ನನ್ನ ಫ್ಯಾನ್ಸ್ ಯಾವತ್ತೂ ಕಳಂಕ ತರುವ ಕೆಲಸ ಮಾಡಲ್ಲ: ಅಭಿಮಾನಿಗಳ ಬಗ್ಗೆ ಕಿಚ್ಚನ ಅಕ್ಕರೆಯ ಮಾತು

Public TV
2 Min Read
Sudeep

– ಫ್ಯಾನ್ಸ್ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಅಭಿನಯ ಚಕ್ರವರ್ತಿ
– ವ್ಯಕ್ತಿತ್ವದಲ್ಲಿ ದೊಡ್ಡವರಾಗ್ಬೇಕು ಅಂದ್ರೆ ಸಿನಿಮಾನೇ ಮಾಡ್ಬೇಕಾಗಿಲ್ಲ
– ಈಗಷ್ಟೇ 28 ದಾಟಿ 29ಕ್ಕೆ ಕಾಲಿಡ್ತಿದ್ದೀನಿ!

ಬೆಂಗಳೂರು: ನನ್ನ ಫ್ಯಾನ್ಸ್ ಯಾವತ್ತೂ ಕಳಂಕ ತರುವ ಕೆಲಸ ಮಾಡೋದಿಲ್ಲ ಎಂದು ತಮ್ಮ ಅಭಿಮಾನಿಗಳನ್ನು ಅಭಿನಯ ಚಕ್ರವರ್ತಿ ಸುದೀಪ್‌ (Sudeep) ಹಾಡಿ ಹೊಗಳಿದ್ದಾರೆ.

ಜಯನಗರದ ಎಂಇಎಸ್ ಗ್ರೌಂಡ್‍ನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ (Birthday) ಆಚರಿಸಿಕೊಂಡ ಅವರು, ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ, ಕ್ಯಾಮೆರಾ ನೋಡಿ ಇನ್ನೂ ಚಾಲ್ತಿಯಲ್ಲಿದೀವಿ ಎಂದು ಅನ್ಸುತ್ತೆ. ಅವ್ರು ತೋರಿಸೋ ಪ್ರೀತಿ ವ್ಯಕ್ತಿತ್ವದಿಂದ ನಾನು ಇಲ್ಲಿಯವರೆಗೆ ಬಂದಿದ್ದೇನೆ. ಹೋದಲ್ಲೆಲ್ಲ ತಲೆ ಎತ್ಕೊಂಡು ನಿಲ್ತೀವಿ ಅಂದ್ರೆ ಅವ್ರೇ ಕಾರಣ, ಅವ್ರಿಗೆ ಕಳಂಕ ತರುವಂತ ಕೆಲಸ ಯಾವತ್ತೂ ಮಾಡೋದಿಲ್ಲ.

Sudeep 1

ವ್ಯಕ್ತಿತ್ವದಲ್ಲಿ ದೊಡ್ಡವರಾಗ್ಬೇಕು ಅಂದ್ರೆ ಸಿನಿಮಾನೇ ಮಾಡ್ಬೇಕಾಗಿಲ್ಲ. ನನ್ನ ಅಕ್ಕ ಪಕ್ಕದವರು ಚನ್ನಾಗಿದ್ದಾರೆ, ನನ್ನ ಸರಿ ತಪ್ಪು ತಿದ್ದೋರು ಒಳ್ಳೆಯವ್ರಾಗಿದ್ದಾರೆ. ಹಾಗಾಗಿಯೇ ನಾನು ಇಲ್ಲಿಗೆ ಬಂದು ನಿಂತಿದ್ದೇನೆ ಎಂದು ಸನ್ಮಾರ್ಗ ತೋರಿದವರನ್ನು ಸ್ಮರಿಸಿದ್ದಾರೆ.

ಈಗಷ್ಟೇ 28 ದಾಟಿ 29ಕ್ಕೆ ಕಾಲಿಡ್ತಿದ್ದೀನಿ!
ಮ್ಯಾಕ್ಸ್ ಚಿತ್ರ ತಡವಾಯ್ತು, ಈ ವರ್ಷ ನಿಮ್ಮ ಮುಂದೇ ಬರಲಿದೆ. ನಾನು ನಿಮ್ಮ ಮೇಲೆ ತುಂಬಾ ಪ್ರೀತಿ ಇಟ್ಟಿದ್ದೇನೆ. ನಾವು ಬೆಳಗ್ಗೆ ಎದ್ದು ಮೇಕಪ್ ಮಾಡ್ಕಳ್ಳೋದೆ ನಿಮಗೋಸ್ಕರ. ಈಗಷ್ಟೇ 28 ದಾಟಿ 29ಕ್ಕೆ ಕಾಲಿಡ್ತಿದ್ದೀನಿ, ನಿಮ್ಮ ಆಶೀರ್ವಾದ ಬೆಂಬಲ ಹೀಗೆ ಇರಲಿ ಎಂದು ಹಾಸ್ಯ ಚಟಾಕಿ ಸಿಡಿಸಿದ್ದಾರೆ.

ಹುಟ್ಟು ಹಬ್ಬಕ್ಕೆ ಬಂದ ಅಭಿಮಾನಿಗಳಿಂದ ರಾತ್ರಿ 12 ಗಂಟೆಗೆ ಬರೋ ಕೂಗು ನಿಮ್ಮಿಂದ ಕೇಳಿದಾಗ ನಮ್ಮ ತಲೆಗೆ ಬರೋದನ್ನೇಲ್ಲ ತೆಗೆದು ತಗ್ಗಿ, ಬಗ್ಗಿ ಇರೋ ಥರ ಮಾಡುತ್ತೆ. ಐ ಲವ್ ಯು ಆಲ್, ಅಭಿಮಾನಿಗಳು ಮಾಡಿದ ಒಳ್ಳೆ ಕೆಲಸ ಅವರ ತಂದೆ ತಾಯಿಗೆ ಸಲ್ಲುತ್ತೆ. ನಾವು ಬೆಳೆಯುತ್ತಿದ್ದೇವೆ ಅನ್ನೋದು ದೊಡ್ಡದಲ್ಲ. ನನ್ನ ಫ್ಯಾನ್ಸ್‍ಗಳಲ್ಲಿ ಒಳ್ಳೆಯತನ ಇದೇ ಅದಕ್ಕೆ ನಾವಿಷ್ಟು ಒಳ್ಳೆವ್ರು ಎಂದು ಹೇಳಿದರು.

ಅಭಿಮಾನಿಗಳನ್ನು ಮನೆ ಬಳಿ ಭೇಟಿ ಮಾಡಲು ಆಗಲಿಲ್ಲ. ನನ್ನ ತಂದೆ ತಾಯಿಗೆ ವಯಸ್ಸಾಗಿದೆ. ಕಳೆದ ಬಾರಿ ಅಕ್ಕ ಪಕ್ಕದ ಮನೆಯವರಿಗೂ ತೊಂದರೆ ಆಗಿದೆ. ಹೀಗಾಗಿ ಇಲ್ಲಿಗೆ ಬಂದೆ ಎಂದು ಸ್ಪಷ್ಟನೆ ನೀಡಿದರು.

ಮ್ಯಾಕ್ಸ್ ಸಿನಿಮಾ ಯಾವಾಗ ರಿಲೀಸ್ ಎಂಬ ಪ್ರಶ್ನೆಗೆ, ತಾಳಿದವನು ಬಾಳಿಯಾನು, ಸಿನಿಮಾ ಮಾಡೋದಷ್ಟೇ ಕೆಲಸ ಅಹಂ ಮೇಲೆ ಸಿನಿಮಾ ರಿಲೀಸ್ ಮಾಡ್ತಿಲ್ಲ ಎಂದು ಅಂದ್ಕೋಬೇಡಿ. ನನ್ನ ಸಿನಿಮಾ ಅಲ್ಲ ಎಲ್ಲಾ ಕನ್ನಡ ಸಿನಿಮಾಗಳಿನ್ನ ನೋಡಿ ಸಪೋರ್ಟ್‌ ಮಾಡಿ ಎಂದು ಅಭಿಮಾನಿಗಳಿಗೆ ಕರೆ ಕೊಟ್ಟರು.

ಪ್ರೀತಿ ಹಾಗೂ ಒಳ್ಳೆಯತನ ತೋರಿಸೋದಕ್ಕೆ ಕಾಂಪ್ರೋ ಆಗಬೇಡಿ ಎಂದು ಅಭಿಮಾನಿಗಳಿಗೆ ಇದೇ ವೇಳೆ ಕಿವಿಮಾತು ಹೇಳಿದರು.

Share This Article