ಕಿಚ್ಚ ಸುದೀಪ್ (Kichcha Sudeep) ಮತ್ತು ನಿರ್ಮಾಪಕ ಎನ್.ಕುಮಾರ್ (N. Kumar) ಆರೋಪ ಪ್ರತ್ಯಾರೋಪದ ಮಾತುಗಳು ನಟ ಶಿವರಾಜ್ ಕುಮಾರ್ ಮನೆಯಲ್ಲಿ ಕೊನೆಗೊಳ್ಳಲಿವೆ ಎಂದು ನಂಬಲಾಗಿತ್ತು. ಇನ್ನೊಂದು ವಾರದಲ್ಲಿ ಈ ಪ್ರಕರಣಕ್ಕೆ ಇತಿಶ್ರೀ ಹಾಡುವಂತಹ ಮಾತುಗಳನ್ನು ಸ್ವತಃ ಶಿವರಾಜ್ ಕುಮಾರ್ (Shivaraj Kumar)ಆಡಿದ್ದರು. ಆದರೆ, ಸುದೀಪ್ ಯಾಕೋ ಅದಕ್ಕೆ ಮನಸು ಮಾಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಇಂದು ಕಿಚ್ಚ ಕೋರ್ಟ್ (Court)ಮೆಟ್ಟಿಲು ಏರಿದ್ದಾರೆ.
ಎನ್.ಕುಮಾರ್ ಪರವಾಗಿ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘದಲ್ಲಿ ಹಲವು ಸಭೆಗಳು ನಡೆದಿವೆ. ಕಿಚ್ಚ ಕೋರ್ಟ್ ಮೆಟ್ಟಿಲು ಏರುತ್ತಿದ್ದಂತೆಯೇ ಮತ್ತೆ ನಿರ್ಮಾಪಕ ಸಂಘ ಹಾಗೂ ವಾಣಿಜ್ಯ ಮಂಡಳಿ ಮತ್ತೊಂದು ಸಭೆ ಮಾಡಿ, ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ ರಾವ್
ಕಿಚ್ಚ ಕೋರ್ಟಿನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಎನ್.ಕುಮಾರ್, ‘ನಾನು ಸುದೀಪ್ ಅವರ ಮಾನ ತೆಗೆಯುವಂತಹ ಕೆಲಸ ಮಾಡಿಲ್ಲ. ನನ್ನ ನೋವನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದೇನೆ. ಅದಕ್ಕೂ ಮೊದಲ ನಿರ್ಮಾಪಕರ ಸಂಘ ಮತ್ತು ವಾಣಿಜ್ಯ ಮಂಡಳಿಯ ಗಮನಕ್ಕೂ ತಂದಿದ್ದೆ. ಒಟ್ಟಿಗೆ ಕೂತು ಮಾತನಾಡಿ, ಬಗೆಹರಿಸಿಕೊಳ್ಳಬೇಕು ಎನ್ನುವುದು ನನ್ನ ಉದ್ದೇಶವಾಗಿತ್ತು’ ಎಂದಿದ್ದಾರೆ.
ಆದರೆ, ಸುದೀಪ್ ಈ ವಿಚಾರದಲ್ಲಿ ಸಿಡಿದೆದ್ದಂತೆ ಕಾಣುತ್ತಿದೆ. ಕೋರ್ಟ್ ಆವರಣದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸುದೀಪ್, ಕಾನೂನು ಮೂಲಕವೇ ಉತ್ತರಿಸುತ್ತೇನೆ ಎಂದು ಸ್ಪಷ್ಟವಾಗಿ ನುಡಿಡಿದ್ದಾರೆ. ಶಿವರಾಜ್ ಕುಮಾರ್ ಮಧ್ಯ ಪ್ರವೇಶದ ಕುರಿತು ಮಾತನಾಡಿದ ಸುದೀಪ್, ‘ಕೋರ್ಟಿಗಿಂತ ಮತ್ತೊಂದು ಸ್ಥಳ ಬೇಕಿಲ್ಲ’ ಎಂದು ಸ್ಪಷ್ಟವಾಗಿ ಸಂದೇಶವನ್ನು ರವಾಣಿಸಿದ್ದಾರೆ. ಅಲ್ಲಿಗೆ ಬಹುಶಃ ಶಿವಣ್ಣನ ಮಧ್ಯ ಪ್ರವೇಶ ಗೊಂದಲದಿಂದ ಕೂಡಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]