ಬೆಂಗಳೂರು: ತುಮಕೂರು ವಿಶ್ವವಿದ್ಯಾಲಯವು (Tumkuru University) ನಟ ಸುದೀಪ್ (Actor Sudeep) ಅವರಿಗೆ ಕೆಲವು ದಿನಗಳ ಹಿಂದೆಯಷ್ಟೇ ಡಾಕ್ಟರೇಟ್ (Doctorate) ಘೋಷಣೆ ಮಾಡಿತ್ತು. ಆದರೆ ನನಗಿಂತಲೂ ಅರ್ಹರು ಸಾಕಷ್ಟು ಜನರು ಇದ್ದಾರೆ. ಅವರಿಗೆ ಈ ಗೌರವ ನೀಡಿ ಎಂದು ಡಾಕ್ಟರೇಟ್‌ನ್ನು ನಿರಾಕರಿಸಿದ್ದರು. ಅಂದು ಸುದೀಪ್ ಅವರ ಆ ನಡೆ ಅಭಿಮಾನಿಗಳಿಗೆ ಇಷ್ಟವಾಗಿತ್ತು.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ನಾನು ಅಂತದ್ದೇನು ಮಾಡಿಲ್ಲ. ಹತ್ತಾರು ಸಿನಿಮಾ ಮಾಡಿದ್ದೀನಿ ಅಷ್ಟೇ, ನಾನು ಇನ್ನೂ ಲೈಫ್‌ಲ್ಲಿ ಮಾಡೋದು ತುಂಬಾ ಇದೆ. ನನ್ನ ಪ್ರಕಾರ ನಾನು ಏನಾದರೂ ಮಾಡಿದ್ದೀನಿ ಅಂತ ಅನಿಸಿದಾಗ ನಾನೇ ಪತ್ರ ಬರೆದು ಡಾಕ್ಟರೇಟ್ ಕೊಡಿ ಎಂದು ಕೇಳ್ತೀನಿ. ಆದರೆ ಅವರು ಕೊಟ್ಟಿರುವ ಡಾಕ್ಟ್ರೇಟ್ ಮೇಲೆ ನನಗೆ ತುಂಬಾ ಗೌರವವಿದೆ ಎಂದರು.ಇದನ್ನೂ ಓದಿ: ಸಿನಿಮಾಗೆ ಬರೋಲ್ಲ, ನೋಡಲ್ಲ ಅನ್ನೋವಾಗ್ಲೆ ಗತ್ತು ಗಾಂಭೀರ್ಯದಿಂದ ನುಗ್ಗಲಿಲ್ವಾ ಎರಡು ಸಿನಿಮಾ: ದರ್ಶನ್ ಫ್ಯಾನ್ಸ್‌ಗೆ ಕಿಚ್ಚನ ಖಡಕ್ ರಿಪ್ಲೈ
ಸೆ.2 ರಂದು ಮ್ಯಾಕ್ಸ್ ರಿಲೀಸ್ (Max Release) ಎಂದು ಎಲ್ಲೆಡೆ ಸುದ್ದಿ ಹರಿದಾಡುತ್ತಿತ್ತು. ಅದೇ ದಿನ ತನ್ನ ಹುಟ್ಟು ಹಬ್ಬ ಇರುವ ಕಾರಣ, ಅದೇ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಈ ಬಾರಿ ಮನೆಯ ಬಳಿ ಯಾರೂ ಬರ್ತ್ ಡೇ ಆಚರಿಸೋದು ಬೇಡ. ವರ್ಷ ಕಳೆದ ಹಾಗೇ ಮನೆಯ ಬಳಿ ಸೇರುವ ಅಭಿಮಾನಿಗಳು ಜಾಸ್ತಿಯಾಗುತ್ತಿದ್ದಾರೆ. ನನ್ನ ಅಕ್ಕ-ಪಕ್ಕದ ಮನೆಯವರಿಗೆ ಸಮಸ್ಯೆಯಾಗುತ್ತದೆ. ಜಯನಗರದ ಎಂಇಎಸ್ ಗ್ರೌಂಡ್‌ನಲ್ಲಿ ಈ ಬಾರಿಯ ಬರ್ತ್ ಡೇ ಪ್ಲ್ಯಾನ್ ಮಾಡಲಾಗಿದೆ. ಅಂದು ಬೆಳಗ್ಗೆ 10 ರಿಂದ 12 ರವರೆಗೆ ಸಮಯ ಇದೆ. ಆದರೆ ಎಲ್ಲರನ್ನೂ ಮೀಟ್ ಮಾಡುವುದಿಲ್ಲ ಎಂದು ಮನವಿ ಮಾಡಿಕೊಂಡಿದ್ದಾರೆ.
ಕಳೆದ ವರ್ಷ ತುಂಬಾ ಅನಾನುಕೂಲ ಉಂಟಾಗಿ ಬ್ಯಾರಿಕೇಡ್ ಒಡೆದು ಹೋಯಿತು. ಈ ಬಾರಿ ಅದೇ ರೀತಿ ಆಗೋದು ಬೇಡ. ಬರ್ತ್ ಡೇ ದಿನ ಸಿನಿಮಾ ಅನೌನ್ಸ್ ಮಾಡ್ತೀನಿ. ವರ್ಷಕ್ಕೆ ಎರಡು ಸಿನಿಮಾ ಮಾಡಬೇಕು ಎನ್ನುವ ಆಸೆ ಇದೆ. ಸೆ.2ಕ್ಕೆ ಮ್ಯಾಕ್ಸ್ ಅಂತ ಸುದ್ದಿ ಹರಿದಾಡ್ತಿತ್ತು ಅವತ್ತೇ ಬರುತ್ತಾ? ಬರಲ್ವಾ ? ಅನ್ನೋದು ಹೇಳಕ್ಕೂ ಸಾಧ್ಯ ಇಲ್ಲ. ಸದ್ಯದಲ್ಲೇ ಈ ವಿಷಯದ ಬಗ್ಗೆ ಸ್ಷಷ್ಟನೆ ನೀಡುತ್ತೇವೆ ಎಂದಿದ್ದಾರೆ. ಈ ಮೂಲಕ ಅಭಿಮಾನಿಗಳು ಸೆ.2 ರಂದು ಸುದೀಪ್ ಅವರ ಸಿನಿಮಾಗೆ ಸಂಬಂಧಿಸಿದಂತೆ ಹೊಸ ಸುದ್ದಿಯೊಂದು ಹೊರಬರಲಿದೆ ಎಂದು ಕಾದುನೋಡಬೇಕಿದೆ.ಇದನ್ನೂ ಓದಿ: BB Season 11 | ಬೇರೆಯವರನ್ನು ನೋಡ್ಬೇಕು ಅಂತಾ ನಾನು ವೇಟ್ ಮಾಡ್ತಾ ಇದೀನಿ: ಸುದೀಪ್