ಆಟವಾಡುವಾಗ ಗುಂಡುಸೂಜಿ ನುಂಗಿದ್ದ ಬಾಲಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

Public TV
1 Min Read
Raichur RIMS Operation

ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಮುಚ್ಚುಳ ಕ್ಯಾಂಪ್‌ನ ಬಾಲಕ ಶಿವಕುಮಾರ್ (13) ಶಾಲೆಯಲ್ಲಿ ಆಟವಾಡುವಾಗ ಸೂಚನಾ ಫಲಕದ ಗುಂಡುಸೂಜಿಯನ್ನು (Pin) ಆಕಸ್ಮಿಕವಾಗಿ ನುಂಗಿದ್ದ. ಗುಂಡುಸೂಜಿ ಬಲ ಶ್ವಾಸಕೋಶದೊಳಗಡೆ ಸೇರಿತ್ತು. ಇದೀಗ ಬ್ರಾಂಕೋಸ್ಕೋಪ್ ಮೂಲಕ ಗುಂಡುಸೂಜಿಯನ್ನು ಹೊರತೆಗೆಯುವಲ್ಲಿ ರಿಮ್ಸ್ (RIMS) ವೈದ್ಯರು (Doctor) ಯಶಸ್ವಿಯಾಗಿದ್ದಾರೆ.

ಚಿಕಿತ್ಸೆಗಾಗಿ ಬಾಲಕನನ್ನು ರಿಮ್ಸ್ ಬೋಧಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾಖಲಾದ ಬಾಲಕನ ಶ್ವಾಸಕೋಶಕ್ಕೆ ಕ್ಷ-ಕಿರಣವನ್ನು ಮಾಡಿಸಿದಾಗ ಬಲ ಶ್ವಾಸಕೋಶದಲ್ಲಿ ಸೂಚನಾ ಫಲಕದ ಗುಂಡುಸೂಜಿ ಇರುವುದು ಖಚಿತಪಡಿಸಿಕೊಂಡು ಬ್ರಾಂಕೋಸ್ಕೋಪ್ ಮೂಲಕ ಗುಂಡು ಸೂಜಿಯನ್ನು ಹೊರತೆಗೆಯಲಾಗಿದ್ದು, ಅಪರೂಪದ ಪ್ರಕರಣದಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಶಸ್ತ್ರಚಿಕಿತ್ಸೆ ಯಶಸ್ವಿಗೊಳಿಸಿದ್ದಕ್ಕೆ ವೈದ್ಯರಿಗೆ ಬಾಲಕನ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಭೋಪಾಲ್‌ ಅನಿಲ ದುರಂತಕ್ಕೆ 39 ವರ್ಷ – ಇನ್ನೂ ಮಾಸಿಲ್ಲ 3,000ಕ್ಕೂ ಹೆಚ್ಚು ಜನರನ್ನ ಬಲಿ ಪಡೆದ ಕಹಿ ನೆನಪು

ಶಸ್ತ್ರಚಿಕಿತ್ಸೆ ತಂಡದಲ್ಲಿ ಇಎನ್‌ಟಿ ನುರಿತ ತಜ್ಞ ವೈದ್ಯ ಡಾ. ಅರವಿಂದ್ ಸಂಗವಿ, ನುರಿತ ಅರವಳಿಕೆ ತಜ್ಞ ವೈದ್ಯ ಡಾ.ಕಿರಣ್ ನಾಯಕ್, ಡಾ.ಮಲ್ಲಿಕಾರ್ಜುನ್ ಕೆ ಪಾಟೀಲ್, ಡಾ. ಸಿಂಧು ಪಿಜಿ, ಡಾ. ಇಂದುಮಣಿ, ನರ್ಸಿಂಗ್ ಅಧಿಕಾರಿ ಅಮರೇಶ್ ಸಕ್ರಿ, ಓಟಿ ತಂತ್ರಜ್ಞರಾದ ಲಿಂಗರಾಜ್, ಸುಮನ್ ಕ್ಲ್ಯಾರಿ, ನಾರಾಯಣ, ಶಂಕರ ಸೇರಿದಂತೆ ಇನ್ನಿತರರು ಇದ್ದರು. ಇದನ್ನೂ ಓದಿ: ಮಾತಾ ಅಲ್ಲದೇ ಚಾಮುಂಡೇಶ್ವರಿ ಆಸ್ಪತ್ರೆಯಲ್ಲೂ ನಡೀತಿತ್ತು ಭ್ರೂಣ ದಂಧೆ- ಹೆಡ್‌ನರ್ಸ್ ಉಷಾರಾಣಿ ಬಂಧನ

Share This Article