅಂತಲೇ ಹೇಳಿದ್ರು. ಅಂದ್ರೆ ಈ ಮಾತಿನಿಂದ ಕಾರ್ತಿಕ್ ಗೆಲ್ತಾರೆ ಅಂತಲೇ ಸುದೀಪ್ ಹೇಳಿದ್ರಾ? ಅನ್ನೋ ಡೌಟ್ ಕೂಡ ಮೂಡಿದೆ.