ಪ್ರಭಾಸ್ ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ : ಹೈದರಾಬಾದ್ ಗೆ ವಾಪಸ್

Public TV
2 Min Read
Prabhas

ತೆಲುಗಿನ ಖ್ಯಾತ ನಟ ಪ್ರಭಾಸ್ ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಶಸ್ತ್ರ ಚಿಕಿತ್ಸೆಗಾಗಿ ಅವರು ಇಟಲಿಗೆ (Italy) ಹಾರಿದ್ದರು. ಇದೀಗ ಯಶಸ್ವಿ ಶಸ್ತ್ರ ಚಿಕಿತ್ಸೆ (Surgery) ನೆರವೇರಿದ್ದು, ಚಿಕಿತ್ಸೆ ನಂತರ ಹೈದರಾಬಾದ್ (Hyderabad) ಗೆ ವಾಪಸ್ಸು ಆಗಿದ್ದಾರೆ. ಆತಂಕದಲ್ಲಿದ್ದ ಅವರ ಅಭಿಮಾನಿಗಳು ನೆಚ್ಚಿನ ನಟ ಕಂಡು ಸಂಭ್ರಮಿಸಿದ್ದಾರೆ.

Prabhas 2

ಕನಸಿನ ಸಿನಿಮಾ ರಿಲೀಸ್

ಸಲಾರ್ (Salaar) ಸಿನಿಮಾದ ರಿಲೀಸ್ ಗೆ ದೊಡ್ಡಮಟ್ಟದಲ್ಲೇ ಪ್ಲ್ಯಾನ್ ಮಾಡಲಾಗುತ್ತಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಹೀಗೆ ನಾನಾ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ಮಲಯಾಳಂ ಭಾಷೆಯ ಸಲಾರ್ ಸಿನಿಮಾಗೆ ಪೃಥ್ವಿರಾಜ್  (Prithviraj Sukumaran) ಸಾಥ್ ನೀಡುತ್ತಿದ್ದಾರೆ. ನಿನ್ನೆಯಷ್ಟೇ ಸಿನಿಮಾದ ಪೋಸ್ಟರ್ ವೊಂದನ್ನು ಅವರು ರಿಲೀಸ್ ಮಾಡಿದ್ದಾರೆ.

prabhas with prashanth neel

ಭಾರತೀಯ ಸಿನಿಮಾ ರಂಗ ಡಿಸೆಂಬರ್ ನಲ್ಲಿ ಮೆಗಾ ಕಾಳಗಕ್ಕೆ ಸಾಕ್ಷಿಯಾಗಲಿದೆ. ಚಿತ್ರೋದ್ಯಮದ ಮೂವರು ಭಾರೀ ಬಜೆಟ್ ಚಿತ್ರಗಳು ಬಿಡುಗಡೆ ಆಗುತ್ತಿವೆ. ತೆಲುಗಿನ ಪ್ರಭಾಸ್, ಬಾಲಿವುಡ್ ಶಾರುಖ್ ಖಾನ್ ಮತ್ತು ಮಲಯಾಳಂ ಸಿನಿಮಾ ರಂಗದ ದಿಗ್ಗಜ ಮೋಹನ್ ಲಾಲ್ (Mohanlal) ನಟನೆಯ ಚಿತ್ರಗಳು ಒಂದೇ ದಿನದಲ್ಲಿ ರಿಲೀಸ್ ಆಗುವ ಮೂಲಕ ಭರ್ಜರಿ ಪೈಪೋಟಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮೋಹನ್ ಲಾಲ್ ನಟನೆಯ ನೆರು ಸಿನಿಮಾ ಡಿಸೆಂಬರ್ 21ಕ್ಕೆ ಬಿಡುಗಡೆ ಆಗುತ್ತಿದೆ.

Prabhas 3

ಅಂದುಕೊಂಡಂತೆ ಆಗಿದ್ದರೆ ನಿನ್ನೆಯೇ ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ರಿಲೀಸ್ ಆಗಬೇಕಿತ್ತು. ನಾನಾ ಕಾರಣಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಆದರೆ, ಸಲಾರ್ ಯಾವಾಗ ರಿಲೀಸ್ ಎನ್ನುವುದಕ್ಕೆ ಉತ್ತರ ಸಿಕ್ಕಿದೆ. ಸ್ವತಃ ನಿರ್ಮಾಣ ಸಂಸ್ಥೆಯೇ (Hombale Films)  ಹೊಸ ದಿನಾಂಕವನ್ನು ಘೋಷಣೆ ಮಾಡಿದ್ದು, ಡಿಸೆಂಬರ್ 22 ರಂದು ವಿಶ್ವದಾದ್ಯಂತ ಸಲಾರ್ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ.

prabhas 2 1

ಭಾರತೀಯ ಸಿನಿಮಾ ರಂಗದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಇದೇ ಮೊದಲ ಬಾರಿಗೆ ಶಾರುಖ್ (Shah Rukh Khan) ಚಿತ್ರದ ಎದುರು ವಿಶ್ವಮಟ್ಟದಲ್ಲಿ ಪ್ರಭಾಸ್ ಸಿನಿಮಾ ಎದುರಾಗಿದೆ. ಇಂಥದ್ದೊಂದು ಮಾಹಿತಿಯನ್ನು ಅಧಿಕೃತವಾಗಿ ಚಿತ್ರತಂಡಗಳೇ ಹೇಳಿಕೊಂಡಿವೆ.

 

ಈಗಾಗಲೇ ಶಾರುಖ್ ಖಾನ್ ನಟನೆಯ ಡಂಕಿ (Dunki) ಸಿನಿಮಾವನ್ನು  ಕ್ರಿಸ್ ಮಸ್ ಹಬ್ಬಕ್ಕಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧ ಮಾಡಿಕೊಂಡಿದೆ. 22 ಡಿಸೆಂಬರ್ 2023ರಂದು ಡಂಕಿ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ಚಿತ್ರತಂಡವೇ ಅಧಿಕೃತವಾಗಿ ಘೋಷಣೆ ಮಾಡಿದೆ. ಅಂದೇ ಪ್ರಭಾಸ್ (Prabhas) ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ‘ಸಲಾರ್’ ಚಿತ್ರವನ್ನೂ ಬಿಡುಗಡೆ ಮಾಡಲು ಹೊಂಬಾಳೆ ಫಿಲ್ಮ್ಸ್ ರೆಡಿಯಾಗಿದೆ.

Share This Article