ಸುಡಾನ್‍ನಲ್ಲಿ ಫ್ಯಾಕ್ಟರಿಗೆ ಬೆಂಕಿ – 16 ಭಾರತೀಯರೂ ಸೇರಿ 23 ಜನ ಸಾವು

Public TV
1 Min Read
sudan

– 130ಕ್ಕೂ ಹೆಚ್ಚು ಜನರಿಗೆ ಗಾಯ
– ಎಲ್‍ಪಿಜಿ ಟ್ಯಾಂಕರ್ ಸ್ಫೋಟ

ನವದೆಹಲಿ: ಸುಡಾನ್‍ನ ಸಿರಾಮಿಕ್ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು ಕನಿಷ್ಟ 16 ಭಾರತೀಯರು ಸೇರಿ ಒಟ್ಟು 23 ಜನ ಸಾವನ್ನಪ್ಪಿದ್ದಾರೆ.

ಸುಡಾನ್ ರಾಜಧಾನಿ ಖರ್ಟೌಮಿನಲ್ಲಿರುವ ಸಲೂಮಿ ಸಿರಾಮಿಕ್ ಫ್ಯಾಕ್ಟರಿಯಲ್ಲಿ ಎಲ್‍ಪಿಜಿ ಟ್ಯಾಂಕರ್ ಸ್ಫೋಟದಿಂದ ಈ ಘಟನೆ ನಡೆದಿದ್ದು, ಸ್ಫೋಟದಲ್ಲಿ ಒಟ್ಟು 23 ಜನ ಸಾವನ್ನಪ್ಪಿದ್ದಾರೆ. 130 ಜನ ಗಾಯಗೊಂಡಿದ್ದಾರೆ.

ಈ ಸಂಬಂಧ ವಿದೇಶಾಂಗ ಸಚಿವ ಎಸ್.ಜೈಶಂಕರ್, ಘಟನಾ ಸ್ಥಳಕ್ಕೆ ಭಾರತೀಯ ದೂತಾವಾಸದ ಪ್ರತಿನಿಧಿಗಳು ತೆರಳಿದ್ದು, ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಭಾರತೀಯ ದೂತಾವಾಸದ ಪ್ರತಿನಿಧಿಗಳು ತೆರಳಿದ್ದು, 24 ಗಂಟೆಗಳ ತುರ್ತು ಸಹಾಯವಾಣಿ +249-921917471 ತೆರೆಯಲಾಗಿದೆ. ಅಲ್ಲದೆ @EoI_Khartoum. ಮೂಲಕ ಅಲ್ಲಿನ ಪ್ರತಿನಿಧಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಡೇಟ್ ಮಾಡುತ್ತಾರೆ. ಕಾರ್ಮಿಕರು ಹಾಗೂ ಅವರ ಕುಟುಂಬದವರಿಗಾಗಿ ನಾವು ಪ್ರಾರ್ಥಿಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಮಾಹಿತಿ ಪ್ರಕಾರ 7 ಮಂದಿ ಭಾರತೀಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ. 16 ಮಂದಿ ನಾಪತ್ತೆಯಾಗಿದ್ದು, ನಾಪತ್ತೆಯಾದವರ ಪೈಕಿ ಹಲವು ಮಂದಿ ಬೆಂಕಿಯಲ್ಲಿ ದಹನವಾಗಿರಬಹುದು. ಅವರ ಗುರುತು ಹಿಡಿಯಲು ಕಷ್ಟವಾಗುತ್ತಿದೆ ಎಂದು ಸುಡಾನ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿ ತಿಳಿಸಿದೆ.

sudan 3 e1575468830972

ಸುಡಾನ್ ಸರ್ಕಾರ ಸಹ ಈ ಕುರಿತು ಖಚಿತಪಡಿಸಿದ್ದು, ಒಟ್ಟು 23 ಜನ ಸಾವನ್ನಪ್ಪಿದ್ದಾರೆ. 130ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡಿರುವುದೇ ಬೆಂಕಿ ಹೊತ್ತಿಕೊಳ್ಳಲು ಕಾರಣ ಎಂದು ಸುಡಾನ್ ಸರ್ಕಾರ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *