ಪ್ರಯಾಗರಾಜ್: ಬಳಸದೆ ಇದ್ದ ಶಾಲಾ ಶೌಚಾಲಯದಲ್ಲಿ ಇದ್ದಕ್ಕಿಂದಂತೆ ಸ್ಫೋಟ ಸಂಭವಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಓರ್ವ ಬಾಲಕ ಗಂಭೀರ ಗಾಯಗೊಂಡ ಘಟನೆ ಉತ್ತರಪ್ರದೇಶದ ಪ್ರಯಾಗರಾಜ್‍ನಲ್ಲಿ ನಡೆದಿದೆ.
ಜಿಲ್ಲೆಯ ದುಬಾವಲ್ ಗ್ರಾಮದಲ್ಲಿರುವ ಶಾಲೆಯ ಶೌಚಾಲಯವನ್ನು ಬಳಸುತ್ತಿರಲಿಲ್ಲ. ಆದ್ದರಿಂದ ಆ ಸ್ಥಳವನ್ನು ವಸ್ತುಗಳನ್ನು ಇಡಲು ಉಪಯೋಗಿಸಲಾಗುತ್ತಿತ್ತು. ಹೀಗೆ ಸಾಸಿವೆ ಎಣ್ಣೆಯ ಡಬ್ಬಗಳಲ್ಲಿ ಸ್ಫೋಟಕ ಇರಿಸಿ ಶಾಲೆಯ ಶೌಚಾಲಯದಲ್ಲಿ ಸಂಗ್ರಹಿಸಲಾಗಿತ್ತು. ಆದರ ಮಂಗಳವಾರ ಮೂವರು ಮಕ್ಕಳು ಆಟವಾಡುತ್ತ ಶಾಲೆಯ ಶೌಚಾಲಯದ ಬಳಿ ತೆರೆಳಿದ್ದಾಗ ಸಂಗ್ರಹಿಸಿಟ್ಟಿದ್ದ ಸ್ಫೋಟಕಗಳು ಬ್ಲಾಸ್ಟ್ ಆಗಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಓರ್ವ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಎಸ್‍ಪಿ ನರೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.
Advertisement
Advertisement
ಮೃತ ಮಕ್ಕಳನ್ನು ದುಬಾವಲ್ ಗ್ರಾಮದ ನಿವಾಸಿ ಶಿವ ಪೂಜನ್ ಬಿಂದ್ ಅವರ ಮಗ ವಿಜಯ್ ಶಂಕರ್(4) ಮತ್ತು ಮಗಳು ಸೋನಮ್(6) ಎಂದು ಗುರುತಿಸಲಾಗಿದೆ. ಹಾಗೆಯೇ ಗಾಯಗೊಂಡ ಬಾಲಕನನ್ನು ರಾಣಿ ನೆಹರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
Prayagraj: Two children dead & one injured after an explosive kept in a toilet of a school exploded, earlier today. Narendra Kumar Singh, SP Prayagraj, says, “Explosive was kept in a container of mustard oil in the toilet of the school. Investigation is underway.” pic.twitter.com/fzLOwctbat
— ANI UP/Uttarakhand (@ANINewsUP) June 18, 2019
Advertisement
ಈ ಘಟನೆ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾಗೆಯೇ ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದು, ಶೌಚಾಲಯದಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿ ಇಡಲು ಕಾರಣವೇನು ಎನ್ನುವುದನ್ನ ಪತ್ತೆ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]